ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದ ಅಂತರಗಂಗೆ


Team Udayavani, May 16, 2023, 4:24 PM IST

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದ ಅಂತರಗಂಗೆ

ಮುಳಬಾಗಿಲು: ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಸೀತಾಮಾತೆ ಬೆಟ್ಟದ ತಪ್ಪಲಿನಲ್ಲಿ ಅಂತರಗಂಗೆಯಿ ದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೌಕರ್ಯಗಳ ಸಿಗದೆ ಪುಣ್ಯ ಕ್ಷೇತ್ರವು ಅಭಿವೃದ್ಧಿ ಕಾಣದೇ, ಜನ ಮಾನಸದಿಂದ ದೂರ ಉಳಿದಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಮುಳಬಾಗಿಲು ತಾಲೂಕಿನಲ್ಲಿ ವಿಜಯನಗರ ಅರಸರ ಕಾಲದಿಂದಲೂ ಹೆಸರುವಾಸಿಯಾಗಿದ್ದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ, ಕುರುಡುಮಲೆ ವಿನಾಯಕ ದೇವಾಲಯ ಸೇರಿದಂತೆ ನೂರಾರು ಪುರಾಣ ಪ್ರಸಿದ್ಧ ಕ್ಷೇತ್ರಗಳ ಸಾಲಿಗೆ ಆವಣಿ ಕ್ಷೇತ್ರವೂ ಸೇರಿದೆ. ಇಲ್ಲಿರುವ ರಾಷ್ಟ್ರೀಯ ಸ್ಮಾರಕಗಳ ಸಾಲಿಗೆ ಸೇರಿದ ಶ್ರೀರಾಮಲಿಂಗೇಶ್ವರ ದೇವಾಲಯದ ಅಂಚಿನ ಲ್ಲಿಯೇ ಬೆಟ್ಟವಿದ್ದು ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ. ಅಶ್ವಮೇಧಯಾಗದ ಕುದುರೆ ಯನ್ನು ಕಟ್ಟಿಹಾಕಿದ ಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ, ಸೀತಾಮಾತೆಯು ಜಿಗುಪ್ಸೆಗೊಂಡು ಭೂಗರ್ಭ ಸೇರಿದ ಪ್ರದೇಶ, ಬೆಟ್ಟದ ತಪ್ಪಲಿನಲ್ಲಿ ಶ್ರೀರಾಮಲಕ್ಷ್ಮಣರು ವಾಸವಾಗಿದ್ದ ವೇಳೆ ಅಲ್ಲಿ ಸ್ಥಾಪಿಸಲಾಗಿದ್ದ ಪಂಚಲಿಂಗಗಳು, ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದ ಸ್ಥಳ ಇಲ್ಲಿನನ ಐತಿಹ್ಯಗಳಾಗಿದೆ.

ಅಂತರಗಂಗೆಯಲ್ಲಿ ವರ್ಷವಿಡೀ ನೀರು: ಆವಣಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ದ ಸೀತಾಮಾತೆ ಬೆಟ್ಟದ ತಪ್ಪಲಿನ ದಕ್ಷಿಣ ಭಾಗಕ್ಕಿರುವ ಶಿವಲಿಂಗಗಳ ಕೆಲವೇ ಅಡಿಗಳ ದೂರಲ್ಲಿ ಶ್ರೀಗಂಗಾಧರೇಶ್ವರ ದೇಗುಲವಿದ್ದು, ದೇಗುಲ ಪಕ್ಕದಲ್ಲಿಯೇ ಶ್ರೀನರ ಸಿಂಹಸ್ವಾಮಿಯ ದೇಗುಲವಿದೆ. ಪ್ರತಿವರ್ಷ ಯುಗಾ ದಿಯ ಹಬ್ಬದಂದು ನರಸಿಂಹಸ್ವಾಮಿ ದೇಗುಲದಲ್ಲಿ ನಡೆಯುವ ವಿಶಿಷ್ಟವಾದ ಪೂಜಾ ಕಾರ್ಯಕ್ರಮಗಳು ನೋಡುಗರ ಮೈನವಿರೇಳುವಂತಿರುತ್ತದೆ. ಅದರ ಅಂಚಿನಲ್ಲಿಯೇ ಅತ್ಯಂತ ಮಹತ್ವವಾದ 10×10 ಅಡಿ ಅಗಲದ ವಿಸ್ತೀರ್ಣದಲ್ಲಿ ಅಂತರಗಂಗೆ ಇದೆ. ಕೋಲಾರದ ಅಂತರಗಂಗೆಯಂತೆಯೇ ಇಲ್ಲಿಯೂ ಸಹ ವರ್ಷವಿಡೀ ಬಸವಣ್ಣನ ಹೊಕ್ಕಳಿನಲ್ಲಿ ನೀರು ಬರುತ್ತಿರುತ್ತದೆ. ಈ ನೀರು ಕುಡಿಯಲು ಅತ್ಯುತ್ತಮ ವಾಗಿದ್ದು, ಇದರ ಸುತ್ತಮುತ್ತಲೂ ವಾಸವಾಗಿರುವ 25-30 ದಲಿತ ಕುಟುಂಬಗಳಿಗೆ ಅಂತರಗಂಗೆಯ ನೀರೇ ಜೀವನಾಧಾರ ಎನ್ನಲಾಗಿದೆ.

ಅಭಿವೃದ್ಧಿಗೆ ಮುಂದಾಗದ ಇಲಾಖೆಗಳು: ಪ್ರತಿ ವರ್ಷ ಶಿವರಾತ್ರಿ ಮರು ದಿನ ನಡೆಯುವ ಆವಣಿ ಶ್ರೀಕಾಮಾಕ್ಷಿದೇವಿ ಸಮೇತ ಪ್ರಸನ್ನರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಲಕ್ಷಾಂತರ ಜನರು ಭೇಟಿ ನೀಡು ತ್ತಾರೆ. ಸರ್ಕಾರಕ್ಕೆ ಸಾಕಷ್ಟು ಆದಾಯ ಜಮಾ ಆಗುತ್ತಿದ್ದರೂ, ಗಿಡ ಗಂಟೆಗಳ ನಡುವೆ ಅಂತರಗಂಗೆ ಮಾತ್ರ ಕುಂಟೆಯಂತಾಗಿದೆ. ಅಲ್ಲಿಗೆ ಹೋಗಲು ಮಟ್ಟಿಲುಗಳೇ ಇಲ್ಲದಾಗಿದ್ದು, ಅಂತರಗಂಗೆಯನ್ನು ಯಾವೊಂದು ಇ ಲಾಖೆಗಳು ಅಭಿವೃದ್ಧಿ ಮಾಡಲು ಮುಂದಾಗಿಲ್ಲ. ತಾ ಲೂಕಿನ ಅತ್ಯಂತ ಹೆಮ್ಮೆಯ ಸ್ಥಳವಾದ ಅಂತರ ಗಂಗೆ ಯು ಅಭಿವೃದ್ಧಿಯಿಂದ ದೂರವಾಗಿಯೇ ಉಳಿದಿದೆ.

ಅಂತರಗಂಗೆ ಪುನರ್‌ ನಿರ್ಮಾಣಕ್ಕೆ ಒತ್ತಾಯ: ಈ ಅಂತರಗಂಗೆ ಪುಣ್ಯ ಕ್ಷೇತ್ರವು ಜನಪ್ರತಿನಿಧಿ ಗಳ ನಿರ್ಲಕ್ಷ್ಯದಿಂದ ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಅಭಿವೃದ್ಧಿಯಾಗದೇ ಜನ ಮಾನಸದಿಂದ ದೂರ ಉಳಿದಿದೆ. ಅಂತರಗಂಗೆ ಯನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಮುಖಂಡರಾದ ಆವಣಿ ಕಾಶಿ, ಪ್ರಾಶ್ಚ್ಯ ವಸ್ತು ಇಲಾಖೆ ಮತ್ತು ಮುಜರಾಯಿ ಅಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.

ಆವಣಿ ಕ್ಷೇತ್ರದಲ್ಲಿರುವ ಅತ್ಯಂತ ಮಹತ್ವವಾದ ಅಂತರಗಂಗೆಯ ಅಭಿವೃದ್ಧಿಯ ಕುರಿತಂತೆ, ಬೆಟ್ಟದ ಪ್ರದೇಶವು ಪ್ರಾಶ್ಚ್ಯ ವಸ್ತು ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆಗೆ ಪತ್ರ ಬರೆಯಲಾಗುವುದು. ವೈ.ರವಿ, ತಹಶೀಲ್ದಾರ್‌

ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.