ಸಂವಿಧಾನ ರಕ್ಷಿಸಿದ ಪ್ರಕರಣಕ್ಕೆ ಸುವರ್ಣ ಮಹೋತ್ಸವ


Team Udayavani, May 17, 2023, 7:56 AM IST

KESHVANANDA BHARATI CASE

ಭಾರತದ ಸಂವಿಧಾನ ಮತ್ತು ನ್ಯಾಯಾಂಗದ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿರುವ ಪ್ರಕರಣಗಳಲ್ಲಿ ಕೇಶವಾನಂದ ಭಾರತೀ ಪ್ರಕರಣ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಕಾಲದಲ್ಲಿ ಮಾತ್ರವಲ್ಲ ಈಗಲೂ ಕೇಶವಾನಂದ ಪ್ರಸ್ತಾವವಿಲ್ಲದ ಕಾನೂನಿನ ಪುಸ್ತಕ, ಲೇಖನ ಇತ್ಯಾದಿ ಪೂರ್ಣ ವಾಗುವುದಿಲ್ಲ. ಇದಕ್ಕೆ ಕಾರಣ ಕೇಶವಾನಂದ ಪ್ರಕರಣದ ವಿಷಯ, ಅದರ ವಿಚಾರಣೆ ನಡೆದ ಮಾದರಿ ಹಾಗೂ ಮುಖ್ಯ ವಾಗಿ ತೀರ್ಪು ಹೊರಬಂದ ಅನಂತರದ ಘಟನೆಗಳು. ರಾಜಕೀಯವಾಗಿಯೂ ವಿವಾದಕ್ಕೆ ಒಳಗಾದ ಪ್ರಕರಣವಿದು.

ಐವತ್ತು ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಕೇಶವಾನಂದ ಪ್ರಕರಣದಲ್ಲಿ ತೀರ್ಪು ನೀಡುವ ಮೂಲಕ ತನ್ನನ್ನು ಹಾಗೂ ಸಂವಿಧಾನವನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಿಕೊಂಡಿದ್ದರಿಂದ ಮಹತ್ವ ಪಡೆದುಕೊಂಡಿದೆ. ಜತಗೆ ಈ ಪ್ರಕರಣ ಸಂವಿಧಾನ ಮೂಲ ಸಂರಚನೆ ಎಂಬ ಹೊಸ ಪರಿಕ ಲ್ಪನೆಯ್ನು ಹುಟ್ಟುಹಾಕಿತು. ಕೇಶವಾನಂದ ಬಗ್ಗೆ ನೂರಾರು ಲೇಖನಗಳಲ್ಲದೆ ಪ್ರಕರಣದ ಬಗ್ಗೆ ಒಂದು ಪುಸ್ತಕ ಪ್ರಕಟವಾಗಿರುವುದು ಈ ಪ್ರಕರಣದ ಮಹತ್ವವನ್ನು ಸೂಚಿಸುತ್ತದೆ. ಸಂವಿಧಾನ ತಿದ್ದಲಾಗುತ್ತಿದೆ ಅಥವಾ ತಿರುಚುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಇವತ್ತಿನ ಸಂದರ್ಭದಲ್ಲಿ ಕೇಶವಾನಂದ ಭಾರತೀ ಪ್ರಕರಣದ ಮರು ಅವಲೋಕನ ಅಗತ್ಯವೆಂದು ತೋರುತ್ತದೆ.

ಅರವತ್ತರ ದಶಕದಲ್ಲಿ ಕೇರಳ ರಾಜ್ಯ ಸರಕಾರ ಹೊರಡಿಸಿದ ಭೂಸುಧಾರಣ ಅಧಿನಿಯಮವನ್ನು ಸಂವಿಧಾನ ಪರಿಚ್ಛೇದ ಒಂಬತ್ತರಲ್ಲಿ ಸೇರಿಸಿದ ಕಾರಣ ಯಾವುದೇ ನ್ಯಾಯಾಲಯ ಈ ಅಧಿನಿಯಮವನ್ನು ಪ್ರಶ್ನಿಸುವಂತಿರಲಿಲ್ಲ. ಕಾಸರಗೋಡಿನ ಎಡನೀರು ಮಠದ ಭೂಮಿಯನ್ನು ವಶಪಡಿಸಿಕೊಳ್ಳಲು ರಾಜ್ಯ ಸರಕಾರ ಮುಂದಾದಾಗ ಮಠದ ಮುಖ್ಯಸ್ಥರಾಗಿದ್ದ ಶ್ರೀ ಕೇಶವಾನಂದ ಭಾರತೀಗಳವರು ಭೂಸುಧಾರಣ ಅಧಿನಿಯಮ ಮತ್ತು ಅದಕ್ಕೆ ಮಾಡಿರುವ ತಿದ್ದುಪಡಿಗಳು ಸಂವಿಧಾನಾತ್ಮಕವಲ್ಲ ಎಂದು ಅದನ್ನು ರದ್ದುಗೊಳಿಸಬೇಕೆಂದು ಕೋರಿ ರಿಟ್‌ ಅರ್ಜಿ ಸಲ್ಲಿಸಿದರು. ಭೂಸುಧಾರಣಾ ಅಧಿನಿಯಮವು ಸಂವಿಧಾನ ಪ್ರಜೆಗಳಿಗೆೆ ನೀಡಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ವಾದವನ್ನು ಮಂಡಿಸಿದರು. ಆಸ್ತಿ ಖರೀದಿಸುವುದು ಮತ್ತು ಅದನ್ನು ನಿರ್ವಹಿಸುವುದು ಭಾರತೀಯ ನಾಗರಿಕರ ಮೂಲಭೂತ ಹಕ್ಕು ಎಂಬುದು ಕೇಶವಾನಂದರ ವಾದವಾಗಿತ್ತು. ಇತ್ತ, ಕೇರಳ ಸರಕಾರವು ತನ್ನ ವಾದವನ್ನು ಮಂಡಿಸುತ್ತಾ ಸಂವಿ ಧಾನದ ಪ್ರಸ್ತಾವನೆಯಲ್ಲಿರುವ ಉದ್ದೇಶಗಳನ್ನು ಈಡೇರಿಸಲು ಅವಶ್ಯವಿದ್ದಲ್ಲಿ ಸಂವಿಧಾನ ತಿದ್ದುಪಡಿ ಮಾಡಬೇಕಾ ಗುತ್ತದೆ. ಆದ್ದರಿಂದ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇರಬೇಕೆಂದು ತನ್ನ ವಾದ ಮಂಡಿಸಿತು.

ಭೂಸುಧಾರಣೆ ಹೆಸರಿನಲ್ಲಿ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವುದು ಸಂವಿಧಾನಾತ್ಮಕವೇ ಎಂಬುದು ಈ ಪ್ರಕರಣದ ಮುಖ್ಯ ವಿಷಯವಾಗಿದ್ದರೂ, ವಿಚಾರಣೆ ಆರಂಭವಾಗುತ್ತಿದ್ದಂತೆ ಅದರ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಯಿತು. ಸಂವಿಧಾನ ತಿದ್ದುಪಡಿ ಮಾಡಲು ಸಂಸತ್ತಿಗೆ ಸಂಪೂರ್ಣ ಅಧಿಕಾರ ಇದಿಯೇ? ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಬಹುದೇ? ಸಂವಿಧಾನ ಪ್ರಜೆಗಳಿಗೆ ನೀಡುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಬಹುದೇ? ಇವೇ ಮುಂತಾದ ಪ್ರಶ್ನೆಗಳಿಗೆ ನ್ಯಾಯಾಲಯ ಉತ್ತರಿಸಬೇಕಿತ್ತು.

ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಸರ್ವೋಚ್ಚ ನ್ಯಾಯಾಲಯ ಹದಿಮೂರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವನ್ನು ರಚಿಸಿತು. ಭಾರತದ ನ್ಯಾಯಾಂಗದ ಚರಿತ್ರೆಯಲ್ಲಿ ಇಷ್ಟು ಬೃಹತ್‌ ಸಂಖ್ಯೆಯ ನ್ಯಾಯಪೀಠ ಮತ್ತೂಂ ದಿಲ್ಲ. ಪ್ರಕರಣದ ವಿಚಾರಣೆ 1972ರ ಅಕ್ಟೋಬರ್‌ 31ರಂದು ಆರಂಭವಾಗಿ ಅರವತ್ತಾರು ದಿನ ಮುಂದುವರಿಯಿತು. ಸಂವಿಧಾ ನ ತಿದ್ದುಪಡಿ ಮಾಡುವುದಕ್ಕೆ ಸಂಸತ್ತಿಗೆ ಅಧಿಕಾರವಿದೆ. ಆದರೆ ತಿದ್ದುಪಡಿಯು ಸಂವಿಧಾನದ ಮೂಲ ಸಂರಚನೆಗೆ ವಿರುದ್ಧ ವಾಗಿರಬಾರದು ಎಂಬುದು ಕೇಶವಾನಂದ ಪ್ರಕರಣದ ಮುಖ್ಯ ಸಾರಾಂಶ. ನ್ಯಾಯಾಲಯ ಸಂವಿಧಾನದ ಮೂಲ ಸಂರಚನ ಬಗ್ಗೆ ಪ್ರಸ್ತಾವಿಸಿದರೂ ಅದನ್ನು ಸ್ಪಷ್ಟೀಕರಿಸಲಿಲ್ಲ. ಸಂವಿಧಾನದ ಸರ್ವೋಚ್ಚತೆ, ಪ್ರಜಾಸತ್ತಾತ್ಮಕ ಮತ್ತು ಗಣ ರಾಜ್ಯಾತ್ಮಕ ಮಾದರಿ ಸರಕಾರ ಮತ್ತು ರಾಷ್ಟ್ರದ ಸಾರ್ವಭೌಮತ್ವ, ಸಂವಿಧಾನದ ಒಕ್ಕೂಟ ಮತ್ತು ಧರ್ಮ ನಿರಪೇಕ್ಷ ಗುಣಗಳು, ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಅಧಿಕಾರದ ಪ್ರತ್ಯೇಕತೆ ಸೀಮಾನಿರ್ಣಯ ಮುಂತಾದವುಗಳನ್ನು ಸಂವಿಧಾನದ ಮೂಲ ಸಂರಚನೆಯ ಕೆಲವು ಅಂಶಗಳೆಂದು ಭಾವಿಸಬಹುದು ಎಂದು ನ್ಯಾಯಾಲಯ ಸೂಚಿಸಿತು. ಸಂವಿ ಧಾನ ತಿದ್ದುಪಡಿ ಮಾಡು ವುದು ಒಂದು ಸಂವಿಧಾನಾತ್ಮಕ ಅಧಿಕಾರ ಎಂದು ಹೇಳಿದ ನ್ಯಾಯಾಲಯ, ರಾಜ್ಯನೀತಿಯ ನಿರ್ದೇಶಕ ತತ್ವಗಳನ್ನು ಅನುಷ್ಠಾ ನಗೊಳಿಸುವ ವಿಷಯದಲ್ಲಿ ಮಾಡುವ ಕಾನೂನುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸ ಬಹುದಾಗಿದೆ ಎಂದೂ ಹೇಳಿದೆ.

ಕೇಶವಾನಂದ ಪ್ರಕರಣದಲ್ಲಿ ವಾದ-ಪ್ರತಿವಾದ ಮಾಡಿದವ ರಲ್ಲಿ ಭಾರತ ಕಂಡ ಶ್ರೇಷ್ಠ ವಕೀಲರು ಪಾಲ್ಗೊಂಡಿದ್ದರು. ಕೇಶವಾ ನಂದ ಭಾರತೀ ಪರ ನಾನಿ ಫಾಲ್ಕಿವಾಲ ಅವರಿಗೆ ಸೋಲಿ ಸೊರಾಬ್ಜಿ ಮತ್ತು ಅನಿಲ್‌ ದಾವನ್‌ ಸಹಕರಿಸಿದರೆ, ಸರಕಾರದ ಪರ ಎಚ್‌.ಎಮ್‌.ಸೀರ್‌ವಾಯ್‌ ವಾದ ಮಾಡಿದರು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಸೀರ್‌ವಾಯ್‌ ಅವರೊಡನೆ ಇದ್ದವರಲ್ಲಿ ಡಾ| ಎಲ್‌.ಎಮ್‌.ಸಿಂಘ್ವಿ ಮತ್ತು ಈ ಪ್ರಕರಣದ ಬಗ್ಗೆ 150 ಪುಟಗಳ ಪುಸ್ತಕ ಬರೆದಿರುವ ಆಂದ್ಯರುಜಿನ. ನಾನಿ ಫಾಲ್ಕಿವಾಲ ಸತತವಾಗಿ ಒಂಬತ್ತು ಗಂಟೆಗಳ ಕಾಲ ತಮ್ಮ ವಾದ ಮಂಡಿಸಿದ್ದು ಒಂದು ದಾಖಲೆ. ನಾನಿ ಅವರ ದೃಷ್ಟಿಯಲ್ಲಿ ಸಂವಿಧಾನಕ್ಕೆ ಜೀವ ವಿತ್ತು. ಅದನ್ನು ಅನಾವಶ್ಯಕವಾಗಿ ತಿದ್ದುಪಡಿ ಮಾಡಿದರೆ ಅದರಿಂದ ರಕ್ತಸ್ರಾವವಾಗುತ್ತದೆ ಎಂಬಷ್ಟು ನಂಬಿಕೆ ಉಳ್ಳವರಾಗಿದ್ದರು.

ಈ ಪ್ರಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲ ಪತ್ರಿಕೆಗಳಲ್ಲಿ ಶ್ರೀ ಕೇಶವಾನಂದ ಭಾರತೀ ಎಂಬ ಹೆಸರು ಪ್ರಸ್ತಾವವಾಗುತ್ತಿ ದ್ದುದನ್ನು ಗಮನಿಸಿದ ಶ್ರೀ ಕೇಶವಾನಂದ ಅವರಿಗೆ ಆಶ್ಚರ್ಯ ವಾಗುತ್ತಿತ್ತು. ಅವರ ಪರ ವಾದ ಮಾಡುತ್ತಿದ್ದ ನಾನಿ ಫಾಲ್ಕಿವಾಲ ಅವರನ್ನು ಭೇಟಿ ಮಾಡಲೇ ಇಲ್ಲ. ಬಹುಶ: ಒಬ್ಬ ವಕೀಲ ಮತ್ತು ಕಕ್ಷಿದಾರ ಪರಸ್ಪರ ಭೇಟಿಯಾಗದ ಪ್ರಕರಣ ಇದೇ ಮೊದಲು ಹಾಗೂ ಕೊನೆಯದೆಂದು ಕಾಣುತ್ತದೆ. ಕೇರಳದ ಅಧಿನಿಯಮದ ಪರಿಣಾಮ ಅಪಾರವಾದ ಭೂಸಂಪತ್ತನ್ನು ಕಳೆದುಕೊಂಡಿದ್ದರೂ ಅವರು ಅದಕ್ಕೆ ಯಾರನ್ನೂ ದ್ವೇಶಿಸಲಿಲ್ಲ. ಅವರು ಸೆಪ್ಟಂಬರ್‌ 2020ರಲ್ಲಿ ವಿಧಿವಶವಾದರು.

ಪ್ರಕರಣದ ತೀರ್ಪಿಗಿಂತ ತೀರ್ಪು ಹೊರಬಂದ ಅನಂತರದ ಘಟನೆಗಳು ಮತ್ತಷ್ಟು ಕುತೂಹಲಕಾರಿ. ತೀರ್ಪು ನೀಡಿದ ದಿನವೇ ಭಾರತದ ಮುಖ್ಯ ನ್ಯಾಯಾಧೀಶ ನಾ| ಸಿಕ್ರಿ ನಿವೃತ್ತಿ ಹೊಂದಿದರು. ಸರಕಾರದ ವಿರುದ್ದ‌ ತೀರ್ಪು ನೀಡಿದ್ದ ಮೂವರು ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಅವಗಣಿಸಿ ಸರಕಾರದ ಪರ ತೀರ್ಪು ನೀಡಿದ್ದ ಕಿರಿಯ ನ್ಯಾಯಾಧೀಶರಾದ ಜಸ್ಟೀಸ್‌ ಎ.ಎನ್‌.ರೇ ಅವರನ್ನು ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು. ಈ ಬೆಳವಣಿಗೆಯಿಂದ ಬೇಸರಗೊಂಡ ಮೂವರು ನ್ಯಾಯಾಧೀಶರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಿರಿಯ ನ್ಯಾಯಾಧೀಶರನ್ನು ಅವಗಣಿಸಿದ್ದನ್ನು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಶ‌ನ್‌ ತೀವ್ರವಾಗಿ ಖಂಡಿಸಿತು. ಅರ್ಜಿದಾರರ ಪರ ವಕೀಲರಾಗಿದ್ದ ಎಮ್‌.ಸಿ.ಚಾಗ್ಲಾ ಅವರು ಇದು ನಮ್ಮ ಬದುಕಿನಲ್ಲಿ ಒಂದು ಕರಾಳ ದಿನ. ನಾವು ಯಾವ ತತ್ವಗಳಿಗೆ ಹೋರಾಡುತ್ತಿದ್ದೇವೋ ಅದು ಕಣ್ಮರೆಯಾ ಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಫಾಲ್ಕಿವಾಲ ಅವರು ಬಾಂಬೆ ಹೈಕೋರ್ಟ್‌ ಬಾರ್‌ ಅಸೋಸಿ ಯೇಶನ್‌ ಉದ್ದೇಶಿಸಿ ಭಾಷಣ ಮಾಡುತ್ತಾ, ಬಾಂಬೆ ಹೈಕೋರ್ಟ್‌ ಅನ್ನು ಅಂದು ಮುಚ್ಚಬೇಕೆಂದು ಕೇಳಿಕೊಂಡರು. ದೇಶದ ಇತರೆ ಕೊರ್ಟ್‌ಗಳಲ್ಲಿ ಸಹ ಪ್ರತಿಭಟನೆಗಳು ನಡೆದವು. ಜಸ್ಟೀಸ್‌ ಎ.ಎನ್‌.ರೇ ಅವರ ನೇಮಕದ ಬಗ್ಗೆ ನಿವೃತ್ತ ಮುಖ್ಯ ನ್ಯಾಯಾಧೀಶ ಹಿದಾಯುತ್ತುಲ್ಲಾ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಸರಕಾರ ಮಾತ್ರ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.

ಎರಡು ವರ್ಷಗಳ ಅನಂತರ 1975ರಲ್ಲಿ ಸರಕಾರ ಹದಿ ಮೂರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವನ್ನು ರಚಿಸಿ ಕೇಶವಾನಂದ ಪ್ರಕರಣದ ತೀರ್ಪನ್ನು ಬದಲಿಸಲು ಪ್ರಯ ತ್ನಿಸಿದರೂ ಅದು ಫ‌ಲಕಾರಿಯಾಗಲಿಲ್ಲ. ಆ ಹೊತ್ತಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಸರಕಾರ ಸಂವಿಧಾನ 42ನೇ ತಿದ್ದುಪಡಿ ಅಧಿನಿಯಮ ಹೊರಡಿಸಿತು. ಈ ತಿದ್ದುಪಡಿ ಮುಖಾಂತರ ಕೇಶವಾನಂದ ಪ್ರಕರಣದ ತೀರ್ಪನ್ನು ಅಕೃತಗೊಳಿ ಸಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾ ರವನ್ನು ಸರಕಾರ ಪಡೆದುಕೊಂಡಿತು. ಅಲ್ಲದೆ ಸಂವಿಧಾನಕ್ಕೆ ಮಾಡುವ ಯಾವುದೇ ತಿದ್ದುಪಡಿಯನ್ನು ನ್ಯಾಯಾಲಯದಲ್ಲಿ ಪುನರ್‌ ವಿಮರ್ಶೆಗೆ ಒಳಪಡಿಸಲು ಅವಕಾಶವಿರಲಿಲ್ಲ. ಮೂರು ವರ್ಷದ ಬಳಿಕ 1980ರಲ್ಲಿ ಮತ್ತೂಂದು ಮಹತ್ವದ ಪ್ರಕರಣ ಮಿನರ್ವ ಮಿಲ್ಸ್‌ದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್‌ ವೈ.ವಿ. ಚಂದ್ರಚೂಡ್‌ ಸಂವಿಧಾನ 42ನೇ ತಿದ್ದುಪಡಿ ಅಧಿನಿಯಮ ಅಸಿಂಧು ಎಂದು ತೀರ್ಮಾನಿಸಿದರು. ಇದರ ಫ‌ಲವಾಗಿ ಸಂವಿ ಧಾನ ಮೂಲ ಸಂರಚನೆಗೆ ಧಕ್ಕೆ ತರುವ ಯಾವುದೆ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿಲ್ಲ ಎಂಬ ತತ್ವ ಮತ್ತೂಮ್ಮೆ ಸ್ಥಾಪಿತವಾಯಿತು.

~ ವೈ.ಜಿ.ಮುರಳೀಧರನ್‌

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.