ಪ್ರಾದೇಶಿಕ ಪಕ್ಷಗಳಲ್ಲಿ DMKಗೆ ಹೆಚ್ಚಿನ ಆದಾಯ
Team Udayavani, May 17, 2023, 7:29 AM IST
ಹೊಸದಿಲ್ಲಿ: ದೇಶದಲ್ಲಿ ಇರುವ 27 ಪ್ರಾದೇಶಿಕ ಪಕ್ಷಗಳಿಗೆ 2021-22ನೇ ಸಾಲಿನಲ್ಲಿ 1,165 ಕೋಟಿ ರೂ. ಆದಾಯ ಬಂದಿದೆ. ಎಲೆಕ್ಟೋರಲ್ ಬಾಂಡ್ಗಳ ಮೂಲಕ ದೇಣಿಗೆ ಸಲ್ಲಿಕೆಯಾಗಿದ್ದು, ಅವು ಗಳ ಮೂಲ ಶೇ.76ರಷ್ಟು ಅನಾಮಧೇಯವಾಗಿದೆ ಎಂದು ಎಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ (ಎಡಿಆರ್) ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಈ ಪೈಕಿ ಡಿಎಂಕೆಗೆ 302.06 ಕೋಟಿ (ಮೊದಲ ಸ್ಥಾನ), ಬಿಜು ಜನತಾದಳ 291. 09 ಕೋಟಿ ( ದ್ವಿತೀಯ), ಟಿಆರ್ಎಸ್ (ಈಗ ಬಿಆರ್ಎಸ್)ಗೆ 153.03 ಕೋಟಿ (ತೃತೀಯ), ವೈಎಸ್ಆರ್ ಕಾಂಗ್ರೆಸ್ಗೆ 60.01 ಕೋಟಿ ರೂ., ಜೆಡಿಯುಗೆ 48.36 ಕೋಟಿ ರೂ. ದೇಣಿಗೆ ಲಭಿಸಿದೆ. ಪ್ರಾದೇಶಿಕ ಪಕ್ಷಗಳಿಗೆ ಸಿಕ್ಕಿರುವ 1,165 ಕೋಟಿ ರೂ ಮೊತ್ತದ ಪೈಕಿ 145.42 ಕೋಟಿ ರೂ. ಮೊತ್ತ ಮಾತ್ರ ದೃಢ ಪಟ್ಟ ಆದಾಯ ಮೂಲಗಳಿಂದ ಬಂದಿದೆ. ಬ್ಯಾಂಕ್ನಲ್ಲಿ ಇರುವ ಠೇವಣಿಯಿಂದ ಬಂದ ಆದಾಯ, ಸದಸ್ಯತ್ವ ಶುಲ್ಕ, ಮಾಹಿತಿ ಪುಸ್ತಿಕೆ ಗಳ ಮಾರಾಟದಿಂದಲೂ ಆದಾಯ ಬಂದಿದೆ. ಅನಾಮಧೇಯ ಮೂಲಗಳು ಎಂದರೆ ಎಲೆಕ್ಟೋರಲ್ ಬಾಂಡ್ಗಳ ಮಾರಾಟದಿಂದಲೇ 827.76 ಕೋಟಿ ರೂ. ಅಂದರೆ ಶೇ,93.26. ಆಗಿದೆ ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2020-21ನೇ ಸಾಲಿನಲ್ಲಿ 530. 70 ಕೋಟಿ ರೂ. ಆದಾಯ ಪಕ್ಷಗಳಿಗೆ ಬಂದಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.