Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ
35ರಿಂದ 40 ದಿನಗಳಲ್ಲಿ ಒಟ್ಟು ಮೂರು ಬಾರಿ ಮೆಣಸಿನಕಾಯಿ ಕತ್ತರಿಸಲಾಗುತ್ತದೆ.
Team Udayavani, May 17, 2023, 3:02 PM IST
ಬೆಳಗಾವಿ: ಸಿಎ (ಚಾರ್ಟೆರ್ಡ್ ಅಕೌಂಟ್) ಮಾಡಿ ನೌಕರಿ ಹಿಡಿಯಬೇಕಿದ್ದ ಯುವತಿ ತಂದೆಯ ಸಾವಿನಿಂದಾಗಿ ಅರ್ಧಕ್ಕೆ ಓದು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡು ಒಂದು ಎಕರೆ ಜಮೀನಿನಲ್ಲಿ ತಿಂಗಳಿಗೆ ಲಕ್ಷ ಲಕ್ಷ ಆದಾಯ
ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಈ ಯುವತಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ.
ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ 26 ವರ್ಷದ ನಿಕಿತಾ ವೈಜು ಪಾಟೀಲ ಎಂಬ ಯುವತಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಒಂದು ಎಕರೆ ಜಮೀನಿನಲ್ಲಿ ಮೆಣಸಿಕಾಯಿ ಬೆಳೆದು ತಿಂಗಳಿಗೆ 5ರಿಂದ 6 ಲಕ್ಷ ರೂ. ಗಳಿಸುತ್ತಿದ್ದಾಳೆ. ಯುವತಿಯ ಈ ಸಾಧನೆಗೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ.
ಹೊಲದಲ್ಲಿ ಮನಸ್ಸು ಕೊಟ್ಟು ದುಡಿದರೆ ಭೂಮಿ ನಮ್ಮ ಕೈ ಬಿಡುವುದಿಲ್ಲ ಎಂದು ನಂಬಿರುವ ನಿಕಿತಾ ಮಾದರಿಯಾಗಿದ್ದಾಳೆ. ಇಂದಿನ ದಿನಮಾನದಲ್ಲಿ ಕೃಷಿ ಎಂದರೆ ಮೂಗು ಮುರಿಯುವ ಜನರಿಗೆ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಲ್ಲೂ ಸಿಗಲಾರದಷ್ಟು ಆದಾಯ ಯುವತಿ ನಿಕಿತಾ ಗಳಿಸುತ್ತಿದ್ದಾಳೆ.
ಚಿಂತೆಗೀಡಾಗಿದ್ದ ಕುಟುಂಬಕ್ಕೆ ಆಸರೆ: ಕಳೆದ ವರ್ಷ ಯುವತಿ ನಿಕಿತಾಳ ತಂದೆ ವೈಜು ಪಾಟೀಲ ಸ್ವಂತ ಹೊಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆ ನಡೆಸುತ್ತಿದ್ದ ಯಜಮಾನನೇ ಇಲ್ಲವಾದಾಗ ಇಡೀ ಕುಟುಂಬ ದಿಗ್ಭ್ರಾಂತಗೊಂಡು ಏನೂ ತೋಚದೇ ತಲೆಗೆ ಕೈಹಚ್ಚಿ ಕುಳಿತುಕೊಂಡಿತು.
ನಾಲ್ಕು ಎಕರೆ ಜಮೀನಿದ್ದರೂ ಅದನ್ನು ಮಾಡುವವರು ಯಾರು ಎಂಬ ಪ್ರಶ್ನೆ ಕಾಡತೊಡಗಿತು. ನಿಕಿತಾ ಪಾಟೀಲ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿ ಭರತೇಶ ಕಾಲೇಜಿನಲ್ಲಿ ಸಿ.ಎ(ಚಾರ್ಟೆರ್ಡ್ ಅಕೌಂಟೆಂಟ್) ತರಬೇತಿಗೆ ಪ್ರವೇಶ ಪಡೆದಿದ್ದಳು. ದ್ವಿತೀಯ ವರ್ಷ ಸಿ.ಎ ಓದುತ್ತಿದ್ದಾಗಲೇ ತಂದೆ ವೈಜು ಸಾವಿಗೀಡಾದರು.
ಇನ್ನು ಸಿ.ಎ ಪೂರ್ಣಗೊಳಿಸಿ ಮುಗಿಸಿ ಬೆಂಗಳೂರು ಅಥವಾ ಪುಣೆಯಲ್ಲಿ ನೌಕರು ಮಾಡುವ ಮಹದಾಸೆ ಹೊಂದಿದ್ದಳು. ತಂದೆಯ ಸಾವು ನಿಕಿತಾಳ ಜೀವನದಲ್ಲಿ ಅತಿ ದೊಡ್ಡ ದುರಂತವಾಯಿತು. ಕೃಷಿ ಮಾಡಿ ನಿಕಿತಾಳನ್ನು ತಂದೆ ಓದಿಸಿದ್ದರು. ಇನ್ನು ಕುಟುಂಬ ನಡೆಯುವುದಾದರೂ ಹೇಗೆ ಎಂದು ನಿಕಿತಾ ಚಿಂತೆಗೀಡಾದಳು.
ವಯಸ್ಸಾದ ತಾಯಿ ಅಂಜನಾ ಪಾಟೀಲ, ಹಿರಿಯ ಸಹೋದರ ಅಭಿಷೇಕಗೆ ಕೃಷಿ ಮಾಡುವುದು ಆಗದ ಮಾತು ಎಂದು ಅರಿತ ನಿಕಿತಾ ತಂದೆ ತೀರಿ ಹೋದ ಆರೇ ತಿಂಗಳಲ್ಲಿ ಸಿ.ಎ. ಓದನ್ನು ಅರ್ಧಕ್ಕೆ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಳು. ಆಗ ನಿಕಿತಾಳ ನಿರ್ಧಾರದಿಂದ ಕುಟುಂಬ ಆಶ್ಚರ್ಯಗೊಂಡಿತು. ವಯಸ್ಸಿಗೆ ಬಂದ ಮಗಳು ಕೃಷಿಯಲ್ಲಿ ತೊಡಗಿಕೊಂಡರೆ ಹೇಗೆ ಎಂದು ಚಿಂತಿತರಾದರು. ಆಗ ತಾಯಿ ಹಾಗೂ ಅಣ್ಣನ ಮನವೊಲಿಸಿದ ನಿಕಿತಾ ಸಿ.ಎ. ಓದುವುದನ್ನು ಬಿಟ್ಟು ಕೃಷಿಕಳಾದಳು.
ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ: ಚಿಕ್ಕಂದಿನಿಂದಲೂ ನಿಕಿತಾಗೆ ಕೃಷಿಯಲ್ಲಿ ಬಹಳ ಆಸಕ್ತಿ. ಹೀಗಾಗಿ ತಂದೆಯ 4 ಎಕರೆ ಜಮೀನಿನಲ್ಲಿ ಮೊದಲಿಗೆ ಒಂದು ಎಕರೆಯಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿಕಾಯಿಯನ್ನು ಮೂರು
ಭಾಗಗಳಾಗಿ ಹಚ್ಚಿದಳು. ಗಿಡಗಳನ್ನು ಹಚ್ಚುವಾಗ ಅಂತರ ಹೆಚ್ಚಿಸಿಕೊಂಡು ಪೈಪ್ ಮೂಲಕ ಹನಿ ನೀರಾವರಿ ಅಳವಡಿಸಿದಳು.
ಸುಮಾರು 3ರಿಂದ 4 ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಗಿಡಗಳಲ್ಲಿ ಹುಲುಸಾಗಿ ಮೆಣಸಿಕಾಯಿ ಬೆಳೆದವು. ಮೊದಲ ಬಾರಿಗೆ ಮೆಣಸಿನಕಾಯಿ ತೆಗೆಯುವಾಗ ನಾಲ್ಕು ಟನ್‌ಗೂ ಅಧಿಕ ಮೆಣಸಿಕಾಯಿ ಬಂತು. 10 ಕೆ.ಜಿ. ಮೆಣಸಿನಕಾಯಿಗೆ 500 ರೂ. ವರೆಗೂ ದರ ಇದೆ. ಸರಿಸುಮಾರು 2 ಲಕ್ಷ ರೂ. ಗೂ ಹೆಚ್ಚು ದರ ಬಂತು.
ತಿಂಗಳಿಗೆ 6 ಲಕ್ಷ ರೂ ಆದಾಯ: ಹೊಲದಲ್ಲಿ ಮೆಣಸಿನಕಾಯಿ ಕೀಳುವಾಗ 10-15 ಮಹಿಳೆಯರೇ ಕೆಲಸಕ್ಕೆ ಇದ್ದಾರೆ. 10-12 ದಿನಕ್ಕೊಮ್ಮೆ ಮೆಣಸಿನಕಾಯಿ ತೆಗೆಯಲಾಗುತ್ತದೆ. ಒಂದು ಎಕರೆ ಜಮೀನಿನಲ್ಲಿ ಮೂರು ಭಾಗ ಮಾಡಿರುವುದರಿಂದ ಒಂದು ಭಾಗದಲ್ಲಿಯ ಮೆಣಸಿನಕಾಯಿ ಕೀಳಲು 4-5 ದಿನ ಬೇಕಾಗುತ್ತದೆ. ಗಿಡಗಳ ಆರೈಕೆ, ನೀರು ಪೂರೈಸುವುದು, ಕಸ ತೆಗೆಯುವುದು ಸೇರಿ ಮತ್ತೆ 10-12 ದಿನಕ್ಕೆ ಎರಡನೇ ಭಾಗದಲ್ಲಿ ಮೆಣಸಿನಕಾಯಿ ತೆಗೆಯಲಾಗುತ್ತದೆ.
35ರಿಂದ 40 ದಿನಗಳಲ್ಲಿ ಒಟ್ಟು ಮೂರು ಬಾರಿ ಮೆಣಸಿನಕಾಯಿ ಕತ್ತರಿಸಲಾಗುತ್ತದೆ. ಒಮ್ಮೆ ಮೆಣಸಿನಕಾಯಿ ತೆಗೆದರೆ 4ರಿಂದ 4.50 ಟನ್ ಮೆಣಸಿನಕಾಯಿ ಬರುತ್ತದೆ. ಸುಮಾರು 2ರಿಂದ 2.30 ಲಕ್ಷ ರೂ. ವರೆಗೆ ದರ ಬರುತ್ತದೆ. 10-15 ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಾರೆ. ದಿನಗೂಲಿ, ಔಷಧ ಸಿಂಪಡಣೆ, ನಿರ್ವಹಣೆ, ವಿದ್ಯುತ್ ಬಿಲ್ ಸೇರಿ ಖರ್ಚು ವೆಚ್ಚ ತೆಗೆದು ತಿಂಗಳಿಗೆ ಆರು ಲಕ್ಷ ರೂ. ವರೆಗೆ ಆದಾಯ ಸಿಗುತ್ತಿದೆ. ಜನೇವರಿಯಲ್ಲಿ ಗಿಡಗಳನ್ನು ಹಚ್ಚಿ ಏಪ್ರಿಲ್ ಮೊದಲ ವಾರದಿಂದ ಇಳುವರಿ ಆರಂಭವಾಗಿದೆ. ಈವರೆಗೆ ಒಟ್ಟು ಸುಮಾರು 8 ಲಕ್ಷಕ್ಕೂ ಅಧಿ ಕ ಆದಾಯ ನಿಕಿತಾಳಿಗೆ ಸಿಕ್ಕಿದೆ.
ಹೆಗಲಿಗೆ ಹೆಗಲು ಕೊಟ್ಟ ಅಣ್ಣ-ಚಿಕ್ಕಪ್ಪ
ಸಿ.ಎ. ಓದುತ್ತಿದ್ದ ನಿಕಿತಾ ತಂದೆಯ ನಿಧನಾ ನಂತರ ಕೃಷಿಯಲ್ಲಿ ತೊಡಗಿಕೊಂಡು ಬೆಳಗಾವಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ನೌಕರಿ ಹಿಡಿದು ಸಂಬಳ ಪಡೆಯುವುದಕ್ಕಿಂತ 10-15 ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾಳೆ. ದಿನಗೂಲಿ ಮಹಿಳೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಆತ್ಮೀಯವಾಗಿ ತಾನೂ ಕೆಲಸ ಮಾಡುತ್ತಾಳೆ.
ಈಕೆಗೆ ಸಹೋದರ ಅಭಿಷೇಕ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾನೆ. ನಿಕಿತಾಳ ಚಿಕ್ಕಪ್ಪ ತಾನಾಜಿ ಪಾಟೀಲ ನಿಕಿತಾಗೆ ಕೃಷಿ ಸಲಹೆ ನೀಡುತ್ತಾರೆ. ಒಂದೆಡೆ ಅಣ್ಣ ಅಭಿಷೇಕ, ಇನ್ನೊಂದೆಡೆ ಚಿಕ್ಕಪ್ಪ ತಾನಾಜಿಯ ಮಾರ್ಗದರ್ಶನದಲ್ಲಿ ಕೈ ತುಂಬ ಆದಾಯ ಗಳಿಸುತ್ತಿದ್ದಾಳೆ.
ಮೆಣಸಿನಕಾಯಿಗೆ ಭಾರೀ ಬೇಡಿಕೆ
ಜಾಫರವಾಡಿಯ ಹೊಲದಲ್ಲಿ ನಿಕಿತಾ ಬೆಳೆಯುತ್ತಿರುವ ಮೆಣಸಿನಕಾಯಿಗೆ ಭಾರೀ ಬೇಡಿಕೆ ಇದೆ. 3ರಿಂದ 5 ಇಂಚು ಬೆಳೆಯುವ ಈ ಮೆಣಸಿನಕಾಯಿಗೆ ದರವೂ ಹೆಚ್ಚಿದೆ. ಮೆಣಸಿನಕಾಯಿ ಕತ್ತಿಸಿದ ಬಳಿಕ ಮನೆಯಲ್ಲಿಯೇ 10 ಕೆ.ಜಿ. ತೂಕ ಮಾಡಿ ಚೀಲದಲ್ಲಿ ಹಾಕಿ ನೇರವಾಗಿ ಎಪಿಎಂಸಿಗೆ ಕಳುಹಿಸುತ್ತಾಳೆ. ತರಕಾರಿ ಮಾರುಕಟ್ಟೆಗೆ ಹೋದ ಬಳಿಕ ತೂಕದಲ್ಲಿ ಮೋಸ ಎಂಬ ಮಾತೇ ಇಲ್ಲ. ಈ ಮೆಣಸಿನಕಾಯಿ ಗೋವಾ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸಾಗಾಟ ಮಾಡಲಾಗುತ್ತದೆ.
ಚಿಕ್ಕಂದಿನಿಂದಲೂ ನನಗೆ ಕೃಷಿಯಲ್ಲಿ ಬಹಳ ಆಸಕ್ತಿ. ತಂದೆ ಕೃಷಿಯಲ್ಲಿ ಬಂದ ಆದಾಯದಲ್ಲಿ ನನ್ನನ್ನು ಓದಿಸಿದ್ದಾರೆ. ತಂದೆಯ ಸಾವು ನನ್ನ ಜೀವನದಲ್ಲಿ ಸಿಡಿಲು ಬಡಿದಂತಾಯಿತು. ಸಿ.ಎ. ಓದುವುದನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ
ತೊಡಗಿಕೊಂಡೆ. ಮೆಟ್ರೋ ಪಾಲಿಟನ್ ಸಿಟಿಯಲ್ಲಿ ನೌಕರಿ ಮಾಡುವುದಕ್ಕಿಂತ ಇದೇ ಲೇಸು. ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿನಕಾಯಿ ಗಿಡ ಹಚ್ಚಿ ಉತ್ತಮ ಆದಾಯ ಪಡೆಯುತ್ತಿದ್ದೇನೆ.
∙ನಿಕಿತಾ ಪಾಟೀಲ,ಕೃಷಿ ಸಾಧಕಿ
*ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.