ಕುಮ್ಕಿ ಹಕ್ಕು ಮತ್ತೆ ಗಗನ ಕುಸುಮ? ಕರಾವಳಿಯ ಕೃಷಿಕರ ಬಹುಕಾಲದ ಬೇಡಿಕೆ


Team Udayavani, May 18, 2023, 8:00 AM IST

ಕುಮ್ಕಿ ಹಕ್ಕು ಮತ್ತೆ ಗಗನ ಕುಸುಮ? ಕರಾವಳಿಯ ಕೃಷಿಕರ ಬಹುಕಾಲದ ಬೇಡಿಕೆ

ಮಂಗಳೂರು: ಕುಮ್ಕಿ ಹಕ್ಕು ಪಡೆಯುವ ಬಗ್ಗೆ ಈ ಬಾರಿ ಆಶಾ ಭಾವನೆ ಹೊಂದಿದ್ದ ಕರಾವಳಿಯ ಕೃಷಿಕರು ಸರಕಾರ ಬದಲಾವಣೆಯಿಂದ ಇನ್ನೇನಾಗಬಹುದೋ ಎನ್ನುವ ಆತಂಕದಲ್ಲಿದ್ದಾರೆ.

ಹಿಂದೆ ಜಗದೀಶ್‌ ಶೆಟ್ಟರ್‌ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ 2013ರಲ್ಲಿ ಕುಮ್ಕಿ ಹಕ್ಕು ನೀಡುವ ಕುರಿತ ಸಚಿವ ಸಂಪುಟ ನಿರ್ಧಾರವನ್ನು ಕೈಗೊಂಡಿತ್ತು. ಆದರೆ 2013ರಿಂದ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಸರಕಾರ ಹಿಂದಿನ ಸರಕಾರದ ನಿರ್ಣಯವನ್ನು ಜಾರಿಗೊಳಿಸಲು ಆಸಕ್ತಿ ತೋರಿಸಿರಲಿಲ್ಲ. ಕುಮ್ಕಿ ಹಕ್ಕು ನೀಡಿದರೆ ಸರಕಾರಿ ಭೂಮಿ ಸಿಗದಾದೀತು ಎನ್ನುವ ಚಿಂತನೆ ಅದಕ್ಕೆ ಕಾರಣ.

ಕೊನೆಯ ಹಂತದ ತೀರ್ಮಾನ !
ಅಂದು ಶೆಟ್ಟರ್‌ ನೇತೃತ್ವದ ಸರಕಾರವೂ ತನ್ನ ಅವಧಿಯ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಕುಮ್ಕಿ ಕುರಿತು ತೀರ್ಮಾನ ಕೈಗೊಂಡಿತ್ತು. ಈ ಬಾರಿಯೂ ಸರಕಾರದ ಅವಧಿಯ ಕೊನೆ ಅವಧಿಯಲ್ಲೇ ಕುಮ್ಕಿ ಹಕ್ಕು ಜಾರಿಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಅದರಂತೆ ಕುಮ್ಕಿ ಜಮೀನುಗಳನ್ನು 5 ಎಕರೆಗೆ ಮೀರದಂತೆ 30 ವರ್ಷ ಅವಧಿಗೆ ಗುತ್ತಿಗೆ ನೀಡುವುದಕ್ಕೆ ಬೇಕಾದ ಕಾನೂನು ತಿದ್ದುಪಡಿ ತರುವುದಕ್ಕೆ ನಿಕಟ ಪೂರ್ವ ಕಂದಾಯ ಸಚಿವ ಆರ್‌. ಅಶೋಕ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಿಂದ ವರದಿ ಕೇಳಿದ್ದು, ಸಮಿತಿ ಈಗಾಗಲೇ ಶಿಫಾರಸು ಮಾಡಿದೆ. ಕುಮ್ಕಿ ಜಮೀನನ್ನು ಕೃಷಿಕರ ಹಿಡುವಳಿ ಜಮೀನು ಹೊರತು ಪಡಿಸಿ 5 ಎಕರೆಗೆ ಮೀರದಂತೆ ಗುತ್ತಿಗೆ ಮೌಲ್ಯವನ್ನು ನಿಗದಿ ಪಡಿಸಿ 30 ವರ್ಷ ಅವಧಿಗೆ ಗುತ್ತಿಗೆ ನೀಡಲು ಕರ್ನಾಟಕ ಭೂಕಂದಾಯ ಕಾಯಿದೆ 1964ಕ್ಕೆ ತಿದ್ದುಪಡಿ ತರಬಹುದು ಎಂದು ಸಮಿತಿ ತಿಳಿಸಿತ್ತು. ಆದರೆ ಸರಕಾರ ಬದಲಾಗಿರುವುದರಿಂದ ಈ ಶಿಫಾರಸು ಈಗ ಅನುಷ್ಠಾನಕ್ಕೆ ಬರುವುದೇ ಎನ್ನುವ ಸಂದೇಹ ಕೃಷಿಕರನ್ನು ಕಾಡತೊಡಗಿದೆ.

ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ 31,373 ರೈತರು 73,408 ಎಕರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್‌ ಬೆಳೆಗಳನ್ನು ಬೆಳೆಯುತ್ತಿದ್ದು, ಆ ಜಮೀನಿಗೂ 30 ವರ್ಷ ಅವಧಿಗೆ 25 ಎಕರೆ ವರೆಗೆ ಗುತ್ತಿಗೆ ನೀಡಲು ಸರಕಾರ ಕೆಲವು ತಿಂಗಳ ಹಿಂದೆಯಷ್ಟೇ ಆದೇಶ ಮಾಡಿತ್ತು. ಅದೇ ಮಾದರಿಯನ್ನು ಕುಮ್ಕಿಗೂ ಅನ್ವಯಿಸಬೇಕು ಎನ್ನುವುದು ಕರಾವಳಿ ಭಾಗದ ಶಾಸಕರ ಒತ್ತಾಯವಾಗಿತ್ತು.

ಕುಮ್ಕಿ ಭೂಮಿಯೆಂದರೆ…
ಕೃಷಿಕರ ಸಾಗುವಳಿಯನ್ನು ಪ್ರೋತ್ಸಾಹಿಸುವುದ ಕ್ಕಾಗಿ ಸೊಪ್ಪು ಹಾಗೂ ಹುಲ್ಲು, ಕಟ್ಟಿಗೆ ಇತ್ಯಾದಿ ಬಳಸಿಕೊಳ್ಳುವುದಕ್ಕಾಗಿ ವರ್ಗ ಜಮೀನಿಗೆ ತಾಗಿ ಕೊಂಡಿರುವ ಸರಕಾರಿ ಜಮೀನನ್ನು ಒದಗಿಸಿದ್ದು ಅದಕ್ಕೆ ಕುಮ್ಕಿ ಭೂಮಿ ಎನ್ನುತ್ತಾರೆ. ಮೂಲತಃ ಇದು ಉರ್ದು ಪದವಾದ “ಕುಮ್ಮಕ್ಕು’ನಿಂದ ಬಂದಿದೆ, ಕುಮ್ಮಕ್ಕು ಎಂದರೆ ಪ್ರೋತ್ಸಾಹ. ಬ್ರಿಟಿಷರು ಹಿಂದೆ ಸ್ಟಾ éಂಡಿಂಗ್‌ ಬೋರ್ಡ್‌ ಆದೇಶ ಹೊರಡಿಸಿ, ಕೃಷಿಭೂಮಿಯಿಂದ 100 ಗಜ, ಅಥವಾ 250 ಲಿಂಕ್ಸ್‌ ಸರಕಾರಿ ಜಾಗವನ್ನು ಕೃಷಿಕರು ಬಳಸಿಕೊಳ್ಳಬಹುದು ಎಂದಿದ್ದರು. ಅದುವೇ ಕುಮ್ಕಿ ಜಾಗ. ಇದೇ ಜಾಗಕ್ಕೆ ಸೊಪ್ಪಿನಬೆಟ್ಟ, ಕಾನ, ಬಾಣೆ ಎಂದು ಮಲೆನಾಡು, ಕೊಡಗು ಭಾಗದಲ್ಲಿ ಕರೆಯುತ್ತಾರೆ.

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.