ಈ ಬಾರಿ ಗುಣಾತ್ಮಕ ಶೈಕ್ಷಣಿಕ ವರ್ಷ ಸಂಕಲ್ಪ
ಸಮಗ್ರ ಕಾರ್ಯಯೋಜನೆಯ ಶೈಕ್ಷಣಿಕ ಮಾರ್ಗಸೂಚಿ ಸಿದ್ಧ
Team Udayavani, May 18, 2023, 7:37 AM IST
ದಾವಣಗೆರೆ: ಕೊರೊನಾ ಕಾರಣದಿಂದ ಶಾಲೆ ಗಳು ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳಲ್ಲಿ ಆಗಿರುವ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು 2022-23ರ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ ವರ್ಷ’ವನ್ನಾಗಿಸಿಕೊಂಡಿದ್ದ ಶಾಲಾ ಶಿಕ್ಷಣ ಇಲಾಖೆ, 2023-24ನೇ ಸಾಲಿನ ಶೈಕ್ಷಣಿಕ ವರ್ಷ ವನ್ನು “ಗುಣಾತ್ಮಕ ಶೈಕ್ಷಣಿಕ ವರ್ಷ”ವಾಗಿಸಲು ನಿರ್ಧರಿಸಿದೆ.
ಈ ಕ್ರಮದ ಮೂಲಕ ಪರಿಣಾಮಕಾರಿ ಮತ್ತು ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸುವುದಕ್ಕಾಗಿ ಇಲಾಖೆ ಈ ಬಾರಿ 230 ಪುಟಗಳ ವಿಶೇಷ ವಾರ್ಷಿಕ ಮಾರ್ಗಸೂಚಿ ಪುಸ್ತಕವನ್ನು ಸಿದ್ಧಪಡಿಸಿದೆ. ಜತೆಗೆ ರಾಜ್ಯಾ ದ್ಯಂತ ಏಕರೂಪದ ಬೋಧನಾ-ಕಲಿಕಾ ಚಟುವಟಿಕೆಗಳ ನಿರ್ವಹಣೆಗಾಗಿ ಸೂಕ್ತ ಕ್ರಿಯಾಯೋಜನೆ ರೂಪಿಸಿದ್ದು, ಶೈಕ್ಷಣಿಕ ಮಾರ್ಗಸೂಚಿ ಪುಸ್ತಕವು ಕಲಿಕಾ ಬಲವರ್ಧನೆಗಾಗಿ ಚಟುವಟಿಕೆಯ ಖಜಾನೆಯಂತೆ ರೂಪಿತಗೊಂಡಿದೆ.
ಮುಂದಿನ ಶೈಕ್ಷಣಿಕ ವರ್ಷ ಕಲಿಕೆಯಲ್ಲಿ ಗರಿಷ್ಠ ಗಳಿಕೆಯ ಆರಂಭಿಕ ಮೈಲುಗಲ್ಲಾಗಲಿ ಎಂಬ ಆಶಯದಲ್ಲಿ ಇಲಾಖೆ, ಮಾರ್ಗದರ್ಶಿಕೆ ರೂಪಿಸಿದ್ದು, ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಶಾಲಾಭಿವೃದ್ಧಿ ಸಂಬಂಧಿಸಿ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲು ಬೇಕಾದ ಮಾಹಿತಿ ಮಾರ್ಗದರ್ಶಿ ಯಲ್ಲಿವೆ.
ಶಾಲಾ ಚಟುವಟಿಕೆಗಳಲ್ಲಿ ಅಗತ್ಯ-ಅವಕಾಶ- ಸಾಧ್ಯತೆ ಗಳನ್ನು ಅನುಲಕ್ಷಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ಮಕ್ಕಳ ದೇಹ-ಮನೋ-ಬುದ್ಧಿ ವಿಕಾಸಗಳಿಗೆ ಸಂಬಂಧಿಸಿ ಸೂಕ್ತ ಮಾಹಿತಿಗಳನ್ನು ಸಂಪನ್ಮೂಲ ತಂಡ ಮಾರ್ಗಸೂಚಿಯಲ್ಲಿ ಅಳವಡಿಸಿದೆ.
2023-24ನೇ ಶೈಕ್ಷಣಿಕ ವರ್ಷವು ಎಲ್ಲ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿ ಯಾಗುವುದ ರೊಂದಿಗೆ ಗುಣಾತ್ಮಕ ಶೈಕ್ಷಣಿಕ ವರ್ಷವನ್ನಾಗಿಸುವ ಸಂಕಲ್ಪ ದೊಂದಿಗೆ ಮಾರ್ಗಸೂಚಿ ರಚಿಸಲಾಗಿದೆ. ಶಾಲಾ ಶಿಕ್ಷಣ ವ್ಯವಸ್ಥೆಯ ಸಮರ್ಪಕ ನಿರ್ವಹಣೆಗೆ ಅನುಕೂಲ ಕರ ವಾದ ಅನೇಕ ಅಂಶಗಳನ್ನು ಮಾರ್ಗದರ್ಶಿಯಲ್ಲಿ ಅಳ ವಡಿಸಲಾಗಿದೆ. ಈ ಪ್ರಯತ್ನವು ಶಿಕ್ಷಕರಿಗೆ, ಉಸ್ತು ವಾರಿ ಅಧಿಕಾರಿಗಳಿಗೆ ಹಾಗೂ ಮಕ್ಕಳ ಅಭಿವೃದ್ಧಿಗೆ ಶ್ರಮಿಸುವ ಎಲ್ಲ ಭಾಗೀ ದಾರರಿಗೆ ಉಪಯುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
-ಡಾ| ವಿಶಾಲ್ ಆರ್., ಶಾಲಾ ಶಿಕ್ಷಣ ಇಲಾಖೆ ಆಯುಕ್ತ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.