ಉಳ್ಳಾಲ ತಾಲೂಕು; “ಖಜಾನೆ’ ಆಗದೆ ಅಧಿಕಾರಿ-ಸಿಬಂದಿ ವೇತನಕ್ಕೆ ಪರದಾಟ!
ಹೊಸ ಆರ್ಥಿಕ ವರ್ಷದಿಂದ ಇಲಾಖಾ ಸ್ತರದವರಿಗೆ ವೇತನ ಸಮಸ್ಯೆ
Team Udayavani, May 19, 2023, 3:27 PM IST
ಮಹಾನಗರ: ಹೊಸ ತಾಲೂಕಾಗಿ “ಉಳ್ಳಾಲ’ ರಚನೆಗೊಂಡರೂ “ಖಜಾನೆ 2′ ರಚನೆ ಪ್ರಕ್ರಿಯೆ ಇನ್ನೂ ನಡೆಯದೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬಂದಿ ವರ್ಗ ವೇತ ನಕ್ಕಾಗಿ ಅಲೆದಾಡುವಂತಾಗಿದೆ!
ಇಲ್ಲಿನ ಕೆಲವು ಇಲಾಖೆಯ ಅಧಿಕಾರಿ ವರ್ಗಕ್ಕೆ ಮಾರ್ಚ್‌ನಿಂದ ಇಲ್ಲಿಯವರೆಗೆ ವೇತನ ಸಿಕ್ಕಿಲ್ಲ; ವಿಚಾರಿಸಿದರೆ ಹೊಸ ತಾಲೂಕಿನಲ್ಲಿ “ಖಜಾನೆ 2′ ಇಲ್ಲದೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ. ಕರಾವಳಿ ಜಿಲ್ಲೆಯಲ್ಲಿ “ಉಳ್ಳಾಲ’ ಸಹಿತ ಇತರ ಜಿಲ್ಲೆಯ 3 ಹೊಸ ತಾಲೂಕಿನಲ್ಲಿ ಈ ಸಮಸ್ಯೆ ಉಂಟಾಗಿದೆ.
ಒಂದು ತಾಲೂಕಿಗೆ ಒಂದು ಖಜಾನೆ ಇರುತ್ತದೆ. ರಾಜ್ಯ ಮಟ್ಟದಲ್ಲಿ ಇದರ ಅನುಷ್ಠಾನ ಆಗುತ್ತದೆ. ಆ ತಾಲೂಕು ವ್ಯಾಪ್ತಿಯ ಸರಕಾರಿ ಮಟ್ಟದ ವಿವಿಧ ಇಲಾಖೆಗಳ ವೇತನ ಆ ಖಜಾನೆಗೆ ಬಂದು ಹಂಚಿಕೆ ಆಗುವುದು ನಿಯಮ. ಹೊಸದಾಗಿ ಆದ ಉಳ್ಳಾಲ ತಾಲೂಕಿನಲ್ಲಿ ಹೊಸ ಖಜಾನೆ ಇನ್ನಷ್ಟೆ ಆಗಬೇಕಿದೆ. ಹೀಗಾಗಿ, ಹಣ ಬಿಡುಗಡೆ ಆದರೂ ಖಜಾನೆ ಇಲ್ಲದಿದ್ದರೆ ಯಾವ ರೀತಿ ಅದನ್ನು ಹಂಚಿಕೆ ಮಾಡುವುದು ಎಂಬ ಗೊಂದಲ. ಈ ಕಾರಣದಿಂದ ಅಧಿಕಾರಿ-ಸಿಬಂದಿ ಸಂಬಳಕ್ಕೆ ಸಮಸ್ಯೆ.
ಏನಿದು ಸಮಸ್ಯೆ?
ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನಿಂದ ವಿಭಜನೆಗೊಂಡು ಹೊಸದಾಗಿ ಉಳ್ಳಾಲ ತಾಲೂಕು ರಚನೆಯಾಗಿದೆ. ರಾಜ್ಯ ಹಣಕಾಸು ಇಲಾಖೆಯಿಂದ ಖಜಾನೆ 2 (ಕೆ 2) ಎಂಬ ಸಾಪ್ಟ್ವೇರ್ ಮಾಡಲಾಗಿದೆ. 5 ವರ್ಷದಿಂದಲೂ ಅದು ಚಾಲ್ತಿಯಲ್ಲಿದೆ. ಅದರ ಮೂಲಕವೇ ಇಲಾಖಾ ಸ್ತರದ ಅಧಿಕಾರಿಗಳಿಗೆ ವೇತ ನ ಬರುತ್ತಿತ್ತು. ಉಳ್ಳಾಲ ತಾಲೂಕು 26/8/2022ಕ್ಕೆ ರಚನೆಯಾಗಿದೆ. ಅಲ್ಲಿಂದ ವೇತ ನ ಹಳೆಯ ತಾಲೂಕಿನಲ್ಲಿಯೇ (ಮಂಗಳೂರು-ಬಂಟ್ವಾಳ) ಆಗುತ್ತಿತ್ತು. ಹೊಸ ಆರ್ಥಿಕ ವರ್ಷದಿಂದ ಹೊಸ ತಾಲೂಕಿನ ಖಜಾನೆ ಮುಖೇನವೇ ವೇತ ನ ಬರಬೇಕಾಗಿತ್ತು. ಆದರೆ ಹೊಸ ತಾಲೂಕಿನ ಖಜಾನೆ 2 ರಚನೆ ಇನ್ನೂ ಆಗದೆ ವೇತ ನ ಹಂಚಿಕೆಗೆ ಸಮಸ್ಯೆ ಎದುರಾಗಿದೆ.
ಈ ಬಗ್ಗೆ ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದಾಗ “ಹೊಸ ತಾಲೂಕಿನವರಿಗೆ ಫಂಡ್ ರಿಲೀಸ್ ಆಗುತ್ತದೆ. ಹಳೆಯ ತಾಲೂಕಿಗೆ ಅದು ಬರುತ್ತದೆ. ಅದನ್ನು ಈ ಆರ್ಥಿಕ ವರ್ಷದಲ್ಲಿ ಹೊಸ ತಾಲೂಕಿನವರಿಗೆ ವಿನಿಯೋಗಿಸಲು ತಾಂತ್ರಿಕ ಸಮಸ್ಯೆ ಇದೆ. ಈ ಬಗ್ಗೆ ಇಲಾಖಾ ಹಂತದಲ್ಲಿ ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ.
ಹಿಂದಿನ ತಾಲೂಕಿನಲ್ಲೇ ವೇತನ?
ಮಂಗಳೂರು ತಾಲೂಕಿನ 10 ಗ್ರಾ.ಪಂ. ಹಾಗೂ ಬಂಟ್ವಾಳ ತಾಲೂಕಿನ 7 ಪಂಚಾಯತ್ ವ್ಯಾಪ್ತಿ ಸೇರಿ ಉಳ್ಳಾಲ ತಾಲೂಕು ರಚನೆಯಾಗಿದೆ. ಈ ಪೈಕಿ ಮುಖ್ಯವಾಗಿ ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖಾ ಅಧಿಕಾರಿ-ಸಿಬಂದಿ ವೇತನಕ್ಕೆ ತೊಡಕಾಗಿತ್ತು. ಆದರೆ ಉನ್ನತ ಮಟ್ಟದ ಅಧಿಕಾರಿಗಳ ಮಾತುಕತೆ ಮೂಲಕ ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆಯವರ ವೇತ ನವನ್ನು ಈ ಹಿಂದಿನ ತಾಲೂಕಿನಲ್ಲಿ ಪಡೆಯಲು ಒಂದೆರಡು ದಿನದ ಹಿಂದೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯವರಿಗೆ ಅನುಮತಿ ಸಿಕ್ಕಿಲ್ಲ. ಖಜಾನೆ ಹೊಸದಾಗಿ ಆಗುವವರೆಗೂ ಈ ಸಮಸ್ಯೆ ಎದುರಾಗುವ ಕಾರಣದಿಂದ ಅಲ್ಲಿಯವರೆಗೆ ಹಳೆ ತಾಲೂಕಿನಲ್ಲಿಯೇ ವೇತ ನ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ರಾಜ್ಯ ಮಟ್ಟಕ್ಕೆ ಮನವಿ ಸಲ್ಲಿಕೆಯಾಗಿದ್ದು, ಹಣಕಾಸು ಇಲಾಖೆಯಲ್ಲಿ ಇದು ಪರಿಶೀಲನೆಯಲ್ಲಿ ಬಾಕಿಯಾಗಿದೆ!
ಅಧಿಕಾರಿಗಳ ಜತೆಗೆ ಚರ್ಚಿಸಿ ತೀರ್ಮಾನ
ಉಳ್ಳಾಲ ತಾಲೂಕಿನ ಇಲಾಖೆಯ ಕೆಲವು ಅಧಿಕಾರಿ-ಸಿಬಂದಿಗೆ ವೇತ ನ ಸಿಗುವಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಈಗ ಗಮನಕ್ಕೆ ಬಂದಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು.
– ಯು.ಟಿ. ಖಾದರ್, ಶಾಸಕರು,
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.