Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

3 ತಿಂಗಳುಗಳಿಗಿಂತ ಹೆಚ್ಚು ಅವಧಿಯಲ್ಲಿ ಕಂಡುಬಂದರೆ ದೀರ್ಘ‌ಕಾಲಿಕ ನಿದ್ರಾಹೀನತೆ ಎನ್ನಲಾಗುತ್ತದೆ.

Team Udayavani, May 19, 2023, 3:47 PM IST

Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

ವಯಸ್ಕರಿಗೆ ಪ್ರತೀ ರಾತ್ರಿ ಕನಿಷ್ಠ 7ರಿಂದ 9 ತಾಸುಗಳ ನಿದ್ದೆ ಅಗತ್ಯವಾಗಿರುತ್ತದೆ. ನಿದ್ದೆಯನ್ನು ಆರಂಭಿಸುವುದು ಮತ್ತು ಕಾಯ್ದುಕೊಳ್ಳುವುದರಲ್ಲಿ ಕಷ್ಟವನ್ನು ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾ ಎಂದು ಕರೆಯಲಾಗುತ್ತದೆ.

ನಿದ್ದೆಗೆ ಸಂಬಂಧಿಸಿದ ತೊಂದರೆಗಳು ಈ ಕೆಳಕಂಡಂತೆ ಇರಬಹುದು:
1. ನಿದ್ದೆ ಹೋಗುವುದಕ್ಕೆ ತೊಂದರೆ
2. ರಾತ್ರಿ ಹಲವು ಸಲ ಎಚ್ಚರವಾಗುವುದು ಮತ್ತು ಮತ್ತೆ ನಿದ್ದೆ ಮಾಡುವುದು ಕಷ್ಟವಾಗುವುದು
3. ಸಾಮಾನ್ಯವಾಗಿ ನಿದ್ದೆಯಿಂದ ಏಳುವುದಕ್ಕಿಂತ 2 ತಾಸು ಅಥವಾ ಅದಕ್ಕಿಂತ ಬೇಗನೆ ಎಚ್ಚರವಾಗುವುದು
4. ರಾತ್ರಿ ನಿದ್ದೆ ಮಾಡಿದ ಬಳಿಕವೂ ಉಲ್ಲಾಸರಹಿತರಾಗಿ, ವಿಶ್ರಾಂತಿರಹಿತರಾಗಿ ಇರುವುದು
ಮೇಲೆ ಹೇಳಿರುವ ನಿದ್ದೆಗೆ ಸಂಬಂಧಿಸಿದ ತೊಂದರೆಗಳು ವಾರದಲ್ಲಿ ಕನಿಷ್ಠ ಮೂರು ಬಾರಿ, ಕನಿಷ್ಠ ಒಂದು ತಿಂಗಳು ಕಂಡುಬಂದರೆ ಹಾಗೂ ಅದರಿಂದ ಹಗಲಿನ ದೈನಿಕ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದರೆ ಆಗ ಅಂತಹ ವ್ಯಕ್ತಿ ನಿದ್ರಾಹೀನತೆಯಿಂದ ಬಳಲುತ್ತಿರುವುದಾಗಿ ನಿರ್ಧರಿಸಲಾಗುತ್ತದೆ. ನಿದ್ರಾಹೀನತೆಯು 3 ತಿಂಗಳುಗಳಿಗಿಂತ ಕಡಿಮೆ ಅವಧಿಯಲ್ಲಿ ಕಂಡುಬಂದರೆ ಅದನ್ನು ಅಲ್ಪಕಾಲದ ನಿದ್ರಾಹೀನತೆ ಎಂಬುದಾಗಿ ಕರೆಯಲಾಗುತ್ತದೆ. ಅದು 3 ತಿಂಗಳುಗಳಿಗಿಂತ ಹೆಚ್ಚು ಅವಧಿಯಲ್ಲಿ ಕಂಡುಬಂದರೆ ದೀರ್ಘ‌ಕಾಲಿಕ ನಿದ್ರಾಹೀನತೆ ಎನ್ನಲಾಗುತ್ತದೆ.

ನಿದ್ರಾಹೀನತೆಗೆ ಕಾರಣಗಳು
– ಇತ್ತೀಚೆಗಿನ ಒತ್ತಡ/ ಪರಿಸರದಲ್ಲಿ ಬದಲಾವಣೆ
– ದೈಹಿಕ ಆರೋಗ್ಯದಲ್ಲಿ ಸಮಸ್ಯೆಗಳು/ ವೈದ್ಯಕೀಯ ತೊಂದರೆಗಳು
– ಖಿನ್ನತೆ, ಮೇನಿಯಾ, ಉದ್ವಿಗ್ನತೆಯಂತಹ ಮನಶಾಸ್ತ್ರೀಯ ಅನಾರೋಗ್ಯಗಳು
– ಇತರ ಅನಾರೋಗ್ಯಗಳಿಗಾಗಿ ತೆಗೆದುಕೊಳ್ಳುತ್ತಿರುವ ಔಷಧ ಗಳು (ಉದಾ: ಪ್ರೊಪ್ರನೊಲಾಲ್‌, ಸ್ಟೀರಾಯ್ಡಗಳು ಇತ್ಯಾದಿ)
– ಮದ್ಯಪಾನ ಮತ್ತು ತಂಬಾಕು ಬಳಕೆ
– ವೈದ್ಯಕೀಯ ಅನಾರೋಗ್ಯಗಳಿಂದಾಗಿ ಉಂಟಾಗಿರುವ ಅಲ್ಪಕಾಲಿಕ ಅಥವಾ ದೀರ್ಘ‌ಕಾಲಿಕ ನೋವು

ನಿದ್ರಾಹೀನತೆಯ ಪರಿಣಾಮಗಳು
1. ಹಗಲಿನಲ್ಲಿ ದಣಿವು
2. ಏಕಾಗ್ರತೆಗೆ ಸಂಬಂಧಿಸಿದ ತೊಂದರೆಗಳು
3. ಸಿಟ್ಟಾಗುವುದು, ಉದ್ವಿಗ್ನತೆ
4. ಖಿನ್ನತೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ
5. ಪ್ರಸ್ತುತ ಇರುವ ಇತರ ದೈಹಿಕ/ ಮಾನಸಿಕ ಅನಾರೋಗ್ಯ ಉಲ್ಬಣಗೊಳ್ಳುವ ಸಾಧ್ಯತೆ

ನಿದ್ದೆಯ ಅಚ್ಚುಕಟ್ಟು ಕ್ರಮಗಳು
1. ನಿದ್ದೆ ಹೋಗುವ ಮತ್ತು ಎದ್ದೇಳುವ ಸಮಯವನ್ನು ಕ್ರಮಬದ್ಧಗೊಳಿಸುವುದು
2. ಹಗಲು ನಿದ್ದೆ ಮಾಡದಿರುವುದು
3. ಸಂಜೆ ಮತ್ತು ರಾತ್ರಿ ಕಾಫಿ/ ಚಹಾ ಸೇವಿಸದಿರುವುದು
4. ರಾತ್ರಿ ಬಿರುಸಾದ ವ್ಯಾಯಾಮ ಮಾಡದಿರುವುದು
5. ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು
6. ಮಲಗುವ ಸಂದರ್ಭದಲ್ಲಿ ಟಿವಿ, ಮೊಬೈಲ್‌ ಫೋನ್‌ ಬಳಕೆ ಮಾಡದಿರುವುದು
7. ರಾತ್ರಿ ಪ್ರಕಾಶಮಾನವಾದ ಬೆಳಕು ಇಲ್ಲದಂತೆ ನೋಡಿಕೊಳ್ಳುವುದು

ಚಿಕಿತ್ಸೆ
1. ನಿದ್ರಾಹೀನತೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ವಿಶ್ಲೇಷಿಸಿ ಚಿಕಿತ್ಸೆ ಗೊಳಪಡಿಸಬೇಕಾಗುತ್ತದೆ.
2. ನಿದ್ದೆಯ ಅಚ್ಚುಕಟ್ಟು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
3. ಈ ಎರಡು ಹೆಜ್ಜೆಗಳನ್ನು ಅನುಸರಿಸಿದ ಬಳಿಕವೂ ಪ್ರಯೋಜನ ಆಗದೆ ಇದ್ದಲ್ಲಿ ಮತ್ತು ಹಗಲಿನ ಚಟುವಟಿಕೆಗಳಿಗೆ ಆಗುವ ತೊಂದರೆ ಗಮನಾರ್ಹವಾಗಿದ್ದಲ್ಲಿ ಅಲ್ಪ ಅವಧಿಯ ಔಷಧ ಚಿಕಿತ್ಸೆ (2ರಿಂದ 4 ವಾರಗಳಿಗಿಂತ ಹೆಚ್ಚು ಅವಧಿಯದ್ದಲ್ಲದ) ವಿಧಾನವನ್ನು ಪರಿಗಣಿಸಬೇಕಾಗುತ್ತದೆ. ಔಷಧ ಆಯ್ಕೆಗಳಲ್ಲಿ ಬೆಂಜೊಡಯಾಜಪೈನ್‌ಗಳು, ನಾನ್‌-ಬೆಂಜೊಡಯಾಜಪೈನ್‌ಗಳಾಗಿರುವ ಜೊಲ್ಪಿಡೆಮ್‌ ಮತ್ತು ಅಗತ್ಯವಾದರೆ ಮೆಲಟೊನಿನ್‌ ಕೂಡ ಸೇರಿವೆ. ಬೆಂಜೊಡಯಾಜಪೈನ್‌ಗಳ ಮೇಲಿನ ಅವಲಂಬನೆ ಉಂಟಾಗುವ ವಿಚಾರವಾಗಿ ವೈದ್ಯರು ಎಚ್ಚರಿಕೆಯಿಂದ ಇರಬೇಕು ಮತ್ತು ಔಷಧಗಳನ್ನು 2-4 ವಾರಗಳಲ್ಲಿ ಹಂತಹಂತವಾಗಿ ಕಡಿಮೆಗೊಳಿಸಿ ಸ್ಥಗಿತಗೊಳಿಸಬೇಕು.
4. ದೀರ್ಘ‌ಕಾಲಿಕ ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಗ್ರಹಿಸುವುದಕ್ಕೆ ಸಂಬಂಧಿಸಿದ ವರ್ತನಾತ್ಮಕ ಚಿಕಿತ್ಸೆ )(ಕೊಗ್ನಿಟಿವ್‌ ಬಿಹೇವಿಯರ್‌ ಥೆರಪಿ) ಮತ್ತು ವಿಶ್ರಾಂತಿದಾಯಕ ಚಿಕಿತ್ಸೆಗಳನ್ನು ಒದಗಿಸುವುದು ಕೂಡ ಸೂಕ್ತವಾಗಿದೆ.

ಡಾ| ಸೋನಿಯಾ ಶೆಣೈ
ಅಸೋಸಿಯೇಟ್‌ ಪ್ರೊಫೆಸರ್‌, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.