ಗೆದ್ದ ಮೂವರಿಗೂ ಭವಿಷ್ಯದ ಕಲಿಕೆಗೆ ಪ್ರತ್ಯೇಕ ಪಾಠಗಳಿವೆ

ಪ್ರಭಾವ ಬೀರದ ಗ್ಯಾರಂಟಿ ಕಾರ್ಡ್‌ಗಳ ಲೆಕ್ಕಾಚಾರ | ವೈಯಕ್ತಿಕ ವರ್ಚಸ್ಸಿನಿಂದಲೂ ಲಾಭ

Team Udayavani, May 20, 2023, 8:10 AM IST

KOTYAN, KHADAR, SHETTY

ಇದು ಚುನಾವಣೋತ್ತರ ಫ‌ಲಿತಾಂಶ. ಮುಂದಿನ ಸಂದರ್ಭಕ್ಕೆ ಮಾಡುವ ತಯಾರಿ. ಶನಿವಾರ ವಿಧಾನಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಪ್ರಬಲವಾಗಿ ಸುನಾಮಿಯಂತೆ ಬೀಸಿ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಆದರೆ ಬಿಜೆಪಿ ಸಂಘಟನೆ ಸುನಾಮಿಯನ್ನು ತಡೆಯಲು ಮಾಡಿದ ಕೆಲವು ಪ್ರಯೋಗ ಹಾಗೂ ತಂತ್ರಗಾರಿಕೆ ಯಶಸ್ವಿಯಾಗಿದೆ. ಈ ಪ್ರಯತ್ನಕ್ಕೆ ಹಿಂದುತ್ವ ಪರ ಅಲೆಯೂ ಬಿಜೆಪಿಯ ಕೈ ಹಿಡಿಯಿತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚುನಾವಣೆ ದಿನಾಂಕ ಘೋಷಣೆಗಿಂತ ಮೊದಲು ಇದ್ದ ಚಿತ್ರಣ ಕೆಲವೇ ದಿನಗಳಲ್ಲಿ ಸಂಪೂರ್ಣ ಬದಲಾಯಿತು. ಬಿಸಿಗಾಳಿ ನಿಧಾನವಾಗಿ ತಣ್ಣಗಾಗತೊಡಗಿತು. ಕಡಲ ತೀರದಲ್ಲಿ ಗಾಳಿ ದಿಕ್ಕೂ ಬದಲಾದದ್ದು ವಿಶೇಷ.

ಮೂಡುಬಿದಿರೆ

ಹಿಂದಿನಷ್ಟು ಮುನ್ನಡೆ ಸಾಧ್ಯವಾಗದಿದ್ದರೂ ಗೆಲುವು ಬಿಟ್ಟು ಕೊಡದ ಬಿಜೆಪಿ
ಮೂಡುಬಿದಿರೆ: ಜಿಲ್ಲೆಯ ಮೂಡುಬಿದಿರೆ ಹೊರತು ಪಡಿಸಿ ಇತರ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಕನಿಷ್ಠ ಒಂದು ಬಾರಿಯಾದರೂ ಗೆದ್ದಿತ್ತು. ಆದರೆ 2018ರಲ್ಲಿ ಬಿಜೆಪಿಯ ಆ ಕನಸೂ ಈಡೇರಿತು. ಉಮಾನಾಥ ಕೋಟ್ಯಾನ್‌ ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕರಾದರು. ಆ ಮೂಲಕ ಕಾಂಗ್ರೆಸ್‌ ಹಾಗೂ ಜನತಾ ಪರಿವಾರವನ್ನು ಸತತವಾಗಿ ಪ್ರತಿನಿಧಿಸಿದ್ದ ಕ್ಷೇತ್ರದ ಮತದಾರರು ಬಿಜೆಪಿ ಗೆ ಬಾಗಿಲು ತೆರೆದರು. ಈ ಬಾರಿಯೂ ಗೆಲ್ಲುವ ಮೂಲಕ ಬಿಜೆಪಿ ಕ್ಷೇತ್ರವನ್ನು ತನ್ನ ಬುಟ್ಟಿಯಲ್ಲೇ ಇಟ್ಟುಕೊಂಡಿದೆ.

ಆಡಳಿತ ವಿರೋಧಿ ಅಲೆ ಇದ್ದಾಗ್ಯೂ ಬಿಜೆಪಿ ಗೆದ್ದದ್ದು ವಿಶೇಷ. ಚುನಾವಣೆಗೂ ಮುನ್ನವೇ ಪ್ರಚಾರ ಆರಂಭಿಸಿದ್ದು, ಶಾಸಕರ ಈ ಅವಧಿಯ ಅಭಿ ವೃದ್ಧಿ ಕಾರ್ಯಗಳು, ರಾಜ್ಯ-ಕೇಂದ್ರ ಸರಕಾರಗಳ ಯೋಜ ನೆಗಳು, ಪ್ರತಿಸ್ಪರ್ಧಿ ಯುವ ಮುಖವೆಂಬ ಸಂಗತಿ ವಿಶೇ ಷ ಪರಿಣಾಮ ಬೀರದ್ದು, ಸ್ವಲ್ಪ ಮಟ್ಟಿಗೆ ಹಿಂದುತ್ವ ಪರ ಅಲೆ, ಭಜರಂಗ ದಳ ನಿಷೇಧದಂಥ ಪ್ರತಿಸ್ಪರ್ಧಿ ಪಕ್ಷದ ಹೇಳಿಕೆಗಳು, ವೈಯಕ್ತಿಕ ಟೀಕೆಗೆ ಇಳಿಯದೇ ಎಚ್ಚರ ವಹಿಸಿದ್ದು-ಇವೆಲ್ಲವೂ ಗೆಲುವಿಗೆ ಹತ್ತಿರವಾಗಿಸಿದ ಅಂಶಗಳು. ಶೇ.40 ಕಮೀಷನ್‌ ಆರೋಪವೂ ಸ್ಥಳೀಯವಾಗಿ ದೊಡ್ಡ ಪರಿಣಾಮ ಬೀರಿದಂತಿಲ್ಲ.

ಪ್ರಚಾರದಲ್ಲಿ ಕಾಂಗ್ರೆಸ್‌ ಸಹ ಹಿಂದೆ ಬಿದ್ದಿರಲಿಲ್ಲ. ಅಭ್ಯರ್ಥಿ ಮಿಥುನ್‌ ರೈ ಕ್ಷೇತ್ರವನ್ನು ಮತ್ತೆ ಪಡೆಯಲು 4 ವರ್ಷಗಳಿಂದ ಕ್ಷೇತ್ರಾದ್ಯಂತ ಸಂಚರಿಸಿ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸಿದ್ದರು. ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ತಲುಪಿಸಿ ಮತಗಳನ್ನಾಗಿ ಪರಿವರ್ತಿಸುವ ಪ್ರಯತ್ನವೂ ಸತತವಾಗಿ ನಡೆದಿತ್ತು. ಉತ್ಸಾಹಿ ಯುವಕನ ಕೈ ಮೇಲಾಗುವ ಸಾಧ್ಯತೆಯೂ ಗೋಚರಿಸಿತ್ತು. ತುಳು ಸಂಸ್ಕೃತಿ ಇತ್ಯಾದಿ ಬಗ್ಗೆ ಇದ್ದ ಆಸ್ಥೆಯೂ ಒಂದಿಷ್ಟು ಪೂರಕ ವಾತಾವರಣ ಸೃಷ್ಟಿಸಿತ್ತು.ಆದರೆ ಜನರೊಂದಿಗಿನ ಸಂಬಂಧವೂ ಸೇರಿದಂತೆ ಹಲವು ಧನಾತ್ಮಕ ಅಂಶಗಳು ಮತಗಳನ್ನಾಗಿ ಪರಿ ವರ್ತನೆಯಾಗದಿರುವುದು ಫ‌ಲಿತಾಂಶದಲ್ಲಿ ಕಂಡು ಬಂದಿದೆ. ಅದಕ್ಕೆ ಮಾತು-ಕೃತಿಯ ನಡುವೆ ಮತ ದಾರರು ವಿಶ್ವಾಸದ ಕೊರತೆಯನ್ನು ಕಂಡರೇ ಎಂಬು ದು ಚರ್ಚಾರ್ಹ. ಹಿಂದೂ ಮುಖಂಡರು, ಸಂಘಟನೆಗಳ ಬಗೆಗಿನ ಹಿಂದಿನ ಅವರ ಕೆಲವು ಹೇಳಿಕೆಗಳು, ಚುನಾವಣೆ ಸಂದರ್ಭ ಹಿಂದೂ ಪರ ಮಾತನಾಡಿದರೂ ಅವು ನಂಬಿಕೆ ಹುಟ್ಟಿಸುವುದರಲ್ಲಿ ಸೋತಿರಬಹುದು. ಹಾಗೆಯೇ ಕೆಲವು ಕ್ಷೇತ್ರದ ಸಮಸ್ಯೆ ಗಳಿಗೆ ಚುನಾವಣೆ ಪೂರ್ವ ಪ್ರಸ್ತಾಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದದಿರುವುದು ಇತ್ಯಾದಿ.

ಮತಗಳ ಲೆಕ್ಕಾಚಾರ
ಮತಗಳ ಲೆಕ್ಕ ನೋಡಿದರೆ ಬಿಜೆಪಿಯ ಗಳಿಕೆ ಮತ ಹಾಗೂ ಪ್ರಮಾಣ ಎರಡರಲ್ಲೂ ಕಡಿಮೆಯಾಗಿದೆ. 2018 ರಲ್ಲಿ ಬಿಜೆಪಿ ಗೆಲುವಿನ ಅಂತರ 29,799. ಈ ಬಾರಿ ಅದು 22, 468 ಕ್ಕೆ ಇಳಿದಿದೆ. ಒಟ್ಟಾರೆ ಮತ ಗಳಿಕೆಯಲ್ಲಿ 519 ಕಡಿಮೆಯಾದರೂ ಪ್ರಮಾಣದಲ್ಲಿ ಸುಮಾರು ಶೇ. 3 ರಷ್ಟು ಕಡಿಮೆಯಾಗಿದೆ. ಅದೇ ಸಂದ ರ್ಭದಲ್ಲಿ ಕಾಂಗ್ರೆಸ್‌ ಕಳೆದ ಬಾರಿಗಿಂತ 6, 812 ರಷ್ಟು ಮತ ಹೆಚ್ಚು ಪಡೆದು, ಶೇ. 3 ರಷ್ಟು ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಎಸ್‌ಡಿಪಿಐ 3 ಸಾವಿರದಷ್ಟು ಮತ ಪಡೆದೂ ಕಾಂಗ್ರೆಸ್‌ನ ಗಳಿಕೆ ಹೆಚ್ಚಾಗಿದೆ. ಆದರೆ ಒಟ್ಟಾರೆ ಮತ ಗಳಿಕೆಯ ಅಲೆಯನ್ನು ಗಮನಿಸಿದರೆ, ಇತ್ತೀಚಿನ ಮೂರು ಚುನಾವಣೆ (2013 ರಿಂದ)ಗಳಲ್ಲಿ ಪ್ರತೀ ಬಾರಿ ಸುಮಾರು 3 ರಿಂದ 4 ಸಾವಿರ ಮತಗಳು ಕಾಂಗ್ರೆಸ್‌ಗೆ ಏರಿಕೆಯಾಗಿದ್ದರೆ, ಬಿಜೆಪಿ ಗೆ ಶೇ. 100 ರಷ್ಟು ಹೆಚ್ಚಿಸಿಕೊಂಡಿರುವುದು ಉಲ್ಲೇಖಾರ್ಹ.

 ಭರತ್‌ ಶೆಟ್ಟಿಗಾರ್‌

 

ಮಂಗಳೂರು

ಪಕ್ಷದ ಗ್ಯಾರಂಟಿ ಕಾರ್ಡ್‌ಗಿಂತ ಅಭ್ಯರ್ಥಿಯ ಗ್ಯಾರಂಟಿಯೇ ಹೆಚ್ಚು ವಿಶ್ವಾಸಾರ್ಹ ಎನಿಸಿತೇ?
ಉಳ್ಳಾಲ: ಈ ಬಾರಿಯೂ ಶಾಸಕರಾಗಿ ಚುನಾಯಿತರಾದ ಯು.ಟಿ. ಖಾದರ್‌ ಅವರ ಮತಬುಟ್ಟಿಯ ಆರೋಗ್ಯ ಸರಿಯಾಗಿದೆಯೇ? ಫ‌ಲಿತಾಂಶೋತ್ತರ ಸಮೀಕ್ಷೆಯ ಪ್ರಕಾರ ಸಮಾಧಾನವೂ ಇದೆ, ಸಂಶಯವೂ ಇದೆ. ಸಮಾಧಾನದ ದೃಷ್ಟಿಕೋನದಲ್ಲಿ ಸದ್ಯಕ್ಕೆ “ಸರಿಇದೆ’. ಸಂಶಯದ ನೆಲೆಯಲ್ಲಿ ಎಲ್ಲೋ ಗುಂಡು ಸೂಜಿಯ ಮೊನೆ ಯಷ್ಟು ಬರಿಗಣ್ಣಿಗೆ ಕಾಣದಂಥ ಸಣ್ಣ ತೂತಾಗಿದೆ !

ಕಾಂಗ್ರೆಸ್‌ ಮತ್ತು ಬಿಜೆಪಿಯ ಒಟ್ಟೂ ಮತಗಳಿಕೆ ಯಲ್ಲಿ 2018 ರ ಬಳಿಕ ಅನುಕ್ರಮವಾಗಿ 10 ಸಾವಿರ, 20 ಸಾವಿರದಷ್ಟು ಹೆಚ್ಚಳ ಮಾಡಿಕೊಂಡಿವೆ. 2013 ರಲ್ಲಿ ಎರಡೂ ಪಕ್ಷಗಳು ಗಳಿಸಿದ ಮತಗಳ ಸಂಖ್ಯೆ 69450 ಮತ್ತು 40339. 2018 ರಲ್ಲಿ 80,813 ಮತ್ತು 61 074 ಆದವು. ಈ ಚುನಾವಣೆಯಲ್ಲಿ 82, 637 ಮತ್ತು 60, 429 ಆಗಿದೆ. ಕಾಂಗ್ರೆಸ್‌ 1,824 ಮತಗಳು ಹೆಚ್ಚಿಗೆ ಪಡೆದಿದೆ. ಬಿಜೆಪಿಯು 645 ಮತಗಳು ಕಡಿಮೆ ಆಗಿವೆ. ಇದು ಬಹಳ ದೊಡ್ಡ ವ್ಯತ್ಯಾಸವಲ್ಲ. ಆಡಳಿತ ವಿರೋಧಿ ಅಲೆಯ ಮಧ್ಯೆ ಮತ ಬ್ಯಾಂಕ್‌ಗೆ ದೊಡ್ಡ ಹೊಡೆತ ಬಿದ್ದಿಲ್ಲ ಎಂಬುದೇ ಸಮಾಧಾನ.

ಇದರ ಮಧ್ಯೆ ಹಿಂದಿನ ಬಾರಿಗಿಂತ ಸುಮಾರು 10 ಸಾವಿರ ಮತಗಳು ಹೆಚ್ಚು ಚಲಾವಣೆಯಾಗಿವೆ. ಈ ಹೆಚ್ಚುವರಿ ಮತಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬಂದದ್ದು ಕಡಿಮೆ. ಎಸ್‌ಡಿಪಿಐ ತನ್ನ ಹಳೆಯ ಮತ ಬ್ಯಾಂಕ್‌ ಜತೆ (2013 ರಲ್ಲಿ 4808 ಮತ ಪಡೆದಿತ್ತು) ಈ ಹೆಚ್ಚುವರಿಯೂ ಸೇರಿಸಿಕೊಂಡು 15, 054 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತೇ? ಇದು ಕಾಂಗ್ರೆಸ್‌ಗೆ ಬರಬೇಕಾದ ಮತಗಳು ಮಾರ್ಗ ಬದಲಾಯಿಸಿ ದವೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಕರಾವಳಿಯಲ್ಲಿ ಬಿಜೆಪಿ ಪರ ಅಲೆ ಇದ್ದಾಗ್ಯೂ (ಈ ಹಿಂದಿನ ಚುನಾವಣೆಯಲ್ಲೂ) ಕಾಂಗ್ರೆಸ್‌ ಅಭ್ಯರ್ಥಿಯ ಜಯಕ್ಕೆ ಪಕ್ಷಕ್ಕಿಂತಲೂ ವೈಯಕ್ತಿಕ ವರ್ಚಸ್ಸಿನ ಮೇಲೆ ಭದ್ರವಾಗಿರುವ ಮತ ಬ್ಯಾಂಕೇ ಕಾರಣ ಎಂಬುದು ಸ್ಪಷ್ಟ. ಎಸ್‌ಡಿಪಿಐ ಈ ಬಾರಿ ಕಾಂಗ್ರೆಸ್‌ ಗೆಲುವಿಗೆ ಅಡ್ಡಿಪಡಿಸ ಬಹುದೆಂಬ ಲೆಕ್ಕಾಚಾರ ಸುಳ್ಳಾಯಿತು. ಒಂದು ವೇಳೆ 35 ಸಾವಿರದಷ್ಟು ಮತವೇನಾದರೂ ಗಳಿಸಿದ್ದರೆ ಕಾಂಗ್ರೆಸ್‌ಗೆ ಕೊಂಚ ಕಷ್ಟವಾಗುತ್ತಿತ್ತು. 2018ರಲ್ಲಿ ಎಸ್‌ಡಿಪಿಐ ಸ್ಪರ್ಧಿಸಿರಲಿಲ್ಲ. ಆದರೆ ಜೆಡಿ ಎಸ್‌, ಸಿಪಿಐ(ಎಂ) ಸೇರಿ 4 ಮಂದಿ ಸುಮಾರು 7, 400 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆ ಮತಗ ಳೊಂದಿಗೆ ಉಳಿದ ಮತಗಳೂ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಮಧ್ಯೆ ಹಂಚಿಕೆ ಆದಂತಿದೆ.

ಖಾದರ್‌ ಮತ ಗಳಿಕೆಯಲ್ಲಿ ಪಕ್ಷದ ಗ್ಯಾರಂಟಿ ಕಾರ್ಡ್‌ಗಿಂತ ಅಭ್ಯರ್ಥಿಯ ಗ್ಯಾರಂಟಿಯೇ ಹೆಚ್ಚು ವಿಶ್ವಾಸಾರ್ಹ ಎನಿಸಿದಂತಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆ ವಿಳಂ ಬದ ಜತೆ ಹೊಸ ಮುಖವಾದ ಕಾರಣ ತಂತ್ರಗಾರಿಕೆಗೆ ಹೆಚ್ಚು ಸಮಯ ತಗಲಿತು. ಆದರೆ ಅದರ ಅನುಷ್ಠಾನಕ್ಕೆ ಸಮಯ ಸಾಕಾಗಲಿಲ್ಲ. ವೈಯಕ್ತಿಕ ವರ್ಚಸ್ಸು, ಅಭಿವೃದ್ಧಿ ಹಾಗೂ ಸಾಮರಸ್ಯವೇ ಎರಡೂ ಪಕ್ಷಗಳ ಪ್ರಮುಖ ವಿಷಯವಾಗಿತ್ತು.

ಇದಲ್ಲದೇ, ಕ್ಷೇತ್ರದ ಅತೀ ದೊಡ್ಡ ಗ್ರಾಮ ಹಾಗೂ ಬಿಜೆಪಿಯ ಭದ್ರಕೋಟೆಯಾಗಿದ್ದ ಸೋಮೇಶ್ವರ ಪುರ ಸಭೆಯಲ್ಲಿ ಕಳೆದ ಬಾರಿ 4,500 ಮತ ದೊರೆತಿದ್ದರೆ, ಈ ಬಾರಿ 3,556 ಕ್ಕೆ ಇಳಿಕೆಯಾಗಿದೆ. ಇದು ಕಾಂಗ್ರೆಸ್‌ ಪಾಲಾದಂತಿದೆ. ಹೀಗೆಯೇ ಕೆಲವು ಬೂತ್‌ಗಳಲ್ಲಿ ಬಿಜೆಪಿ ಮತಗಳೂ ವರ್ಗಾವಣೆಯಾದದ್ದು ಗೆಲುವಿನ ಅಂತರ ಹೆಚ್ಚಾಗಲು ಸಹಾಯ ಮಾಡಿದ್ದಂತೆ ತೋರುತ್ತಿದೆ.

 ವಸಂತ ಕೊಣಾಜೆ

 

ಮಂಗಳೂರು ಉತ್ತರ

ಸ್ಪರ್ಧೆ ತ್ರಿಕೋನವೆಂದಿದ್ದರೂ ಕಾದಾಟ ನಡೆದದ್ದು ಮಾತ್ರ ದ್ವಿಕೋನದಲ್ಲಿ
ಮಂಗಳೂರು: “ಇಬ್ಬರ ಜಗಳ ಮೂರನೆಯವನಿಗೆ ಲಾಭ’ ಎಂಬ ನಾಣ್ನುಡಿ ಇಂದಿಗೂ ಅನ್ವಯ. ಮಂಗ ಳೂರು ನಗರ ಉತ್ತರ ಕ್ಷೇತ್ರದಲ್ಲಿ ಆದದ್ದೂ ಅದೇ. ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ನ ಬಂಡಾಯ ಜೆಡಿಎಸ್‌ ಅಭ್ಯರ್ಥಿ ಗುದ್ದಾಡದಿದ್ದರೆ ಬಿಜೆಪಿಯನ್ನು ಕೊನೇ ಪಕ್ಷ ಕಟ್ಟಿ ಹಾಕಬಹುದಿತ್ತೇನೋ? ಸಾಧ್ಯವಾಗಲಿಲ್ಲ.
ಚುನಾವಣೆ ಘೋಷಣೆಗೆ ಮೊದಲೆ ಬಿಜೆಪಿ ಬೂತ್‌ ಮಟ್ಟದಲ್ಲಿ ಸಿದ್ಧತೆ ಆರಂಭಿಸಿತ್ತು. ಕಾರ್ಯಕರ್ತರು ಪ್ರತೀ ಬೂತ್‌ನ ಮನೆಗಳಿಗೆ ಮೂರು ಬಾರಿ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಇದಕ್ಕೆ ಬುನಾದಿಯಾದದ್ದು ಹಿಂದುತ್ವ, ಹಾಗೂ ಶಾಸಕ ಡಾ| ಭರತ್‌ ಶೆಟ್ಟಿಅವರ ಅವಧಿಯ ಅಭಿವೃದ್ಧಿ ಕೆಲಸಗಳು.

ಇದು ಬಿಜೆಪಿಗೆ ಆರಂಭಿಕ ಹಂತದಲ್ಲಿ ಸ್ವಲ್ಪ ಮನ್ನಡೆ ಒದಗಿಸಿದ್ದು ನಿಜ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯ ಆಯ್ಕೆ ಬಗ್ಗೆಯೇ ಗೊಂದಲವಿತ್ತು. ಹೊಸಮುಖ ಇನಾಯತ್‌ ಆಲಿ ತಾನೇ ಅಭ್ಯರ್ಥಿ ಎನ್ನುತ್ತಿದ್ದರೆ, ಮಾಜಿ ಶಾಸಕ ಮೊಹಿದ್ದೀನ್‌ ಬಾವಾ ತಾನು ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಇದು ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿತು.
ಈ ಸಮಯವನ್ನು ಬಿಜೆಪಿ ಮತದಾರರ ಮನ ವೊಲಿಸಲು ಬಳಸಿತು. ಅಂತಿಮವಾಗಿ ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಾಗ ಇನಾಯತ್‌ ಆಲಿಗೆ ಅವಕಾಶ ಸಿಕ್ಕಿತು. ಆಲಿ ಚುನಾವಣಾ ರಾಜಕಾರಣಕ್ಕೆ ಹೊಸಬರು. ಇದರಿಂದ ಅಸಮಾಧಾನಗೊಂಡ ಮೊಹಿದ್ದೀನ್‌ ಬಾವಾ ಜೆಡಿಎಸ್‌ ಗೆ ಸೇರಿ ಸ್ಪರ್ಧಿಸಿದರು.

ಒಂದೇ ಸಮುದಾಯದ ಇಬ್ಬರ ಜಗಳ ಬಿಜೆಪಿಗೆ ಅನುಕೂಲವಾಯಿತು. ಜತೆಗೆ ಹಿಂದುತ್ವ, ಮೋದಿ ಪರ ಅಲೆ ಕೈ ಹಿಡಿಯಿತು. ಹಾಗಾಗಿ ಒಟ್ಟು 18 ಸುತ್ತುಗಳ ಪೈಕಿ 15 ಸುತ್ತುಗಳಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿತ್ತು. ಸುರತ್ಕಲ್‌ ಭಾಗದ ಕಾಟಿಪಳ್ಳ, ಕೃಷ್ಣಾಪುರ ಸುತ್ತಮುತ್ತಲಿನ ಬೂತ್‌ಗಳಲ್ಲಿ ತುಸು ಹಿನ್ನಡೆ ಉಂಟಾದರೂ ಉಳಿದೆಡೆ ಬಿಜೆಪಿ ಪರ ಅಲೆಇತ್ತು. ಕಾಂಗ್ರೆಸ್‌ಗೆ ಮೂರು ಸುತ್ತುಗಳಲ್ಲಿ ಮುನ್ನಡೆ ಸಿಕ್ಕರೆ, ಜೆಡಿಎಸ್‌ ಯಾವ ಸುತ್ತಿನಲ್ಲೂ ಮುನ್ನಡೆ ಗಳಿಸಲಿಲ್ಲ. ಪರಿಣಾಮ ಬೀರದ “ಗ್ಯಾರಂಟಿ ಕಾರ್ಡ್‌’ಚುನಾವಣೆ ಘೋಷಣೆಯ ಆರಂಭದಿಂದಲೂ ಕಾಂಗ್ರೆಸ್‌ನ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಗ್ಯಾರಂಟಿ ಕಾರ್ಡ್‌ ನೀಡಿದ್ದರು. ಆದರೆ ಅವು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಜತೆಗೆ ಬಾವಾ ಜೆಡಿಎಸ್‌ ನಿಂದ ಸ್ಪರ್ಧಿಸಿ ಕಾಂಗ್ರೆಸ್‌ಮತ ಬ್ಯಾಂಕ್‌ಗೆ ಕೈ ಹಾಕಿದರು. ಜತೆಗೆ ಕ್ಷೇತ್ರದ ಅಭ್ಯರ್ಥಿ ಇನಾಯತ್‌ ಅಲಿ ಅವರು ಬೇರೆ ಕ್ಷೇತ್ರದವರಾದ ಕಾರಣ ಜನ ಮನ್ನಣೆಯ ಕೊರತೆ ಅನುಭವಿಸಿದರು.

ಮೊದಿನ್‌ ಬಾವಾ ಅವರು ಜೆಡಿಎಸ್‌ ಸ್ಪರ್ಧಿ ಯಾದಾಗ ಕಾಂಗ್ರೆಸ್‌ ಮತ್ತು ಬಿಜೆಪಿಯ ಕೆಲವು ಕೆಲವು ಸಾವಿರ ಮತಗಳನ್ನಾದರೂ ಕಸಿದುಕೊಂಡಾರು ಎಂಬ ನಿರೀಕ್ಷೆ ಇತ್ತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಹ ಪ್ರಚಾರದಲ್ಲಿ ಭಾಗವಹಿಸಿದ್ದರು. ಅದು ಹುಸಿಯಾಯಿತು. ಬದಲಾಗಿ ಬಿಜೆಪಿಗೆ ಈ ಬಾರಿ ಕೊಂಚ ಮತಗಳು ಹೆಚ್ಚಾಗಿದ್ದರೆ, ಕಾಂಗ್ರೆಸ್‌ ಸುಮಾರು ಶೇ. 2 ರಷ್ಟು ಮತ ಕಳೆದುಕೊಂಡಿದೆ. ಜೆಡಿಎಸ್‌ 5,256 ಮತಗಳಿಗಷ್ಟೇ ಸೀಮಿತಗೊಂಡಿತು. ಆದರೆ ಸ್ಪರ್ಧೆಯ ಮೇಲೆ ನೇರ ಪರಿಣಾಮ ಬೀರಲು ಕೊನೆಗೂ ಸಾಧ್ಯವಾಗಲಿಲ್ಲ.

 ನವೀನ್‌ ಇಳಂತಿಲ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.