ಚನ್ನರಾಯಪಟ್ಟಣಕ್ಕೆ ಮತ್ತೂಮ್ಮೆ ಬರದ ಭೀತಿ!
Team Udayavani, May 20, 2023, 4:09 PM IST
ಚನ್ನರಾಯಪಟ್ಟಣ: ತಾಲೂಕಿಗೆ ಪ್ರಸಕ್ತ 2023ನೇ ಸಾಲಿನಲ್ಲಿಯೂ ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಮತ್ತೂಮ್ಮೆ ಬರದ ಭೀತಿ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿದೆ.
ತಾಲೂಕಿನಲ್ಲಿ ಪೂರ್ವ ಮುಂಗಾರು ವಾಡಿಕೆಯಂತೆ ಹೆಚ್ಚು ಮಳೆಯಾಗಿದೆ. ಆದರೆ, ರೈತರು ಕೃಷಿ ಮಾಡಲು ಯೋಗ್ಯವಾರುವ ರೀತಿಯಲ್ಲಿ ಮಳೆ ಆಗಿಲ್ಲ. ವಾಡಿಕೆಯಂತೆ 106.4 ಮಿ.ಮೀ.ಮಳೆಯಾಗಬೇಕಿತ್ತು. ಆದರೆ, 128 ಮಿ.ಮೀ. ಮಳೆಯಾಗಿದೆ. ಅಗತ್ಯಕ್ಕಿಂತ ಹೆಚಚು ಮಳೆಯಾದರೂ ಪೂರ್ವ ಮುಂಗಾರು ಕೂಡಾ ವೈಫಲ್ಯ ಹೊಂದಿದೆ.
ಬಿತ್ತನೆಯಲ್ಲಿ ಹಿನ್ನೆಡೆ: ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಈ ಮಳೆ ಕೇವಲ ಮೂರು ದಿವಸ ಸುರಿದಿರುವುದು ಬಿಟ್ಟರೆ, ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಈಗಾಗಲೇ ತಾಲೂಕಿನಲ್ಲಿ ಮೂರು ವಾರಿ ವರಣನ ಆಗಮನದಿಂದ ರೈತ ಸಂತಸಪಟ್ಟು ತಮ್ಮ ಕೃಷಿ ಭೂಮಿ ಅಣಿ ಮಾಡಿ ಬಿತ್ತನೆಗೆ ಸಕಲ ರೀತಿಯಲ್ಲಿ ಸಿದ್ಧರಾಗಿ ಮಳೆಯನ್ನು ಎದುರು ನೋಡುತ್ತಿದ್ದಾರೆ, ಈ ವಾರದಲ್ಲಿ ಮಳೆ ಬಾರದೆ ಹೋದರೆ ತಾಲೂಕಿನಲ್ಲಿ ಧಾನ್ಯ ಬೆಳೆ ಮಾಡುವುದನ್ನು ರೈತ ಕೈ ಬಿಟ್ಟು ಬರದ ಭೀತಿಗೆ ಸಿಲುಕಲಿದ್ದಾರೆ.
ದ್ವಿದಳದ ಕೊರತೆ: ತಾಲೂಕಿನಲ್ಲಿ 40,441 ಹೆಕ್ಟೇರ್ ಪ್ರದೇಶ ದ್ವಿದಳ ಬೆಳೆಗೆ ಯೋಗ್ಯವಾಗಿದ್ದು, ಪ್ರಸಕ್ತ ವರ್ಷ 447 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆ ಮಾಡಿದ್ದು, ಶೇ.31ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೆಸರು 130 ಹೆಕ್ಟೇರ್, ಹಲಸಂದೆ 172 ಹೆಕ್ಟೇರ್ ಪ್ರದೇಶ ಉದ್ದು, ಎಳ್ಳು ಬಿತ್ತನೆ ಮಾಡಿಲ್ಲ, 130 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಆಗಿದೆ ಹೊಸದಾಗಿ 5 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಇನ್ನೇನಿದ್ದರು ರಾಗಿ ಜೋಳೆ: ತಾಲೂಕಿನಲ್ಲಿ ಮಳೆ ಕೃಷಿಗೆ ಯೋಗ್ಯವಾಗದ ರೀತಿಯಲ್ಲಿ ಬೀಳದೆ ಇರುವುದರಿಂದ ಈ ವಾರದಲ್ಲಿ ಮಳೆ ಆಗದೆ ಹೋದರೆ ರೈತರು ದ್ವಿದಳ ಧಾನ್ಯ ಬೆಳೆಯನ್ನು ಬಿಟ್ಟು ರಾಗಿ ಹಾಗೂ ಮುಸುಕಿನ ಜೋಳ ಬೆಳೆಯ ಕಡೆ ಮುಖ ಮಾಡಬೇಕಿದೆ.
ಮುಂಗಾರು ಎದುರು ನೋಡುತ್ತಿರುವ ರೈತ: ಪೂರ್ವ ಮುಂಗಾರು ಉತ್ತಮವಾಗಿ ಆಗಿದ್ದರೆ ತಾಲೂಕಿನ ರೈತರು ಧನ್ಯಾ ಬೆಳೆಗಳನ್ನು ಮಾಡಿ ಮನೆ ವೆಚ್ಚಕ್ಕೆ ಹಣ ನೋಡುತ್ತಿದ್ದರು ಹಾಗೂ ರಾಸುಗಳ ಮೇವಿಗಾಗಿ ಜೋಳ ಬೆಳೆಯಲು ಮುಂದಾಗುತ್ತಿದ್ದ. ಆದರೆ, ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಹಾಗಾಗಿ, ವಿಧಿ ಇಲ್ಲದೆ ಜೂನ್ ಮೊದಲ ವಾರಕ್ಕೆ ಪ್ರಾರಂಭವಾಗುವ ಮುಂಗಾರನ್ನು ಎದುರು ನೋಡುವಂತಾಗಿದೆ.
ಮಳೆ ಆಗಮನದ ನಿರೀಕ್ಷೆ: ಬುಧವಾರದಿಂದ ಮೂರು ಹದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.4ರ ನಂತರ ನೈರುತ್ಯ ಮುಂಗಾರು ಕೇರಳ ಪ್ರವೇಶ ಮಾಡಲಿದ್ದು, ಜೂ.9ರಂದು ರಾಜ್ಯಕ್ಕೆ ಮುಂಗಾರು ಆಗಮಿಸಲಿದೆ ಎಂದು ಹಮಾಮಾನ ಇಲಾಖೆ ಮಾಹಿತಿ ನೀಡಿದೆ. ಇಲಾಖೆ ನೀಡಿರುವ ಮಾಹಿತಿ ಅನುಸರಿಸಿ ರೈತರು ತಮ್ಮ ಕೃಷಿ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧರಿದ್ದಾರೆ.
ತೋಟಗಾರಿಗೆ ಬಿತ್ತನೆ ಪ್ರಮಾಣ ಕುಂಠಿತ: ಪೂರ್ವ ಮುಗಾರು ಕೈ ಕೊಟ್ಟಿರುವುದರಿಂದ ಬಿತ್ತನೆ ಕಾರ್ಯ ಕುಂಠಿತವಾಗಿದೆ. ತೋಟಗಾರಿಕೆ ಬಳೆಯಾದ ಆಲೂಗಡ್ಡೆಯನ್ನು ದಂಡಿಗನಹಳ್ಳಿ, ಬಾಗೂರು ಹೋಬಳಿಯಲ್ಲಿ ಹೆಚ್ಚು ಬೆಳೆಯುತ್ತಿದ್ದು ಕಸಬಾ- ನುಗ್ಗೇಹಳ್ಳಿ ಹೋಬಳಿಯ ಕೆಲ ಗ್ರಾಮ ಸೇರಿದಂತೆ 900 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಆಗಬೇಕಿತ್ತು. ಇದುವರೆಗೆ ಯಾವುದೇ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಟೊಮೇಟೋ 220 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದ್ದು, ಕೊಳವೆ ಬಾವಿ ಹೊಂದಿರುವ 125 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮೆಣಸಿನಕಾಯಿ 200 ಹೆಕ್ಟೇರ್‌ಗೆ ಕೇವಲ 30 ಹೆಕ್ಟೇರ್‌ನಲ್ಲಿ ಮಾತ್ರ ರೈತ ಬೆಳೆದಿದ್ದಾನೆ.
ಇಲಾಖೆಯಲ್ಲಿ ಬಿತ್ತನೆ ಬೀಜ ದಾಸ್ತಾನು: ಈಗಾಗಲೆ ಸರ್ಕಾರ ಬಿತ್ತನೆ ಬೀಜವನ್ನು ತಾಲೂಕು ಕೃಷಿ ಇಲಾಖೆಗೆ ಸರಬರಾಜು ಮಾಡಿದ್ದು, ತಾಲೂಕಿನಲ್ಲೇ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜವನ್ನು ರವಾನೆ ಮಾಡಲಾಗಿದೆ. ಕೊಳವೆ ಬಾವಿ ಹೊಂದಿರುವವರನ್ನು ಹೊರತು ಪಡಿಸಿದರೆ, ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಬೀಜ ಪಡೆಯಲು ರೈತರು ಕೃಷಿ ಇಲಾಖೆಗೆ ಆಗಮಿಸದೆ ಇರುವುದಿಂದ ದಾಸ್ತಾನು ಇಲಾಖೆಯಲ್ಲಿ ಉಳಿದಿದೆ.
ಈಗಾಗಲೇ ಜಿಲ್ಲಾಡಳಿತ ಪೂರ್ವ ಮುಂಗಾರು ಬೆಳೆಯ ಬಿತ್ತನೆ ಬೀಜ, ಕೃಷಿಗೆ ಅಗತ್ಯ ಔಷಧ, ಗೊಬ್ಬರವನ್ನು ಸರಬರಾಜು ಮಾಡಿದೆ. ಆದರೆ, ಮಳೆ ಕೊರತೆಯಿಂದ ರೈತರು ಪಡೆಯಲು ಮುಂದೆ ಬಂದಿಲ್ಲ, ಈ ವಾರದಲ್ಲಿ ಮಳೆಯಾಗದಿದ್ದರೆ ತಾಲೂಕಿನಲ್ಲಿ ವಿವಿಧ ಕಾಳು ಬೆಳೆ ಬೆಳೆಯುವುದನ್ನು ಮರೆಯ ಬೇಕಾಗುತ್ತದೆ. -ಎಂ.ಎಸ್.ಜನಾರ್ದನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ
ಯುಗಾದಿ ನಂತರ ವರ್ಷಧಾರೆ ಸಕಾಲಕ್ಕೆ ಆಗುವ ನಿರೀಕ್ಷೆ ಹೊಂದಿ ದ್ದೆವು. ಆದರೆ, ಮುಂಗಾರು ಆರಂಭದಲ್ಲಿ ಕುಂಠಿತ ಆಗಿದೆ. ಕೃಷಿಗಾಗಿ ಭೂಮಿಯನ್ನು ಸಿದ್ಧಪಡಿಸಿದ್ದೆವು. ಮಳೆಗಾಗಿ ಎದುರು ನೋಡು ತ್ತಿದ್ದೇವೆ. ದ್ವಿದಳ ಬೆಳೆ ಮಾಡಲು ಮಳೆ ಬರ ಲಿಲ್ಲ. ರಾಗಿ ಬೆಳೆಗಾದರು ಮಳೆ ಬಂದರೆ ಸಾಕು. -ಕಾಂತರಾಜು, ಕೃಷಿಕ, ಕುರುವಂಕ
-ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.