ಬೆಳಗಾವಿ: ಇ-ಸೈಕಲ್‌ಗೂ ಬಳಕೆ ಜಾಗೃತಿ ಕೊರತೆ
ಸಾರ್ವಜನಿಕರಿಗೆ ಇದನ್ನು ಬಳಸುವ ಬಗ್ಗೆ ಅರಿವು ಇದೆ
Team Udayavani, May 20, 2023, 5:15 PM IST
ಬೆಳಗಾವಿ: ಪರಿಸರ ಸ್ನೇಹಿ ಸಾರಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ 300 ಸೈಕಲ್, ಇ-ಬೈಸಿಕಲ್, ಇ-ಸ್ಕೂಟರ್‌ಗಳಿದ್ದು, ಆದರೆ ಬೆಳಗಾವಿ ನಗರದ ಜನಸಂಖ್ಯೆಗೆ ಅನುಗುಣವಾಗಿ ಅಂದುಕೊಂಡಷ್ಟು ಬಳಕೆ ಆಗಿಲ್ಲ. ಐದು ತಿಂಗಳಲ್ಲಿ ಕೇವಲ 10,018 ಜನ ಮಾತ್ರ ಇ-ಸೈಕಲ್‌ಗಳನ್ನು ಬಳಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 15 ಡಿಸೆಂಬರ್ 2022ರಲ್ಲಿ ಇ-ಸೈಕಲ್, ಇ-ಸ್ಕೂಟರ್‌ಗಳನ್ನು ನಗರದಲ್ಲಿ ಆರಂಭಿಸಲಾಗಿದೆ. ಕೈಗೆಟಕುವ ದರದಲ್ಲಿ ನಗರದ ಹಲವು ಕಡೆಗಳಲ್ಲಿ ಸೆ„ಕಲ್‌ಗಳ ಬಳಕೆಗೆ ಅವಕಾಶ ಇದ್ದರೂ ಜನರು ಇದರ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಅಂದುಕೊಂಡಷ್ಟು ಜಾಗೃತಿ, ಅರಿವು
ಇಲ್ಲದಿರುವು ಇದಕ್ಕೆ ಪ್ರಮುಖ ಕಾರಣವಾಗಿದೆ.
29 ಸೈಕಲ್ ನಿಲ್ದಾಣ: ನಗರದ ಪ್ರಮುಖ 29 ಕಡೆಗಳಲ್ಲಿ ಇ-ಸೈಕಲ್, ಇ-ಬೆ„ಕ್ ನಿಲ್ದಾಣಗಳನ್ನು ಮಾಡಲಾಗಿದೆ. ಈ ಸೇವೆ ಆ್ಯಪ್ ಮೂಲಕ ಬಳಕೆ ಮಾಡಲಾಗುತ್ತದೆ. ಸ್ಮಾರ್ಟ್ ಫೋನ್ ಇದ್ದವರು ಯಾನಾ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಇ-ವಾಹನ, ಇ-ಸೈಕಲ್‌ಗಳನ್ನು ಬಳಸಬಹುದಾಗಿದೆ.
ವಾಯು ಮಾಲಿನ್ಯಕ್ಕೆ ಕಾರಣವಾಗುವ ಇಂಧನ ಚಾಲಿತ ವಾಹನಗಳನ್ನು ಬಿಟ್ಟು ಇ-ಸೆ„ಕಲ್ ಬಳಸಲಿ ಎಂಬುದೇ ಈ ಯೋಜನೆಯ ಉದ್ದೇಶ. ಸೆ„ಕಲ್ 100, ಇ-ಸೈಕಲ್ 100 ಹಾಗೂ ಇ-ಸ್ಕೂಟರ್ 100 ಇವೆ. ಬೆಳಗಾವಿ ನಗರದಲ್ಲಿ ಸರಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಐದು ತಿಂಗಳಲ್ಲಿ ಕೇವಲ 10,018 ಜನರು ಮಾತ್ರ ಇ-ಸೆ„ಕಲ್‌ಗಳನ್ನು ಬಳಕೆ ಮಾಡಿದ್ದಾರೆ.
ಅಂದುಕೊಂಡಷ್ಟು ಗುರಿ ತಲುಪಲು ಆಗಿಲ್ಲ. 10,823 ಕಿ.ಮೀ. ಸೈಕಲ್ ಮೇಲೆ ಪ್ರವಾಸ ಮಾಡಿದ್ದಾರೆ. 12,625 ಜನ ಯಾನಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಇ-ಸೆ„ಕಲ್ ಬಳಕೆ ಸ್ಮಾರ್ಟ್ ಫೋನ್ ಮೂಲಕವೇ ಮಾಡಬೇಕಾಗುತ್ತದೆ.
ಹಿರಿಯರು, ವೃದ್ಧರು ಸ್ಮಾರ್ಟ್ ಫೋನ್ ಬಳಕೆ ಮಾಡುವುದು ವಿರಳ. ಹೀಗಾಗಿ ಇವರಿಗೆ ಇ-ಸೈಕಲ್ ಬಳಸುವ ಮನಸ್ಸಿದ್ದರೂ ಸ್ಮಾರ್ಟ್ ಪೋನ್ ಇಲ್ಲದಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಜತೆಗೆ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಮಹಾನಗರ
ಪಾಲಿಕೆಯಿಂದ ಅಂದುಕೊಂಡಷ್ಟು ಜಾಗೃತಿಯೂ ಆಗುತ್ತಿಲ್ಲ. ಯಾನಾ ಎಂಬ ಕಂಪನಿಗೆ ಈ ಯೋಜನೆಯನ್ನು ನಿರ್ವಹಿಸಲು ಗುತ್ತಿಗೆ ನೀಡಿ ಕೈ ತೊಳೆದು ಕುಳಿತಿವೆ.
ಸೈಕಲ್ ಬಳಕೆ ಪ್ರಕ್ರಿಯೆ
ಸ್ಮಾರ್ಟ್ ಮೊಬೈಲ್‌ನಲ್ಲಿ ಮೊದಲಿಗೆ ಯಾನಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್‌ನಲ್ಲಿ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಕೊಂಡು, ನೋಂದಣಿ ಮಾಡಿದ ವ್ಯಕ್ತಿ ಮಾತ್ರ ಈ ಸೈಕಲ್‌ನ ಬಳಕೆ ಮಾಡಬೇಕಾಗುತ್ತದೆ. ಯಾನಾ ಆ್ಯಪ್‌ನಿಂದ ಪಾಸ್‌ವರ್ಡ್ ಲಭ್ಯವಾಗುತ್ತದೆ. ಜತೆಗೆ ಪೇಟಿಎಂ ನಲ್ಲಿ ಕನಿಷ್ಠ 100 ರೂ. ಹಣ ಖಾತೆಯಲ್ಲಿ ಇರಬೇಕಾಗುತ್ತದೆ. ಯಾನಾ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿದ ಬಳಿಕ ಸೆ„ಕಲ್, ಇ-ಸೈಕಲ್, ಇ-ಸ್ಕೂಟರ್‌ನ ಲಾಕ್ ತೆರೆದುಕೊಳ್ಳುತ್ತದೆ. ನಗರದ 29 ಕಡೆಗಳಲ್ಲಿ ಇರುವ ಸೈಕಲ್ ನಿಲ್ದಾಣಗಳ ಲೋಕೇಷನ್ ಸಿಗುತ್ತದೆ. ನಮಗೆ ಅಗತ್ಯ ಇರುವ ಕಡೆಗೆ ಹೋಗಿ ಸಮೀಪದ ನಿಲ್ದಾಣದಲ್ಲಿ ಸೈಕಲ್ ನಿಲ್ಲಿಸಿ ಕ್ಯೂಆರ್ ಕೋಡ್ ಸಹಾಯದಿಂದ ಸೈಕಲ್ ಲಾಕ್ ಮಾಡಬಹುದಾಗಿದೆ.
ನಾವು ಬಳಸಿದ ಸಮಯಕ್ಕೆ ತಕ್ಕಂತೆ ನಮ್ಮ ಪೇಟಿಎಂ ದಿಂದ ಹಣ ಕಂಪನಿಗೆ ಹಣ ಸಂದಾಯವಾಗುತ್ತದೆ.
ಸ್ಮಾರ್ಟ್ ಫೋನ್ ಇಲ್ಲದವರಿಗೆ ಕಷ್ಟ ಕಷ್ಟ ನಗರದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು, ಆಟೋ ರಿಕ್ಷಾಗಳ ಬಳಕೆ
ಹೆಚ್ಚಾಗುತ್ತಿದ್ದರೂ ಸೈಕಲ್ ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಕೆಲವು ಜನರಿಗೆ ಸ್ಮಾರ್ಟ್ ಪೋನ್ ಇಲ್ಲದ್ದಕ್ಕೆ
ಇದರ ಬಳಕೆ ಗಗನಕುಸುಮವಾಗಿದೆ. ಸ್ಮಾರ್ಟ್ ಪೋನ್ ಇಲ್ಲದಿದ್ದರೂ ಬಳಸುವ ಅವಕಾಶ ಸಿಕ್ಕರೆ ಮತ್ತಷ್ಟು ಜನರು ಬಳಸಲು ಸಾಧ್ಯವಾಗುತ್ತದೆ.
ಇ-ಸೈಕಲ್, ಇ-ಸ್ಕೂಟರ್‌ಗಳನ್ನು ಆರಂಭಿಸಿರುವುದು ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಿದೆ. ಆದರೆ ಜನರ ಬಳಕೆಗೆ
ಅನುಕೂಲ ಆಗುವಂಥ ಪ್ರಕ್ರಿಯೆ ಅಳವಡಿಸಬೇಕು. ಆ್ಯಪ್ ಬದಲು ಆಯಾ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ನಿರ್ವಹಣೆಗೆ ಮಾಡಲು ನಿಲ್ಲಿಸಿದರೆ ಮತ್ತಷ್ಟು ಬೇಗ ಈ ಪ್ರಕ್ರಿಯೆ ಆಗಿ ಸೈಕಲ್ ಗಳ ಬಳಕೆ ಹೆಚ್ಚೆಚ್ಚು ಆಗಲು ಸಾಧ್ಯವಿದೆ. ಇದರಿಂದ ಉದ್ಯೋಗ ಅವಕಾಶವನ್ನು ಸೃಷ್ಟಿಸಿದಂತೆಯೂ ಆಗುತ್ತದೆ. ಎಲ್ಲ ನಿಲ್ದಾಣಗಳಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಬೇಕು.
∙ ಶಂಕರ ಪಾಟೀಲ, ಸದಸ್ಯ, ಮಹಾನಗರ ಪಾಲಿಕೆ
ಇ-ಸೈಕಲ್ ನಿಲ್ದಾಣಗಳು
ಹಿಂಡಲಗಾ ಗಣಪತಿ ಮಂದಿರ ಹಿಂಬದಿ
ಚನ್ನಮ್ಮ ಸರ್ಕಲ್
ಖಾನಾಪುರ ರಸ್ತೆ ಬಸ್ ನಿಲ್ದಾಣ
ದೇಶಮುಖ ರಸ್ತೆ ದಳವಿ ಕಾಂಪ್ಲೆಕ್ಸ್
ಬಸವಣ್ಣ ಸರ್ಕಲ್ ನೆಹರು ನಗರ
ಭರತೇಶ ಹೋಮಿಯೋಪಥಿಕ್ ಕಾಲೇಜು, ಕಿಲ್ಲಾ
ಹನುಮಾನ ನಗರ ವೃತ್ತ
ಧರ್ಮವೀರ ಸಂಭಾಜಿ ಸರ್ಕಲ್
ಡಿಜಿಟಲ್ ಲೈಬ್ರರಿ, ಶಿವಾಜಿ ಗಾರ್ಡನ್
ಜಿಲ್ಲಾ ಕೋರ್ಟ್ ಆವರಣ
ಆರ್‌ಟಿಒ ಸರ್ಕಲ್
ಗೋವಾ ವೇಸ್ ಮಹಾನಗರ ಪಾಲಿಕೆ ಕಟ್ಟಡ
ಗೋಗಟೆ ಸರ್ಕಲ್
ಲೇಲೇ ಮೈದಾನ ಟಿಳಕವಾಡಿ
ಪಣಜಿ-ಬೆಳಗಾವಿ ರಸ್ತೆ
ಜೆಎನ್‌ಎಂಸಿ ರಸ್ತೆ-ಕೆಪಿಟಿಸಿಎಲ್ ರಸ್ತೆ
ಕೊಲ್ಲಾಪುರ ವೃತ್ತ
ಕೋಟೆ ಕೆರೆ
ಮುಖ್ಯ ಬಸ್ ನಿಲ್ದಾಣ
ಮಹಾಂತೇಶ ನಗರ ಬಸ್ ನಿಲ್ದಾಣ
ಗಾಲ್ಫ್ ಕೋರ್ಸ್
ಲಿಂಗರಾಜ ಕಾಲೇಜು ರಸ್ತೆ
ಕೆಎಲ್‌ಇ ಆಸ್ಪತ್ರೆ
ಆರ್.ಎನ್. ಶೆಟ್ಟಿ ಕಾಲೇಜು ಎದುರು
ಆರ್‌ಪಿಡಿ ಕಾಲೇಜು ಕ್ರಾಸ್
ಶ್ರೀನಗರ ಗಾರ್ಡನ್
ಸುವರ್ಣ ವಿಧಾನಸೌಧ
ಉದ್ಯಮಬಾಗ ಬಸ್ ನಿಲ್ದಾಣ, ಖಾನಾಪುರ ರÓ
ಸ್ಮಾರ್ಟ್ ಸಿಟಿ ಯೋಜನೆಯಡಿ ಇ-ಸೆ„ಕಲ್, ಇ-ವಾಹನಗಳ ಬಳಕೆ ಬೆಳಗಾವಿ ನಗರದಲ್ಲಿ ವಾರಾಂತ್ಯದಲ್ಲಿ ಹೆಚ್ಚಾಗಿದೆ. ಈಗ ಬೇಸಿಗೆ ರಜೆ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು ಬಳಕೆ ಮಾಡುತ್ತಿಲ್ಲ. ಶಾಲಾ-ಕಾಲೇಜು ಆರಂಭವಾದ ಬಳಿಕ ಮತ್ತೆ ಬಳಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಇದನ್ನು ಬಳಸುವ ಬಗ್ಗೆ ಅರಿವು ಇದೆ. ಬ್ಯಾಟರಿಗಳ ಕಳ್ಳತನ ಮಾಡುವವರ ವಿರುದ್ಧ ನಿಗಾ ಇಡಲಾಗಿದೆ.
∙ಬಿ.ಎಸ್. ಕಮತೆ, ಅಧೀಕ್ಷಕ ಅಭಿಯಂತರು, ಸ್ಮಾರ್ಟ್ ಸಿಟಿ
ನಗರದ ಹಲವು ಕಡೆಗಳಲ್ಲಿ ಇ-ಸೆ„ಕಲ್ ನಿಲ್ದಾಣ ಇದ್ದು, ನಮಗೆ ಬಹಳಷ್ಟು ಅನುಕೂಲಕರವಾಗಿದೆ. ನಾನು ಅಗತ್ಯ ಇರುವ ಕಡೆಗೆ ಈ ಸೆ„ಕಲ್‌ಗಳನ್ನೇ ಬಳಸುತ್ತೇನೆ. ಇದರಿಂದ ನನ್ನ ಪೆಟ್ರೋಲ್ ಬಳಕೆಯೂ ಕಡಿಮೆ ಆಗಿದೆ. ಇದರಿಂದ ಜನರಿಗೆ ಓಡಾಡಲು
ಕೈಗೆಟಕುವ ದರದಲ್ಲಿ ಸೆ„ಕಲ್‌ಗಳು ಲಭ್ಯ ಇವೆ.
∙ರಮೇಶ ನಾಯ್ಕ, ನಗರದ ನಿವಾಸಿ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.