ಕಚ್ಚಾ ತೈಲ: ಭಾರತಕ್ಕೆ 500 ಕೋಟಿ ಡಾಲರ್ ಉಳಿತಾಯ
ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ, ಸಂಸ್ಕರಿಸಿ ಐರೋಪ್ಯ ರಾಷ್ಟ್ರಗಳಿಗೆ ಮಾರಾಟ
Team Udayavani, May 22, 2023, 7:31 AM IST
ಉಕ್ರೇನ್ ವಿರುದ್ಧದ ಯುದ್ಧದ ಕಾರಣದಿಂದಾಗಿ ರಷ್ಯಾ ಕಚ್ಚಾ ತೈಲ ರಫ್ತಿನ ಮೇಲೆ ಐರೋಪ್ಯ ಒಕ್ಕೂಟ(ಇಯು) ನಿರ್ಬಂಧ ವಿಧಿಸಿದೆ. ಇದರಿಂದ ಭಾರತಕ್ಕೆ ಲಾಭವೇ ಆಗಿದೆ. ವರದಿಗಳ ಪ್ರಕಾರ, ರಷ್ಯಾದಿಂದ ಕಚ್ಚಾ ತೈಲ ಆಮದಿನಿಂದ ಕಳೆದ ವರ್ಷ ಭಾರತವು ಬರೋಬ್ಬರಿ 500 ಕೋಟಿ ಡಾಲರ್‌ಗಳನ್ನು ಉಳಿತಾಯ ಮಾಡಿದೆ.
ಹೆಚ್ಚಾಗಿದೆ ಆಮದು ಪ್ರಮಾಣ
ಕಳೆದ ವರ್ಷ ರಷ್ಯಾ ಮೇಲೆ ನಿರ್ಬಂಧ ನಂತರ ಆ ದೇಶದಿಂದ ಕಚ್ಚಾ ತೈಲ ಆಮದನ್ನು ಭಾರತ ತೀವ್ರವಾಗಿ ಹೆಚ್ಚಿಸಿದೆ. ಈ ಮೊದಲಿಗಿಂತ 10 ಪಟ್ಟು ಅಧಿಕ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಭಾರತ ರಷ್ಯಾದಿಂದ ಆಮದು ಮಾಡಿಕೊಂಡಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಭಾರತ ಕಚ್ಚಾ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ, ನಂತರ ಹೆಚ್ಚಿನ ಲಾಭಕ್ಕೆ ಅದನ್ನು ಐರೋಪ್ಯ ರಾಷ್ಟ್ರಗಳಿಗೆ ಭಾರತ ಮಾರಾಟ ಮಾಡುತ್ತಿದೆ. ಅಲ್ಲದೇ ರಷ್ಯಾದಿಂದ ಕಚ್ಚಾ ತೈಲ ಆಮದು ಮತ್ತು ಐರೋಪ್ಯ ರಾಷ್ಟ್ರಗಳಿಗೆ ಸಂಸ್ಕರಿದ ತೈಲ ಮಾರಾಟದಲ್ಲಿ ತೀವ್ರವಾಗಿ ಏರಿಕೆಯಾಗಿದೆ.
ರಷ್ಯಾ ಮೇಲೆ ನಿರ್ಬಂಧ:
2022ರ ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿತು. ಇದನ್ನು ವಿರೋಧಿಸಿ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾ ಸೇರಿ ಒಟ್ಟು ಏಳು ರಾಷ್ಟ್ರಗಳು ರಷ್ಯಾ ಕಚ್ಚಾ ತೈಲದ ಮೇಲೆ ನಿರ್ಬಂಧ ವಿಧಿಸಿತು. ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 60 ಡಾಲರ್ ಬೆಲೆಯನ್ನು ನಿಗದಿಪಡಿಸಿದವು. ಅಲ್ಲದೇ ಇದು ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಹೆಚ್ಚಿನ ಮೊತ್ತಕ್ಕೆ ರಷ್ಯಾ ವಹಿವಾಟು ನಡೆಸಿದರೆ, ಪಾಶ್ಚಿಮಾತ್ಯ ಸಾಗಣೆದಾರರು ಮತ್ತು ವಿಮಾದಾರರು ರಷ್ಯಾದ ತೈಲ ವ್ಯಾಪರದಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಅಲ್ಲದೇ ರಷ್ಯಾದ ಕಚ್ಚಾ ತೈಲದ ಮೇಲೆ ಪಶ್ಚಿಮ ರಾಷ್ಟ್ರಗಳ ಅವಲಂಬನೆಯನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿತ್ತು.
ಖರೀದಿಗೆ ಮುಂದಾದ ಭಾರತ, ಚೀನಾ:
ನಿರ್ಬಂಧವನ್ನು ಮೀರಿ ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ಭಾರತ ಮತ್ತು ಚೀನಾ ಮುಂದಾದವು. ಈ ಹಿನ್ನೆಲೆಯಲ್ಲಿ ತೈಲ ಮಾರಾಟಕ್ಕೆ ರಷ್ಯಾಗೆ ಭಾರತ ಮತ್ತು ಚೀನಾ ಪ್ರಮುಖ ದೊಡ್ಡ ದೇಶಗಳಾದವು. ಇದೇ ವೇಳೆ ತೈಲ ಸಂಸ್ಕಾರಣಾ ಕಂಪನಿಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಕಡಿಮೆ ಮೊತ್ತಕ್ಕೆ ಭಾರತದ ರಿಫೈನರಿಗಳಿಗೆ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ರಷ್ಯಾ ಮಾರಾಟ ಮಾಡಿತು. ವರದಿಯ ಪ್ರಕಾರ, 15 ಡಾಲರ್‌ನಿಂದ 20 ಡಾಲರ್ ಬೆಲೆ ಭಾರತಕ್ಕೆ ರಷ್ಯಾ ಕಚ್ಚಾ ತೈಲ ಮಾರಾಟ ಮಾಡಿದೆ.
ಆಮದು ಶೇ.20ಕ್ಕೆ ಏರಿಕೆ:
2021ರವರೆಗೆ ಒಟ್ಟಾರೆ ಭಾರತದ ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪ್ರಮಾಣ ಶೇ.2ರಷ್ಟು ಇತ್ತು. ಪ್ರಸ್ತುತ ಇದು ಶೇ.20ಕ್ಕೆ ಏರಿಕೆಯಾಗಿದೆ. ಕಚ್ಚಾ ತೈಲ ಆಮದಿನಲ್ಲಿ ಟಾಪ್ ಐದು ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತಕ್ಕೆ, ಇದರಿಂದ ದೊಡ್ಡ ಪ್ರಮಾಣದ ಉಳಿತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.