ಇನ್ನು ಯಾವುದೇ ಸೀರಿಯಲ್ ನಲ್ಲಿ ನಟಿಸುವುದಿಲ್ಲ: ಜೊತೆ ಜೊತೆಯಲಿ ನಟಿ Megha Shetty
Team Udayavani, May 22, 2023, 9:36 AM IST
“ನನ್ನನ್ನು ಒಬ್ಬಳು ನಟಿಯಾಗಿ ಜನರಿಗೆ ಪರಿಚಯಿಸಿದ್ದು “ಜೊತೆ ಜೊತೆಯಲಿ’ ಸೀರಿಯಲ್. ಈ ಸೀರಿಯಲ್‌ನ ಮೊದಲ ಶಾಟ್ ನನ್ನ ಮೇಲೆ ಶುರುವಾಗಿ, ಕೊನೆಯ ಶಾಟ್ ನನ್ನಿಂದಲೇ ಮುಗಿದಿದೆ. ಪರಿಚಯವಿಲ್ಲದೆ, ಈ ತಂಡದ ಜೊತೆ ಸೇರಿಕೊಂಡ ನನಗೆ, ಅದೇ ತಂಡ ಇದೀಗ ಮತ್ತೂಂದು ಫ್ಯಾಮಿಲಿಯಂತಾಗಿತ್ತು. ಸುಮಾರು ನಾಲ್ಕು ವರ್ಷಗಳ ಈ ಧಾರಾವಾಹಿಯ ನಂಟು ಇದೀಗ ಕೊನೆಯಾಗಿದೆ. ತುಂಬ ಬೇಸರಿಂದಲೇ ಇದನ್ನು ಒಪ್ಪಿಕೊಳ್ಳಬೇಕಾಗಿದೆ’ ಇದು “ಜೊತೆ ಜೊತೆಯಲಿ…’ ಧಾರಾವಾಹಿಯ ಬಗ್ಗೆ ನಟಿ ಮೇಘಾ ಶೆಟ್ಟಿ ಮಾತು.
“ಇಡೀ ಧಾರಾವಾಹಿ ಮತ್ತು ಅದರ ತಂಡದ ಪ್ರತಿಯೊಬ್ಬರ ಜೊತೆಗೂ ಒಂದು ಭಾವನಾತ್ಮಕ ನಂಟಿದೆ. ನಿರ್ದೇಶಕರಿಂದ ಹಿಡಿದು ಕಲಾವಿದರು, ತಂತ್ರಜ್ಞರ ಜೊತೆ ಓಡಾಡಿದ್ದೇನೆ, ಒಟ್ಟಿಗೆ ಕುಳಿತು ಊಟ ಮಾಡಿದ್ದೇನೆ. ಅದೆಲ್ಲವನ್ನು ಎಂದಿಗೂ ಮರೆಯಲಾಗದು. ಅನು ಸಿರಿಮನೆ ಪಾತ್ರ ನನಗೆ ಎಲ್ಲವನ್ನು ನೀಡಿದೆ. ಹೆಸರು, ಅವಕಾಶ, ಜನರ ಪ್ರೀತಿ ಇವೆಲ್ಲದಕ್ಕೂ “ಜೊತೆ ಜೊತೆಯಲಿ…’ ಸೀರಿಯಲ್ ಮಾತ್ರ ಕಾರಣ’ ಎನ್ನುವುದು ಮೇಘಾ ಶೆಟ್ಟಿ ಅಭಿಪ್ರಾಯ.
ಇನ್ನು “ಜೊತೆ ಜೊತೆಯಲಿ…’ ಧಾರಾವಾಹಿ ನಂತರ ಮುಂದೇನು? ಎಂಬ ಪ್ರಶ್ನೆಗೆ ಮೇಘಾ ಶೆಟ್ಟಿ ಉತ್ತರ ಹೀಗಿದೆ. “ಸದ್ಯಕ್ಕೆ ಮುಂದೆ ಯಾವುದೇ ಸೀರಿಯಲ್‌ನಲ್ಲಿ ನಟಿಸದಿರಲು ನಿರ್ಧರಿಸಿದ್ದೇನೆ. ಸುಮಾರು ನಾಲ್ಕು ವರ್ಷಗಳ ಸೀರಿಯಲ್ ಸಾಕಷ್ಟು ಅನುಭವ ಕೊಟ್ಟಿದೆ. ಅದೇ ಅನುಭವವನ್ನು ಇಟ್ಟುಕೊಂಡು, ಮುಂದೆ ಸಿನಿಮಾಗಳತ್ತ ಮಾತ್ರ ಗಮನ ಹರಿಸುವ ಯೋಚನೆ ಮಾಡಿದ್ದೇನೆ’ ಎನ್ನುತ್ತಾರೆ. ಈಗಾಗಲೇ ಸಿನಿಮಾಕ್ಕೆ ಒಂದಷ್ಟು ತಯಾರಿಗಳನ್ನೂ ಮಾಡಿಕೊಳ್ಳುತ್ತಿರುವ ಮೇಘಾ ಶೆಟ್ಟಿ, “ಈಗ ಸಿನಿಮಾ ಮಾಡಬಹುದಾದ ಒಂದಷ್ಟು ಒಳ್ಳೆಯ ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ ಇನ್ನೂ ಯಾವುದನ್ನೂ ಫೈನಲ್ ಮಾಡಿಲ್ಲ. ಸದ್ಯಕ್ಕೆ ನಾನು ಈಗಾಗಲೇ ಅಭಿನಯಿಸಿರುವ “ಕೈವ’ ಮತ್ತು “ಆಪರೇಷನ್ ಲಂಡನ್ ಕೆಫೆ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲಿಯೇ ಈ ಎರಡೂ ಸಿನಿಮಾಗಳು ಬಿಡುಗಡೆಯಾಗಲಿವೆ. ಇದರ ನಡುವೆ ಸಿನಿಮಾಗಳಿಂದಲೂ ಒಂದಷ್ಟು ಆಫರ್ ಬರುತ್ತಿದ್ದು, ಅವುಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇನೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.