MP: ಸಂಸದರಿಗಾಗಿ 2 ವರ್ಷಕ್ಕೆ 200 ಕೋಟಿ ವೆಚ್ಚ!
Team Udayavani, May 23, 2023, 7:34 AM IST
ರಾಜ್ಯಸಭಾ ಸದಸ್ಯರ ವೇತನ, ಖರ್ಚು- ವೆಚ್ಚಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊರತೆಯ ನಡುವೆಯೇ, ಆರ್‌ಟಿಐ ಅರ್ಜಿದಾರರೊಬ್ಬರು ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದು, ಕಳೆದ 2 ವರ್ಷದಲ್ಲಿ ಸರ್ಕಾರ ರಾಜ್ಯಸಭಾ ಸದಸ್ಯರಿಗೆ 200 ಕೋಟಿ ರೂ.ಗಳ ಸವಲತ್ತು ನೀಡಿರುವುದಾಗಿ ತಿಳಿಸಿದೆ. ರಾಜ್ಯಸಭಾ ಸದಸ್ಯರಿಗೆ ಯಾವೆಲ್ಲ ಸೌಕರ್ಯ ಒದಗಿಸಲಾಗಿದೆ? ಅದರ ವೆಚ್ಚವೆಷ್ಟು ಎಂಬ ಮಾಹಿತಿ ಇಲ್ಲಿದೆ.
—
97 ಕೋಟಿ ರೂ. – 2021-22ರಲ್ಲಿನ ಒಟ್ಟು ವೆಚ್ಚ
28.5 ಕೋಟಿ ರೂ. – ದೇಶಿಯ ಪ್ರಯಾಣ
1.28 ಕೋಟಿ ರೂ. – ಅಂತಾರಾಷ್ಟ್ರೀಯ ಪ್ರಯಾಣ
57.6 ಕೋಟಿ ರೂ. – ವೇತನ
17 ಲಕ್ಷ ರೂ. – ವೈದ್ಯಕೀಯ ವೆಚ್ಚ
7.5 ಕೋಟಿ – ಕಚೇರಿಯ ಖರ್ಚು ವೆಚ್ಚ
1.2 ಕೋಟಿ ರೂ. – ಐಟಿ ಸೇವಾ ವೆಚ್ಚ
——————–
58.5 ಕೋಟಿ ರೂ. – 2022-23ನೇ ಸಾಲಿನ ವೇತನ
30.9 ಕೋಟಿ ರೂ – ದೇಶಿ ಪ್ರಯಾಣ
2.6 ಕೋಟಿ ರೂ. – ಅಂತಾರಾಷ್ಟ್ರೀಯ ಪ್ರಯಾಣ
65 ಲಕ್ಷ – ಆರೋಗ್ಯ ಸೇವೆ ಹಾಗೂ ಇತರೆ
7 ಕೋಟಿ ರೂ.- ಕಚೇರಿ ಸಂಬಂಧಿತ ವೆಚ್ಚ
1.5 ಕೋಟಿ ರೂ. -ಐಟಿ ಸೇವಾ ವೆಚ್ಚ
—
ಸಂಸದರ ಕಾರ್ಯಕ್ಷಮತೆ ಎಷ್ಟು ?
ಇತ್ತೀಚಿನ ವರ್ಷಗಳಲ್ಲಿ ಸದನಗಳಲ್ಲಿ ಚರ್ಚೆಗಿಂತಲೂ ಗದ್ದಲವೇ ಹೆಚ್ಚುತ್ತಿದ್ದು, ಅನೇಕ ಬಾರಿ ಕಲಾಪಗಳು ಕೊಚ್ಚಿಹೋಗಿರುವ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿನ ಉತ್ಪಾದಕತೆ ಎಷ್ಟು ಎಂಬುದನ್ನು ಗಮನಿಸಿದರೆ..
* 2021ರ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆ ಉತ್ಪಾದಕತೆ ಕೇವಲ ಶೇ.43ರಷ್ಟಿದ್ದರೆ, ಮುಂಗಾರಿನ ಅಧಿವೇಶನದಲ್ಲಿ ಶೇ.29 ಹಾಗೂ ಬಜೆಟ್ ಅಧಿವೇಶನದಲ್ಲಿ ಶೇ.90 ಇತ್ತು.
* 2022ರಲ್ಲಿ ಚಳಿಗಾಲದ ಅಧಿವೇಶನದಲ್ಲಿ ಶೇ.94, ಮುಂಗಾರು ಅಧಿವೇಶನದಲ್ಲಿ ಶೇ.42 ಹಾಗೂ ಶೇ.90ರಷ್ಟು ಬಜೆಟ್ ಅಧಿವೇಶನ ಫಲಪ್ರದವಾಗಿದೆ.
* ಪ್ರಸಕ್ತ ವರ್ಷದ ಬಜೆಟ್ ಅಧಿವೇಶನದ ಉತ್ಪಾದಕತೆ ಶೇ.24ಕ್ಕಿಂತ ಕಡಿಮೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.