![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 23, 2023, 3:18 PM IST
ಭೋಪಾಲ್: ಎರಡೂ ಹೊತ್ತಿನ ಊಟಕ್ಕೂ ಪರದಾಡುವ ಬಡತನ ಯಾರಿಗೂ ಬರಬಾರದು. ತಾನು ಹಸಿವಿನಲ್ಲಿದ್ದರೂ, ತನ್ನ ಮಕ್ಕಳಿಗೆ ಒಂದು ಹೊತ್ತಿನ ಊಟವನ್ನಾದರೂ ಎಂಥ ಪರಿಸ್ಥಿತಿಯಲ್ಲೂ ಮಾಡಿ ಹಾಕುವ ಏಕೈಕ ಜೀವವೆಂದರೆ ಅದು ತಾಯಿ ಮಾತ್ರ.
ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಕೆಲಸವನ್ನು ಹುಡುಕುತ್ತಾ ಬೀದಿಯಲ್ಲಿ ಅಲೆಯುತ್ತಿದ್ದ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಶಿಯೋಪುರದ ಬುಡಕಟ್ಟು ಸಮುದಾಯದ ಮಹಿಳೆಯಾಗಿರುವ ರುಕ್ಮಿಣಿ ಎಂಬಾಕೆ ತನ್ನ ಮೂವರು ಮಕ್ಕಳೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸ್ಥಳೀಯ ಪತ್ರಕರ್ತರೊಬ್ಬರು ಅವರ ಫೋಟೋವೊಂದನ್ನು ಸೆರೆಹಿಡಿದು ಹಂಚಿಕೊಂಡಿದ್ದೀಗ ವೈರಲ್ ಆಗಿದೆ.
ರಣಬಿಸಿಲಿನಲ್ಲಿ ತನ್ನ ತಾಯಿಯೊಂದಿಗೆ ಮಕ್ಕಳಿಬ್ಬರು ನಡೆಯುತ್ತಿದ್ದಾರೆ. ಒಂದು ಮಗುವನ್ನು ರುಕ್ಮಿಣಿ ಅವರು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಅವರ ಬಡತನ ಸ್ಥಿತಿ ಎಷ್ಟು ಇದೆ ಎಂದರೆ ಮಕ್ಕಳ ಕಾಲಿನಲ್ಲಿ ಚಪ್ಪಲಿಯೂ ಇಲ್ಲ. ಆ ಮಕ್ಕಳಿಗೆ ಬಿಸಿಲಿನ ಬಿಸಿ ತಟ್ಟಬಾರದೆಂದು ತಾಯಿ ರುಕ್ಮಿಣಿ ತಮ್ಮ ಮಕ್ಕಳ ಕಾಲಿಗೆ ಪ್ಲ್ಯಾಸ್ಟಿಕ್ ಕವರ್ ಗಳನ್ನು ಶೂಗಳಂತೆ ಹಾಕಿದ್ದಾರೆ.
ಇದನ್ನೂ ಓದಿ: VIRAL: ಮದುವೆ ದಿನ ಪರಾರಿಯಾಗಲು ಯತ್ನಿಸಿದ ವರ: 20ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು
ಪತ್ರಕರ್ತ ಇನ್ಸಾಫ್ ಖುರೈಶಿ ಈ ಬಗ್ಗೆ ರುಕ್ಮಿಣಿ ಅವರ ಬಳಿ ಕೇಳಿದಾಗ “ ನನ್ನ ಪತಿಗೆ ಕ್ಷಯರೋಗವಿದೆ. ಕುಟುಂಬ ಸಾಗಬೇಕು. ಕೆಲಸವನ್ನು ಹುಡುಕುತ್ತಿದ್ದೇನೆ. ಮಕ್ಕಳನ್ನು ಮನೆಯಲ್ಲಿ ಬಿಟ್ಟರೆ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅದಕ್ಕಾಗಿ ಅವರನ್ನು ಜೊತೆಯಾಗಿ ಹಿಡಿದುಕೊಂಡು ಕೆಲಸವನ್ನು ಹುಡುಕುತ್ತಿದ್ದೇನೆ” ಎಂದಿದ್ದಾರೆ.
ಪತ್ರಕರ್ತ ಇನ್ಸಾಫ್ ಖುರೈಶಿ ಮಕ್ಕಳಿಗೆ ಚಪ್ಪಲಿ ತೆಗೆದುಕೊಳ್ಳಲು ಹಣ ಹಾಗೂ ಸ್ವಲ್ಪ ಆರ್ಥಿಕವಾಗಿ ಸಹಾಯವನ್ನು ಮಾಡಿದ್ದಾರೆ.
ಈ ವಿಚಾರ ಸ್ಥಳೀಯ ಆಡಳಿತಕ್ಕೆ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಳುಹಿಸಲಾಗಿದೆ. ಸರ್ಕಾರದ ಯೋಜನೆಗಳ ಗರಿಷ್ಠ ಲಾಭವನ್ನು ಕುಟುಂಬಕ್ಕೆ ನೀಡಲು ಸೂಚನೆಗಳನ್ನು ನೀಡಲಾಗಿದೆ ಎಂದು ಶೆಯೋಪುರ್ ಕಲೆಕ್ಟರ್ ಶಿವಂ ವರ್ಮಾ ಆಜ್ ಇಂಡಿಯಾ ಟುಡೇಗೆ ತಿಳಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.