ಅರ್ಧ ಅವಧಿ ಪೂರ್ಣ,ಭರ್ತಿ ಅಪೂರ್ಣ: ಕಾರ್ಕಳ ಪುರಸಭೆ- ಸಿಬಂದಿ ಕೊರತೆ
ಸಾರ್ವಜನಿಕ ಸೇವೆಗಳಿಗೆ ಹಿನ್ನಡೆ
Team Udayavani, May 23, 2023, 3:41 PM IST
ಕಾರ್ಕಳ: ಒಂದೆಡೆ ಅಬ್ಬರದ ಚುನಾವಣೆ ಮುಗಿದಿದ್ದು ಮತ್ತೂಂದೆಡೆ ಮಳೆಗಾಲದ ಸಿದ್ಧತೆ ಆಗಬೇಕಿದ್ದು ಇದಕ್ಕೆ ಆಡಳಿತ ಚುರುಕಾಗಬೇಕು.
ಕಾರ್ಕಳ ಪುರಸಭೆಯ ಅರ್ಧ ಅವಧಿ ಪೂರ್ಣಗೊಂಡಿ ದ್ದರೂ ಇನ್ನೂ ಅರ್ಧಕ್ಕರ್ಧ ಹುದ್ದೆಗಳು ಖಾಲಿ ಬಿದ್ದಿವೆ. ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುವ ದೂರುಗಳಿವೆ. ಇದಕ್ಕೆ ಸಿಬಂದಿ ಕೊರತೆ ಕಾರಣ. ತೆರವಾದ ಸ್ಥಾನಕ್ಕೆ ಮರು ನೇಮಕ ಆಗದಿರುವುದು ಆಡಳಿತಕ್ಕೆ ತಲೆನೋವಾಗಿದೆ.
ಪುರಸಭೆ ಕಾರ್ಯಾಲಯಕ್ಕೆ ಮಂಜೂರಾಗಿರುವ ಹುದ್ದೆಗಳ ಪ್ರಮಾಣ ಹೆಚ್ಚಿದ್ದರೂ, ಮಂಜೂರಾತಿಗೊಂಡ ಹುದ್ದೆಗಳ ಪೈಕಿ ಪ್ರಮುಖ ವಿಭಾಗದ ಹುದ್ದೆಗಳು ಖಾಲಿ ಇವೆ. ಕೆಲವು ಹುದ್ದೆಗಳಲ್ಲಿ ದಿನಗೂಲಿ, ಹೊರಗುತ್ತಿಗೆ, ಸಹಿತ ತಾತ್ಕಾಲಿಕ ನೆಲೆಯಲ್ಲಿ ನೇಮಕವಾದ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೆಲ್ಲ ಸೇರಿದಾಗ್ಯೂ 21 ಹುದ್ದೆಗಳಲ್ಲಿ ಸಿಬಂದಿಯೇ ಇಲ್ಲ.
ಸಿಬಂದಿ ಕೊರತೆ: ಕೆಲಸ ಕಾರ್ಯಕ್ಕೆ ತೊಡಕು ನಿವೃತ್ತಿ, ವರ್ಗಾವಣೆಗೊಂಡು ಖಾಲಿಯಾದ ಹುದ್ದೆಗಳಿಗೆ ಮರು ನೇಮಕವಾಗಿಲ್ಲ. ಸಾರ್ವಜನಿಕ ಸೇವೆಗಳು ಮಂದಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರು ವಿವಿಧ ಸೇವೆ ಮಾಡಿಸಿಕೊಳ್ಳಲು ನಿತ್ಯ ಪುರಸಭೆ ಕಚೇರಿಗೆ ಆಗಮಿಸುತ್ತಿದ್ದು, ಸಿಬಂದಿ ಕೊರತೆ ಕಾರಣ ಸಮಯಕ್ಕೆ ತಕ್ಕಂತೆ ಕೆಲಸ ಕಾರ್ಯ ಆಗುತ್ತಿಲ್ಲ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಸಾರ್ವಜನಿಕರ ಸೇವೆಯನ್ನು ಸಕಾಲಕ್ಕೆ ನೀಡುವುದು ಆಡಳಿತಕ್ಕೂ ದೊಡ್ಡ ಸವಾಲಾಗಿದೆ.ಕಚೇರಿಗೆ ಮಂಜೂರಾದ ಹು¨ªೆಗಳ ಪ್ರಕಾರ ಮುಖ್ಯಾಧಿಕಾರಿ ಹುದ್ದೆ ಭರ್ತಿಯಾಗಿವೆ. ಪರಿಸರ ಅಭಿಯಂತ ಹುದ್ದೆ ವರ್ಗಾವಣೆಗೊಂಡಿದ್ದು ಅದೂ ಭರ್ತಿಯಾಗಿವೆ.
ಪುರಸಭೆಯ ಚುನಾಯಿತ ಆಡಳಿತ ಅಭಿವೃದ್ಧಿಯ ನಿರೀಕ್ಷೆ ಹೊತ್ತು 2020ರಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಪ್ರಥಮ ಅರ್ಧ ಅವಧಿ ಎಪ್ರಿಲ್ 28ಕ್ಕೆ ಪೂರ್ಣಗೊಂಡಿದೆ. ಅದಕ್ಕೂ ಹಿಂದಿನ ಎರಡು ವರ್ಷಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದೆ ಅಭಿವೃದ್ಧಿ ಕಾರ್ಯಕ್ಕೆವೇಗ ಸಿಕ್ಕಿರಲಿಲ್ಲ. ಮೂಲ ಕಚೇರಿಯಲ್ಲಿ ಸಿಬಂದಿಗಳಿಲ್ಲದೆ ಎಲ್ಲ ಕೆಲಸ ಮಂದ ಗತಿಯಲ್ಲಿ ಸಾಗುತ್ತಿದೆ.ಇದರಿಂದ ನಿರೀಕ್ಷೆಯ ವೇಗ ನೀಡುವುದಕ್ಕೂ ಸಮಸ್ಯೆಯಾಗುತ್ತಿದೆ. ಆದಾಯವೂ ಇದೆ ಪುರಸಭೆ ಆಡಳಿತದಲ್ಲಿ ಉತ್ತಮ ಆದಾಯದ ಮೂಲಗಳಿವೆ. ಕಟ್ಟಡ, ಅಂಗಡಿ ಕೊಠಡಿಗಳ ಬಾಡಿಗೆ, ನೀರಿನ ತೆರಿಗೆ, ಮನೆ ತೆರಿಗೆ ಹೀಗೆ ವಿವಿಧ ಮೂಲಗಳಿಂದ ವಾರ್ಷಿಕವಾಗಿ ಕೋಟ್ಯಂತರ ರೂ. ಆದಾಯ ಪುರಸಭೆ ಬೊಕ್ಕಸಕ್ಕೆ ಹರಿದು ಬರುತ್ತಿದೆ.
ತೆರಿಗೆ, ಸಂಪನ್ಮೂಲ ಸಂಗ್ರಹಕ್ಕೆ ತೊಡಕು
ಪುರಸಭೆ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ಹಣಕಾಸು ಯೋಜನೆಗೆ ಸಂಬಂಧಿಸಿ ಯೋಜನೆಗಳು ಕಾರ್ಯಗತವಾಗಿದ್ದರೂ, ಅಭಿಯಂತರ ಹು¨ªೆ ಸಹಿತ ಪ್ರಮುಖ ಹುದ್ದೆ ತೆರವಾಗಿರುವ ಕಾರಣ ಎಸ್ಟಿಮೇಟ್ ಮಾಡಿಸಲಾಗುತ್ತಿಲ್ಲ. ಮಳೆಗಾಲ ಪೂರ್ವ ಸಿದ್ಧತೆ ಸೇರಿ ವಿವಿಧ ಕೆಲಸ ಕಾರ್ಯ ಕ್ಲಪ್ತ ಸಮಯದಲ್ಲಿ ನೆರವೇರಿಸಲೂ ತೊಂದರೆಯಾಗುತ್ತಿದೆ. ತೆರಿಗೆ ಮತ್ತಿತರ ಸಂಪನ್ಮೂಲ ಸಂಗ್ರಹಕ್ಕೂ ತೊಡಕಾಗಿದೆ. ಈ ಎಲ್ಲ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಸರಕಾರಿ ಮಟ್ಟದಲ್ಲಿ ಸಿಬಂದಿ ನೇಮಕ ಪ್ರಕ್ರಿಯೆಗಳಿಗೆ ಆದ್ಯತೆ ಸಿಗುವಂತೆ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಖಾಲಿ ಹುದ್ದೆಗಳು
ಪ್ರಥಮ ದರ್ಜೆ ಸಹಾಯಕ ಹುದ್ದೆ 2; ಸ್ಟೆನೋಗ್ರಾಫರ್, ಜೂನಿಯರ್ ಪ್ರೋಗ್ರಾಮ್ ಆಫೀಸರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ನೀರು ಸರಬರಾಜು ಅಪರೇಟರ್ 4 ಹುದ್ದೆ, ಕಂಪ್ಯೂಟರ್ ಡಾಟಾ ಎಂಟ್ರಿ, ಜೂನಿಯರ್ ಆರೋಗ್ಯ ಇನ್ಸ್‌ಪೆಕ್ಟರ್ 2 ಹುದ್ದೆ, ದ್ವಿತೀಯ ದರ್ಜೆ ಸಹಾಯಕ 3, ಬಿಲ್ ಕಲೆಕ್ಟರ್, ಚಾಲಕ 2 ಹುದ್ದೆ, ಸಹಾಯಕ ನೀರು ಸರಬರಾಜು ಅಪರೇಟರ್ 4 ಹುದ್ದೆ, ಸ್ಯಾನಿಟರಿ ಸೂಪರ್‌ವೈಸರ್ 2, ಸೀನಿಯರ್ ವಾಲ್‌ಮೆನ್ 2 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ.
18 ಪೌರ ಕಾರ್ಮಿಕರ ಕೊರತೆ
ನಗರದಲ್ಲಿ ತ್ಯಾಜ್ಯ ಹೆಚ್ಚುತ್ತಿದ್ದು, ಇದರ ವಿಲೇವಾರಿ ಸಮಸ್ಯೆ ಆಡಳಿತಕ್ಕೆ ಸವಾಲಾಗಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವುದು ಇಲ್ಲಿ ಪೌರ ಕಾರ್ಮಿಕರು, ಪುರಸಭೆ ವ್ಯಾಪ್ತಿಯಲ್ಲಿ 38 ಪೌರ ಕಾರ್ಮಿಕರು ಇರಬೇಕಿದ್ದು, 18 ಪೌರ ಕಾರ್ಮಿಕರ ಕೊರತೆಯಿದೆ. ಈಗಿರುವುದು ಕೇವಲ 20 ಮಂದಿ ಮಾತ್ರ. ಇಷ್ಟು ಮಂದಿಯನ್ನು ಬಳಸಿಕೊಂಡು ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ನಡೆಸುವುದು ಆಡಳಿತಕ್ಕೆ ತ್ರಾಸದಾಯಕವಾಗಿದೆ.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.