ಶಾಸಕ ಸ್ವರೂಪ್ ಎದುರು ಸಾಲು-ಸಾಲು ಸವಾಲು
Team Udayavani, May 24, 2023, 3:20 PM IST
ಹಾಸನ: ಜಿದ್ದಾಜಿದ್ದಿನ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದಿರುವ ಶಾಸಕ ಎಚ್.ಪಿ. ಸ್ವರೂಪ್ ಅವರು ಗೆಲುವಿನ ಸಂಭ್ರಮಾಚರಣೆಯಲ್ಲಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರ ದಲ್ಲಿ ಅಪ್ಪನ ನಂತರ ಮಗ ಶಾಸಕ ನಾ ಗಿರುವ ಹೊಸ ದಾಖಲೆ ನಿರ್ಮಿಸಿದ್ದಾರೆ. ಕ್ಷೇತ್ರ ದಲ್ಲಿ ಸಮರ್ಥ ನಾಯಕನಿಲ್ಲದೆ ಅನಾಥ ಪ್ರಜ್ಞೆ ಅನುಭವಿ ಸುತ್ತಿದ್ದ ಜೆಡಿಎಸ್ ಕಾರ್ಯಕರ್ತರಿಗೆ ಈಗ ಯುವ ನಾಯಕ ಸಿಕ್ಕಿದ್ದಾನೆ ಎಂಬ ಸಂತಸವಿದೆ. ಆದರೆ, ನೂತನ ಶಾಸಕ ಸ್ವರೂಪ್ ಎದುರು ಸಾಲು, ಸಾಲು ಸವಾಲುಗಳಿವೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್. ಎಸ್.ಪ್ರಕಾಶ್ ಅವರು ಪ್ರೀತಂಗೌಡ ಅವರೆದುರು ಸೋಲು ಅನುಭವಿಸಿದ್ದರು. ಅನಾರೋಗ್ಯದಿಂದ ಪ್ರಕಾಶ್ ಅವರು ಚೇತರಿಸಿ ಕೊಳ್ಳುತ್ತಿದ್ದ ಸಂದರ್ಭ ದಲ್ಲಿಯೇ ಪ್ರಕಾಶ್ ಅವರಿಗೆ ಸೋಲು ತೀವ್ರ ಆಘಾತವ ನ್ನುಂಟು ಮಾಡಿತ್ತು. ಹ್ಯಾಟ್ರಕ್ ಗೆಲುವು ಸೇರಿ 4 ಬಾರಿ ಗೆದ್ದು ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದು, ಹಾಸನ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದ ಸಂದರ್ಭ, ಅದೂ ಆಲ್ಲದೇ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸುಸಂದರ್ಭದಲ್ಲಿ ಹಾಸನ ಕ್ಷೇತ್ರದ ರಾಜಕಾ ರಣದಲ್ಲಿ ಅಂಬೆಗಾಲಿಟ್ಟಿದ್ದ ಯುವಕ ಪ್ರೀತಂಗೌಡ ಅವರೆದುರು ಸೋತು ಹೋದ ನೋವಿನಿಂದ ಪ್ರಕಾಶ್ ಅವರು ಇಹಲೋಕ ತ್ಯಜಿಸಿದರು.
ಮಿತಿಮೀರಿದ ಮಾತು ಆಪತ್ತು: ಕಳೆದ 5 ವರ್ಷ ಶಾಸಕರಾಗಿದ್ದ ಪ್ರೀತಂಗೌಡ ಬಿಜೆಪಿ ಸರ್ಕಾರದ ಮೂರುವರೆ ವರ್ಷಗಳಲ್ಲಿ ಹಾಸನ ಕ್ಷೇತ್ರದಲ್ಲಿ ಅನಭಿಷಕ್ತ ದೊರೆಯಂತೆ ನಡೆದುಕೊಂಡರು. ನಾನು ಹಾಸನ ಜಿಲ್ಲೆಗೆ ಸಿಎಂ ಇದ್ದಂತೆ, ಇನ್ನು ಮೂರ್‍ನಾಲ್ಕು ಚುನಾವಣೆಯಲ್ಲಿ ನನ್ನನ್ನು ಸೋಲಿಸು ವವರೇ ಇಲ್ಲ ಎಂಬರ್ಥದಲ್ಲಿ ನೀಡುತ್ತಿದ್ದ ಹೇಳಿಕೆಗಳು, ಹಿಂದಿನ ಶಾಸಕರಿಗೆ ಅಭಿವೃದ್ಧಿಯೆಂದರೇನು ಎಂಬುದೇ ಗೊತಿಲ್ಲ$ಎಂದೆಲ್ಲಾ ಹೀಯಾಳಿಸುವ ಮಟ್ಟದ ಟೀಕೆ ಗಳನ್ನು ಸಹಿಸಿಕೊಂಡ ಬಂದ ಪ್ರಕಾಶ್ ಕುಟುಂಬದವರು 2018ರ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಮುನ್ನಡೆ ಗುರಿ: ಪ್ರೀತಂಗೌಡ ಅವರ ಹುಂಬತನದ ಹೇಳಿಕೆಗಳಿಗೂ ಮತದಾರರು ಉತ್ತರವನ್ನೂ ನೀಡಿದ್ದಾರೆ. ಪ್ರೀತಂಗೌಡ ಅವರನ್ನು ಸೋಲಿಸಿ ಜೆಡಿಎಸ್ ಯುವ ನಾಯಕನ ರೂಪ ಪಡೆದುಕೊಂಡಿರುವ ಸ್ವರೂಪ್ ಅವರಿಗೆ ಈಗ ಜನರ ವಿಶ್ವಾಸ ಉಳಿಸಿಕೊಳ್ಳುವ ಸವಾಲಿದೆ. ಹಿಂದಿನ 5 ವರ್ಷಗಳಲ್ಲಿನ ಅಭಿವೃದ್ಧಿ ಮೀರಿಸಿ ಕ್ಷೇತ್ರ ಮುನ್ನಡೆಸುವ ಭಾರೀ ಸವಾಲು ನೂತನ ಶಾಸಕರ ಎದುರಿಗಿದೆ.
ವಿವಿಧ ಸವಾಲು: ಹಾಸನ ನಗರದಲ್ಲಿ ಚುನಾವಣೆ ವೇಳೆ ನಡೆದ ರಸ್ತೆ ಡಾಂಬರೀಕರಣ, ಚರಂಡಿಗಳ ನಿಮಾ ìಣದ ಕೆಲವು ಕಾಮಗಾರಿಗಳು ಅರೆಬರೆಯಾಗಿ ನಿಂತಿವೆ. ಆ ಕಾಮಗಾರಿಗಳು ಯಾವ ಇಲಾ ಖೆಯಿಂದ, ಯಾವ ಅನುದಾನದಿಂದಾಗಿವೆ ಎಂಬ ಮಾಹಿತಿ ಪಡೆದು ಉಳಿಕೆ ಕಾಮಗಾರಿ ಪೂರ್ಣಗೊಳಿಸುವ ಪ್ರಮುಖ ಕೆಲಸವನ್ನು ಸ್ವರೂಪ್ ಅವರು ಮಾಡಬೇಕಾಗಿದೆ.
ಹಾಸನ ನಗರಸಭೆಗೆ ಸುತ್ತಮುತ್ತಲಿನ 25 ಗ್ರಾಮಗಳ ಅಧಿಕೃತವಾಗಿ ಸೇರ್ಪಡೆಯಾಗಿದೆ. ಆ ಗ್ರಾಮಗಳಲ್ಲಿ ನಾಗರಿಕ ಸೌಲಭ್ಯ ಕಲ್ಪಿಸುವ ಯೋಜನೆ ರೂಪುಗೊಂಡು ಅನುಷ್ಠಾನ ಆಗಬೇಕಾಗಿದೆ. ಹಾಸನ ನಗರಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಪೂರೈಕೆಯ 3ನೇ ಹಂತದ ಅಮೃತ್ ಯೋಜನೆಯಡಿ ನಗರದ ಎಲ್ಲ ವಾರ್ಡ್‌ಗಳು ಹಾಗೂ ಹೊಸದಾಗಿ ಹಾಸನ ನಗರಸಭೆಗೆ ಸೇರ್ಪಡೆಯಾದ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಪೂರೈಕೆ ಮಾಡ ಬೇಕಾಗಿದೆ. ಬಹುಮುಖ್ಯವಾಗಿ ಕಸ ವಿಲೇವಾರಿ ಕೆಲಸ ಸಗಮವಾಗಬೇಕಾಗಿದೆ.
ಶಾಸಕರಿಗೆ ಸಮರ್ಪಣ ಮನೋಭಾವಬೇಕು: ಎಚ್ .ಡಿ.ರೇವಣ್ಣ ಅವರ ಕನಸಿನ ಯೋಜನೆಗಗಳ ಮೂಲ ಸ್ವರೂಪವನ್ನೇ ಶಾಸಕರಾಗಿದ್ದ ಪ್ರೀತಂಗೌಡ ಬದಲಾಯಿಸಿ ಯೋಜನೆಗಗಳು ಹಳ್ಳ ಹಿಡಿಯುಂತೆ ಮಾಡಿದ್ದರು. ಬಹು ಮುಖ್ಯ ವಾಗಿ ಹಾಸನ ಬಸ್ ನಿಲ್ದಾಣ ಎದುರಿನ ಚನ್ನಪಟ್ಟಣ ಕೆರೆ ಸೌಂದರ್ಯಿಕರಣ ಯೋಜನೆ ಮೂಲ ಯೋಜನೆಯಂತೆ ಅನುಷ್ಠಾನವಾಗಬೇಕಾಗಿದೆ. ಹಾಗೆಯೇ ಹಾಸನ ವಿಮಾನ ನಿಲ್ದಾಣ ಯೋಜನೆ ಮೂಲ ಯೋಜನೆಯಂತೆ , ಶಿವಮೊಗ್ಗದ ವಿಮಾನ ನಿಲ್ದಾಣದಂತೆ ಬೃಹತ್ ವಿಮಾನ ನಿಲ್ದಾಣವಾಗಿ ನಿರ್ಮಾಣವಾಗಬೇಕಾಗಿದೆ. ಈ ಯೋಜನೆಗಳಿಗೆ ಭೂ ಸ್ವಾಧೀನದ ಸಮಸ್ಯೆ ಹಾಗೂ ಅನುದಾನ ತರುವ ಬಹು ದೊಡ್ಡ ಸವಾಲನ್ನು ಸ್ವರೂಪ್ ನಿಭಾಯಿಸಬೇಕಾಗಿದೆ. ಎಚ್.ಡಿ.ರೇವಣ್ಣ ಅವರ ಸಹಾಯ, ಸಹಕಾರ ಪಡೆದರೆ ಅದು ಕಷ್ಟದ ಕೆಲಸವೇನೂ ಆಗಲಾರ ದು.ಆದರೆ, ಸ್ವರೂಪ್ ಅವರಿಗೆ ಇಚ್ಛಾಶಕ್ತಿ, ಅಭಿವೃದ್ಧಿ ದೃಷ್ಟಿಕೋನದ ಅಗತ್ಯವಿದೆ.
ಐಐಟಿ ಸ್ಥಳ ಉಳಿಸಿಕೊಳ್ಳಬೇಕು: ಹಾಸನ ವಿವಿ ಮಂಜೂರಾಗಿ ಕುಲಪತಿಗಳೂ ನೇಮಕವಾಗಿದ್ದಾರೆ. ಹೇಮ ಗಂಗೋತ್ರಿ ಎದುರು ಟ್ರಕ್ ಟರ್ಮಿನಲ್ ನಿರ್ಮಾಣದ ವಿವಾದ ಅಂತ್ಯವಾಗಿ ವಿವಿಯ ಹೊಸ ಕ್ಯಾಂಪಸ್ ನಿರ್ಮಾಣ ಆಗಬೇಕಾಗಿದೆ. ಹಾಗೆಯೇ ಐಐಟಿಗೆ ಸ್ವಾಧೀನವಾಗಿದ್ದ 1057ಎಕರೆ ಉಳಿಸಿಕೊಳ್ಳುವ ಭಾರೀ ದೊಡ್ಡ ಜವಾಬ್ದಾರಿಯೂ ನೂತನ ಶಾಸಕರ ಮೇಲಿದೆ. ಈ ಎಲ್ಲ ಯೋಜನೆಗಳ ಭವಿ ಷ್ಯದ ಬಗ್ಗೆ ಹಾಸನ ಕ್ಷೇತ್ರದ ಜನರ ಬಹಳ ನಿರೀಕ್ಷೆಯಿದೆ. ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜೊತೆಗೆ ಸೆಪ್ಟಂಬರ್‌ನಲ್ಲಿ ಹಾಸನ ನಗರ ಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರನ್ನು ಹಿಡಿದಿಟ್ಟುಕೊಂಡು ಹಾಸನ ನಗರ ಸಭೆ ಅಧಿಕಾರ ಹಿಡಿಯುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹಾಸನ ಕ್ಷೇತ್ರದಲ್ಲಿ ಭಾರೀ ಬಹುಮತ ಕೊಡಿಸಿ ತಮ್ಮ ರಾಜಕೀಯ ಸಾಮರ್ಥಯ ಪ್ರದರ್ಶಿಸುವ ಅನಿವಾರ್ಯತೆ ಸವಾಲೂ ಕೂಡ ಎಚ್.ಪಿ.ಸ್ವರೂಪ್ ಅವರಿಗಿದೆ.
ಲೋಕ ಸಮರಕ್ಕೆ ಮಾಜಿ ಶಾಸಕ ಪ್ರೀತಂಗೌಡ ಅಣಿ?:
ಹಾಸನ: ಅನಿರೀಕ್ಷಿತ ಸೋಲಿನಿಂದ ಮಾಜಿ ಶಾಸಕ ಪ್ರೀತಂಗೌಡ ಅವರು ಗಾಯಗೊಂಡ ಹುಲಿಯಂತಾಗಿದ್ದಾರೆ. ಸೋಲು ಸಹಿಸಿಕೊಂಡು ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನವೂ ಅವರದಲ್ಲ. ಮುಂದಿನ ಐದು ವರ್ಷ ವಿಧಾನಸಭೆ ಚುನಾವಣೆವರೆಗೆ ನಿರುದ್ಯೋಗಿಯಾಗಿ ಕುಳಿತುಕೊಳ್ಳುವ ಮನಸ್ಥಿಯೂ ಪ್ರೀತಂಗೌಡ ಅವರದಲ್ಲ. ಅವರು ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದ ಪ್ರೀತಂಗೌಡ ಅವರ ಬೆಂಬಲಿಗರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ವಿಧಾನಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಅದಕ್ಕೂ ಮೊದಲು ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿಯೇ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್‌ಗೆ ಠಕ್ಕರ್ ಕೊಡಲು ಪ್ರೀತಂಗೌಡ ಅವರು ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎನ್. ನಂಜುಂಡೇಗೌv
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.