ಕರಾವಳಿ, ಕೊಡಗಿನ ಕೆಲವೆಡೆ ಮಳೆ-ಹಾನಿ: ಇಂದು ಎಲ್ಲೋ ಅಲರ್ಟ್
Team Udayavani, May 25, 2023, 7:45 AM IST
![ಕರಾವಳಿ, ಕೊಡಗಿನ ಕೆಲವೆಡೆ ಮಳೆ-ಹಾನಿ: ಇಂದು ಎಲ್ಲೋ ಅಲರ್ಟ್](https://www.udayavani.com/wp-content/uploads/2023/05/yellow-alert-620x380.jpg)
![ಕರಾವಳಿ, ಕೊಡಗಿನ ಕೆಲವೆಡೆ ಮಳೆ-ಹಾನಿ: ಇಂದು ಎಲ್ಲೋ ಅಲರ್ಟ್](https://www.udayavani.com/wp-content/uploads/2023/05/yellow-alert-620x380.jpg)
ಮಂಗಳೂರು: ಭಾರತೀಯ ಹವಾಮಾನ ಇಲಾಖೆಯು ಮೇ 25ರಂದು ಎಲ್ಲೋ ಅಲರ್ಟ್ ಘೋಷಿಸಿದ್ದು, ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆ ಬುಧವಾರ ಅಲ್ಪ ಮಳೆಯಾಗಿದೆ. ಮಂಗಳೂರಿನಲ್ಲಿ ದಿನವಿಡೀ ಬಿಸಿಲು ಮತ್ತು ಸೆಕೆಯಿಂದ ಕೂಡಿತ್ತು. ಮಂಗಳೂರಿನಲ್ಲಿ ಬುಧವಾರ 35.2 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
2 ಮನೆಗಳಿಗೆ ಹಾನಿ
ಉಡುಪಿ: ಭಾರೀ ಗಾಳಿ ಬೀಸಿದ ಪರಿಣಾಮ ಕಾರ್ಕಳದ ಮುಡಾರಿನಲ್ಲಿ ಮತ್ತು ಹೆಬ್ರಿಯ ಕಚ್ಚಾರಿನಲ್ಲಿ 2 ಮನೆಗಳ ಛಾವಣಿಗೆ ಹಾನಿ ಸಂಭವಿಸಿದೆ. ಕಾರ್ಕಳದಲ್ಲಿ ಬುಧವಾರ ಬೆಳಗ್ಗೆ 8.30ರ ಹಿಂದಿನ 24 ತಾಸು ಅವಧಿಯಲ್ಲಿ 13 ಮಿ.ಮೀ. ಮಳೆಯಾಗಿದೆ.
ಸಿಡಿಲು ಬಡಿದು ಸೀಳುಬಿಟ್ಟ ಮರ!
ಹೆಬ್ರಿ: ಹೆಬ್ರಿ, ಮುದ್ರಾಡಿ ಪರಿಸರದಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಸೀತಾನದಿ ಕೈಕಂಬ ಬಸ್ ತಂಗು ದಾಣದ ಹಿಂಬದಿ ಇರುವ ಹಲಸಿನ ಮರವೊಂದಕ್ಕೆ ಸಿಡಿಲು ಬಡಿದು ಮರ ಸೀಳು ಬಿಟ್ಟಿದೆ. ಮರದ ಹತ್ತಿರ ಇರುವ ಬಸ್ ತಂಗುದಾಣಕ್ಕೆ ಹಾನಿಯಾಗಿದೆ. ನಾರಾಯಣ ಅವರ ಅಂಗಡಿ ವಿದ್ಯುತ್ ವಯರಿಂಗ್ ಹಾಗೂ ಫ್ರಿಜ್ ಸುಟ್ಟು ಹೋಗಿದೆ.
ಉಪ್ಪಳ ಹೆದ್ದಾರಿಯಲ್ಲಿ ಮಳೆ ನೀರು
ಉಪ್ಪಳ: ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತ ಗೊಂಡಿತು. ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕಾಮಗಾರಿ ನಡೆಯುತ್ತಿರು ವುದರಿಂದ ಚರಂಡಿ ಮಳೆ ನೀರು ಹರಿಯಲು ಅವಕಾಶ ಇಲ್ಲದೆ ರಸ್ತೆಯಲ್ಲೇ ತುಂಬಿತು. ಬಳಿಕ ಜೆಸಿಬಿ ಬಳಸಿ ರಾತ್ರಿ ರಸ್ತೆಯಿಂದ ನೀರು ಹೊರಗೆ ಹರಿದು ಹೋಗಲು ವ್ಯವಸ್ಥೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-150x90.jpg)

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
![19](https://www.udayavani.com/wp-content/uploads/2025/02/19-3-150x80.jpg)
![19](https://www.udayavani.com/wp-content/uploads/2025/02/19-3-150x80.jpg)
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
![1-tengu-dsdsa](https://www.udayavani.com/wp-content/uploads/2025/02/1-tengu-dsdsa-150x88.jpg)
![1-tengu-dsdsa](https://www.udayavani.com/wp-content/uploads/2025/02/1-tengu-dsdsa-150x88.jpg)
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
![1-namm-mannu-1](https://www.udayavani.com/wp-content/uploads/2025/02/1-namm-mannu-1-150x84.jpg)
![1-namm-mannu-1](https://www.udayavani.com/wp-content/uploads/2025/02/1-namm-mannu-1-150x84.jpg)
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ