ಬಡ ದ್ವೀಪದ ಮೇಲೆ ಬಡಾ ರಾಷ್ಟ್ರಗಳ ಕಣ್ಣೇಕೆ?

Team Udayavani, May 25, 2023, 8:22 AM IST

MODI AT NEW GINI

ಜಗತ್ತಿನ ನಕ್ಷೆಯಲ್ಲಿ ಪುಟ್ಟ ರಾಷ್ಟ್ರವಾಗಿರುವ ಪಪುವಾ ನ್ಯೂಗಿನಿ ಕೆಲವು ದಿನಗಳಿಂದ ದೊಡ್ಡ ದೇಶಗಳಲ್ಲಿಯೂ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಈ ದೇಶದ ಮೇಲೆ ಚೀನ ಹೊಂದುತ್ತಿರುವ ಪ್ರಭಾವ. ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ದೇಶಗಳು ಈಗ ಅದರತ್ತ ದೃಷ್ಟಿ ನೆಟ್ಟಿವೆ. ಕ್ವಾಡ್‌ ಶೃಂಗ ನಡೆದಿದ್ದರೆ ಬೇರೆ ಬೇರೆ ದೇಶಗಳು ಅಲ್ಲಿನ ಬೆಳವಣಿಗೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿತ್ತು. ಅಮೆರಿಕದ ಅಧ್ಯಕ್ಷರಿಗೆ ಬರಲಿಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಶೃಂಗ ರದ್ದುಗೊಂಡಿದೆ. ಈ ದ್ವೀಪ ರಾಷ್ಟ್ರದಲ್ಲಿ ಶೇ. 80ಕ್ಕೂ ಅಧಿಕ ಮಂದಿ ಬಡತನ ರೇಖೆಯ ಆಸುಪಾಸಿನಲ್ಲಿದ್ದಾರೆ. ಇಲ್ಲಿ ನೈಸರ್ಗಿಕ ಸಂಪನ್ಮೂಲಗಳು ಅಧಿಕವಾಗಿದೆ. ಚೀನದ ಪ್ರಭಾವದಿಂದ ವಿಚಲಿತ ಗೊಂಡಿರುವ ಕ್ವಾಡ್‌ ರಾಷ್ಟ್ರಗಳು, ಈ ದೇಶದ ಜತೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿವೆ. ಶೃಂಗ ರದ್ದಾಗಿದ್ದರೂ ಭಾರತದ ಪ್ರಧಾನಿ ತನ್ನ ಕಾರ್ಯಸೂಚಿಯಂತೆ ಈ ದೇಶಕ್ಕೆ ಭೇಟಿ ನೀಡಿದ್ದಾರೆ. ಭಾರತವು ದ್ವೀಪ ರಾಷ್ಟ್ರಗಳ “ವಿಶ್ವಾಸಾರ್ಹ ಪಾಲುದಾರ” ಎಂದು ಹೇಳಿರುವ ಮೋದಿ ಅಲ್ಲಿನ ರಾಷ್ಟ್ರಗಳಿಗೆ ವಿವಿಧ ಸೇವೆಗಳನ್ನು ಘೋಷಿಸಿದ್ದಾರೆ.

ಭಾರತ ಮತ್ತು ಪಪುವಾ ನ್ಯೂಗಿನಿ
ಭಾರತವು 27 ಎಪ್ರಿಲ್‌ 1996ರಲ್ಲಿ ಪಪುವಾ ನ್ಯೂಗಿನಿಯಲ್ಲಿ ಆಯೋಗವನ್ನು ಆರಂಭಿಸಿತು. ಇದಾದ ಹತ್ತು ವರ್ಷಗಳ ಬಳಿಕ 2006ರಲ್ಲಿ ಭಾರತದಲ್ಲಿ ನ್ಯೂಗಿನಿಯ ರಾಯಭಾರ ಕಚೇರಿ ತೆರೆಯಲಾಯಿತು. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪಪುವಾ ನ್ಯೂಗಿನಿಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿಯಾಗಿದ್ದರು. 2006ರಲ್ಲಿ ಪ್ರಣಬ್‌ ಮುಖರ್ಜಿ ಭೇಟಿ ನೀಡಿದ್ದರು.

ಭೇಟಿ ಯಾಕೆ ಪ್ರಮುಖ ?
ಪ್ರಧಾನಿ ಮೋದಿ ಸಹಿತ ಪೆಸಿಫಿಕ್‌ನ 14 ದ್ವೀಪ ರಾಷ್ಟ್ರಗಳ ನಾಯಕರು ಫಿಪಿಕ್‌ ಶೃಂಗದಲ್ಲಿ ಭಾಗವಹಿಸಿದ್ದಾರೆ. ಭಾರತದೊಂದಿಗೆ ಕ್ವಾಡ್‌ ರಾಷ್ಟ್ರಗಳಾದ ಆಸ್ಟ್ರೇಲಿಯ, ಜಪಾನ್‌ ಹಾಗೂ ಅಮೆರಿಕಕ್ಕೂ ಈ ಭೇಟಿ ಬಹಳ ಪ್ರಮುಖವಾಗಿದೆ. ಇದಕ್ಕೆ ಕಾರಣ ಚೀನ.

ಆರ್ಥಿಕವಾಗಿ 1980ರಿಂದ ದ್ವೀಪದೊಂದಿಗೆ ಹೊಂದಿಕೊಂಡಿರುವ ಚೀನ ತನ್ನ ಆಕ್ರಮಣಕಾರಿ ವರ್ತನೆಯಿಂದ ಈ ದ್ವೀಪ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದೆ. ಚೀನ ತನ್ನ “ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌” ಅಡಿಯಲ್ಲಿ ಇಲ್ಲಿ ಹೂಡಿಕೆ ಮಾಡಿದೆ. ಚೀನದ ಬೆಳೆಯುತ್ತಿರುವ ಈ ಪ್ರಭಾವ ಭದ್ರ ತೆಯ ದೃಷ್ಟಿಯಿಂದ ದ್ವೀಪ ರಾಷ್ಟ್ರಗಳಿಗೆ ಅಪಾಯಕಾರಿಯಾಗಬಹುದು ಎಂದು ಊಹಿಸಲಾಗಿದೆ. ಅದಲ್ಲದೇ ಇಲ್ಲಿ ಯಥೇಚ್ಚವಾಗಿರುವ ಚಿನ್ನ ಹಾಗೂ ತಾಮ್ರದ ಸಂಪನ್ಮೂಲಗಳ ಮೇಲೂ ಚೀನ ಕಣ್ಣಿರಿಸಿದೆ.

ಕ್ವಾಡ್‌ ರಾಷ್ಟ್ರಗಳಲ್ಲಿ ಒಂದಾದ ಆಸ್ಟ್ರೇಲಿಯದ ಸಮೀಪದಲ್ಲಿರುವ ಪಪುವಾ ನ್ಯೂಗಿನಿಯ ಮೇಲೆ ಚೀನದ ಪ್ರಭಾವ ಬಿಗಿಯಾದರೆ ಆಸ್ಟ್ರೇಲಿಯದೊಂದಿಗೆ ಕ್ವಾಡ್‌ ರಾಷ್ಟ್ರಗಳಿಗೆ ಇದು ಅಪಾಯಕಾರಿಯಾಗಲಿದೆ. ಪಪುವಾ ನ್ಯೂಗಿನಿಯ ಮೇಲೆ ಕ್ವಾಡ್‌ ರಾಷ್ಟ್ರಗಳು ಮೊದಲಿನಿಂದಲೂ ಅಷ್ಟು ಗಮನ ಹರಿಸದೇ ಇರುವುದು ಚೀನ ಪ್ರಭಾವ ಬೆಳೆಯಲು ಕಾರಣ ಎನ್ನಲಾಗಿದೆ. ಪಪುವಾ ನ್ಯೂಗಿನಿಯಲ್ಲಿ ಚೀನದ ಪ್ರಭಾವವನ್ನು ಕಡಿಮೆ ಮಾಡಲು ಇದೀಗ ಕ್ವಾಡ್‌ ರಾಷ್ಟ್ರ ಗಳು ಸಂಬಂಧವನ್ನು ಗಟ್ಟಿಕೊಳಿಸಿಗೊಳ್ಳಲು ಪ್ರಯತ್ನಿಸುತ್ತಿದ್ದು, ಈ ಭೇಟಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.

ದ್ವೀಪ ರಾಷ್ಟ್ರ ಗಳಿಗೆ ಮೋದಿ ಘೋಷಿಸಿರುವ ಪ್ರಮುಖ ಯೋಜನೆಗಳು

 ರಿಜಿನಲ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ವಿವಿಧ ಆರೋಗ್ಯ ಸೇವೆ
 ಸೈಬರ್‌ ಟ್ರೈನಿಂಗ್‌ ಹಬ್‌
 1 ಸಾವಿರ ಸಾಗರ ಅಮೃತ ಸ್ಕಾಲರ್‌ಶಿಪ್‌
 ಸರಕಾರಿ ಕಚೇರಿಗಳಿಗೆ ಸೋಲಾರ್‌ ಪ್ರೊಜೆಕ್ಟ್ರ್‌
 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
 ಸಮುದ್ರ ಆ್ಯಂಬುಲೆನ್ಸ್‌
 ಜನ ಔಷಧ ಕೇಂದ್ರ
 ಯೋಗ ಕೇಂದ್ರ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.