ಹೆಣವಾಗಿ ಪತ್ತೆಯಾದ ತೈವಾನ್ ಶತಕೋಟ್ಯಧಿಪತಿ
Team Udayavani, May 25, 2023, 6:26 AM IST
ತೈವಾನ್: ಇತ್ತೀಚೆಗಷ್ಟೇ 134 ಕೋಟಿ ರೂ.ಗಳ ಆಸ್ತಿಗೆ ಉತ್ತರಾಧಿಕಾರಿಯಾಗಿದ್ದ ತೈವಾನ್ ಮೂಲದ ಯುವಕನೊಬ್ಬ ತಾನು ಮದುವೆಯಾದ ಕೇವಲ 2 ಗಂಟೆಗಳಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಲೈ ಎನ್ನುವ 18 ವರ್ಷದ ಯುವಕನ ತಂದೆ ಎಪ್ರಿಲ್ನಲ್ಲಿ ಮೃತಪಟ್ಟಿದ್ದು ಅವರ ಸಂಪೂರ್ಣ ಆಸ್ತಿಗೆ ಮಗನನ್ನು ಉತ್ತರಾಧಿಕಾರಿಯನ್ನಾಗಿಸಿದ್ದಾರೆ. ಬಳಿಕ ಅವರ ಆಸ್ತಿಯ ಮೇಲ್ವಿಚಾರಕರಾದ ರಿಯಲ್ ಎಸ್ಟೇಟ್ ಏಜೆಂಟ್ ಎಸ್ಸಿಯಾ ಎಂಬುವವರು 2 ಬಾರಿ ಲೈನನ್ನು ಭೇಟಿಯಾಗಿದ್ದಾರೆ. ಅನಂತರ ಇದ್ದಕ್ಕಿದ್ದಂತೆ ಮೇ 4ರಂದು ಎಸ್ಸಿಯಾ ಮನೆಯಲ್ಲಿ ಲೈ ಶವವಾಗಿ ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲಾಗಿದೆ. ಮತ್ತೂಂದೆಡೆ ಲೈ ಮತ್ತು ಎಸ್ಸಿಯಾ ಸಲಿಂಗಕಾಮಿಗಳಾಗಿದ್ದರು ಈ ಹಿನ್ನೆಲೆ ಲೈ ಎಸ್ಸಿಯಾ ಜತೆಗೆ ತಾನು ಸಾಯುವ 2 ಗಂಟೆಗೆ ಮೊದಲಷ್ಟೇ ವಿವಾಹ ನೋಂದಣಿ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಇತ್ತ ಲೈ ಅವರ ತಾಯಿ ತನ್ನ ಮಗ ಸಲಿಂಗಕಾಮಿ ಎನ್ನುವುದನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ತೈವಾನ್ ಕಾನೂನಿನ ಪ್ರಕಾರ ಸಾಮಾನ್ಯ ವಿವಾಹವಾದ ದಂಪತಿಗಿರುವಂತೆಯೇ, ಸಲಿಂಗ ದಂಪತಿಗೂ ಸಂಗಾತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುವ ಹಿನ್ನೆಲೆ ಎಸ್ಸಿಯನೆ ಈ ಸಂಚು ರೂಪಿಸಿ ತನ್ನ ಮಗನನ್ನು ಕೊಂದಿದ್ದಾನೆಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.