Mysuru ಅಭಿವೃದ್ಧಿಗಾಗಿ ನಾನು ಯಾರ ‘ಕೈ’ ಕಾಲು ಬೇಕಾದರೂ ಹಿಡಿಯುತ್ತೇನೆ: ಪ್ರತಾಪ್ ಸಿಂಹ
40% ಕಮಿಷನ್ ಕುರಿತು ಸರಕಾರ ತನಿಖೆ ಮಾಡಬೇಕು... ಬಿಜೆಪಿ ಎಚ್ಚೆತ್ತು ಕೊಳ್ಳಬೇಕಿತ್ತು...
Team Udayavani, May 25, 2023, 3:54 PM IST
ಮೈಸೂರು: ಮೈಸೂರು – ಕೊಡಗಿನ ಅಭಿವೃದ್ಧಿಗಾಗಿ ನಾನು ಯಾರ ಕೈ ಕಾಲು ಬೇಕಾದರೂ ಹಿಡಿಯುತ್ತೇನೆ, ಅಂಗಲಾಚುತ್ತೇನೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಗುರುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ಸರಕಾರ ತಡೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಎಷ್ಟು ಪರ್ಸೆಂಟ್ ಕಮೀಷನ್ ವೈಟ್ ಮಾಡುತ್ತಿದ್ದೀರಾ? ಪರ್ಸೆಂಟೆಜ್ ಗಾಗಿ ನೀವು ಇಂಥ ಆದೇಶ ಮಾಡಿದ್ದಿರಾ? ಆಡಳಿತ ನಡೆಸುವವರು ಬದಲಾಗುತ್ತಾರೆ. ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ.ವ್ಯವಸ್ಥೆ ಹೀಗಿರುವಾಗ ಕಾಮಗಾರಿಗೆ ಹಣ ಬಿಡುಗಡೆ ಯಾಕೆ ತಡೆದಿದ್ದೀರಿ ಎಂದು ಪ್ರಶ್ನಿಸಿದರು.
ನಾನು ಸಿಎಂ ಮನೆಗೆ ಹೋಗುತ್ತೇನೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ ಎಂದರು. ಅಭಿವೃದ್ಧಿ ಪರ ಇರೋರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಮಾಡಿ ಎಂದರು.
ಬಿಜೆಪಿ ಸರಕಾರದ ಮೇಲೆ 40% ಕಮಿಷನ್ , ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು.ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ತಕ್ಷಣ ತನಿಖೆ ಮಾಡಿ. 40% ಕಮಿಷನ್ ಸರಕಾರ ಅಂತಾ ಊರೂರು ತಿರುಗಿ ಪ್ರಚಾರ ಮಾಡಿದ್ದೀರಿ. ಈಗ ನೀವೆ ಅಧಿಕಾರಕ್ಕೆ ಬಂದಿದ್ದಿರಿ. ತನಿಖೆ ಮಾಡಿ.ತಪ್ಪು ಮಾಡಿದವರನ್ನು ಶಿಕ್ಷಿಸಿ. ನಾನೇ ಬಂದು ಕಾಲಿಗೆ ಬಂದು ನಮಸ್ಕಾರ ಮಾಡುತ್ತೇನೆ ಎಂದರು.
ಕಮಿಷನ್ ಪಡೆವರನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು. ಈ ಜವಾಬ್ದಾರಿ ನಿಭಾಯಿಸದೆ ಇದ್ದರೆ ನೀವು ಹೇಳಿದ್ದು ಸುಳ್ಳು ಅಂತಾ ಆಗುತ್ತದೆ. ನಾನು ಅಂತರಾಳದಿಂದಲೇ ನಮ್ಮ ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ. ನಮ್ಮ ಕಾರ್ಯಕರ್ತರ ಟಾರ್ಗೆಟ್ ನಿಧಾನವಾಗಿ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ನಮ್ಮ ಕಾರ್ಯಕರ್ತರನ್ನು ಅಪಾಯಕ್ಕೆ ತಳ್ಳಿದ್ದಕ್ಕೆ ನಾನು ಕ್ಷಮೆ ಕೇಳಿದ್ದೇನೆ. ನಮ್ಮ ಕಾರ್ಯಕರ್ತರು ನಿಜವಾಗಿಯೂ ನೊಂದಿದ್ದಾರೆ. ದೇಶ, ಧರ್ಮ ಅಂತಾ ನಮ್ಮ ಕಾರ್ಯಕರ್ತರು ದುಡಿಯುತ್ತಾರೆ. ನಮ್ಮಲ್ಲಿ ಗುತ್ತಿಗೆದಾರಿಕೆ ಮಾಡುವ ಕಾರ್ಯಕರ್ತರೆ ಕಡಿಮೆ ಎಂದರು.
ವಿಧಾನಸಭಾ ಚುನಾವಣಾ ಫಲಿತಾಂಶದ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಬೀರುವುದಿಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಅಂತಾ ಕನ್ನಡಿಗರಿಗೆ ಗೊತ್ತಿದೆ. ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತು ಕೊಳ್ಳಬೇಕಿತ್ತು. ಎಚ್ಚೆತ್ತು ಕೊಂಡಿದ್ದರೆ ಬಿಜೆಪಿಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ.ಗ್ಯಾರಂಟಿ ಸ್ಕಿಂ ಪರ ನಾನು ಇದ್ದೇನೆ. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿ ಇದೆ.
ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ. ಮುಂದಿನ ತಲೆ ಮಾರನ್ನು ಅಪಾಯಕ್ಕೆ ತಳ್ಳಬೇಡಿ. ಗ್ಯಾರಂಟಿ ಕಾರ್ಡ್ ಅಲ್ಲಿ ಕಂಡಿಷನ್ ಅಪ್ಲೇ ಎಂದು ಎಲ್ಲೂ ಹಾಕಿಲ್ಲ.ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು.ಜೂನ್ 1 ರವರೆಗೆ ಕಾಯುತ್ತೇನೆ. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ.200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತಿರಾ ಹೆಚ್ಚುವರಿಗೆ ಮಾತ್ರ ಕಟ್ಟಿ. ಕಂಡಿಷನ್ ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ ಎಂದರು.
ನಿಮ್ಮ ಮುಖ ನೋಡಿ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ ಅದು ನೆನಪಿರಲಿ.ನಾವು ಸೋತಿದ್ದೇವೆ. ನಾವು ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ.ಸಿದ್ದರಾಮಯ್ಯ ಅವರು ಅಥವಾ ನಾನು ಯಾರು ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಅನ್ನೋದು ಯಾರ ಸ್ವತ್ತೂ ಅಲ್ಲ ಎಂದರು.
ಪೊಲೀಸ್ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ. ವಿಧಾನಸೌಧದದಲ್ಲಿ ಕೂತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ? ಮೊದಲು ಪೊಲೀಸ್ ಇಲಾಖೆ ಗೆ ಧಮ್ಕಿ ಹಾಕುವುದು ನಿಲ್ಲಿಸಿ.ಫೆಬ್ರವರಿ ಯಲ್ಲಿ ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಈಗ ಧಮ್ಕಿ ಹಾಕಿ ಎಫ್ಐ ಆರ್ ಮಾಡಿಸಿದ್ದಾರೆ ಎಂದರು.
ಸರಕಾರ ಯಾರದ್ದೆ ಇರಬಹುದು ನಾನು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಯುವುದಕ್ಕೆ ಬಿಡಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.