IPL 2023: ಮುಂಬೈ, ಗುಜರಾತ್‌ಗೆ ಇನ್ನೊಂದು ಅವಕಾಶ
ಇಂದು ದ್ವಿತೀಯ ಕ್ವಾಲಿಫೈಯರ್: ಫೈನಲ್ ಹಂತಕ್ಕೇರಲು ಹೋರಾಟ
Team Udayavani, May 26, 2023, 6:54 AM IST
ಅಹ್ಮದಾಬಾದ್: ಈ ಬಾರಿಯ ಐಪಿಎಲ್ ಅಂತಿಮ ಘಟಕ್ಕೆ ತಲುಪಿದ್ದು ಶುಕ್ರವಾರ ಎರಡನೇ ಕ್ವಾಲಿಫೈಯರ್ ಪಂದ್ಯವು ಇಲ್ಲಿನ ವಿಶ್ವದ ಬೃಹತ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದು ಐಪಿಎಲ್‌ನ ಫೈನಲ್ ಸಮರಕ್ಕೇರಲು ಈ ಎರಡು ತಂಡಗಳಿಗೆ ಇನ್ನೊಂದು ಅವಕಾಶ ಲಭಿಸಿದೆ. ಇಲ್ಲಿ ಗೆದ್ದವರು ಮೇ 27ರಂದು ನಡೆಯುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದು ಈಗಾಗಲೇ ಫೈನಲಿಗೆ ತೇರ್ಗಡೆಯಾಗಿದೆ.
ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆಕಾಶ್ ಮಧ್ವಾಲ್ ಅವರ ಅದ್ಭುತ ನಿರ್ವಹಣೆಯಿಂದ ಲಕ್ನೋ ತಂಡವನ್ನು 81 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ದ್ವಿತೀಯ ಕ್ವಾಲಿಫೈಯರ್‌ನಲ್ಲೂ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಸ್ಟಾರ್ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಜೋಫ್ರ ಆರ್ಚರ್ ಅವರ ಅನುಪಸ್ಥಿತಿಯ ಹೊರಯಾಗಿಯೂ ಮುಂಬೈ ಶ್ರೇಷ್ಠ ನಿರ್ವಹಣೆ ನೀಡುತ್ತಿರುವುದು ಎದುರಾಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಕಳೆದ ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಈ ಬಾರಿ ಆರಂಭದಲ್ಲಿ ಸಾಧಾರಣ ನಿರ್ವಹಣೆ ನೀಡಿತ್ತು. ಆದರೆ ಕೂಟ ಸಾಗುತ್ತಿದ್ದಂತೆ ಮುಂಬೈಯ ಬ್ಯಾಟಿಂಗ್ ವೈಭವ ಪ್ರಕಾಶಮಾನವಾಯಿತು. ಪಂದ್ಯದಿಂದ ಪಂದ್ಯಕ್ಕೆ ಮೇಲುಗೈ ಸಾಧಿಸುತ್ತ ಮೇಲೇರಿದ ಮುಂಬೈ ಅದೃಷ್ಟದ ಬಲದಿಂದ ಪ್ಲೇ ಆಫ್ಗೆ ನೆಗೆಯಿತು. ಕ್ಯಾಮರಾನ್ ಗ್ರೀನ್, ಸೂರ್ಯಕುಮಾರ್ ಯಾದವ್ ಮತ್ತು ಟಿಮ್ ಡೇವಿಡ್ ತಂಡಕ್ಕೆ ಎದುರಾದ ಸವಾಲಿಗೆ ಸಮರ್ಥವಾಗಿ ಉತ್ತರಿಸಿದ್ದು ತಂಡದ ಬ್ಯಾಟಂಗ್ ಶಕ್ತಿಯಾಗಿ ಮೂಡಿ ಬಂದಿದ್ದಾರೆ. ಇದರ ಜತೆ ಯುವ ಆಟಗಾರ ನೇಹಲ್ ವಧೇರ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದು ತಂಡದ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ. ಆರಂಭಕಾರದ ಇಶಾನ್ ಕಿಶನ್ ಮತ್ತು ರೋಹಿತ್ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ.
ಮುಂಬೈಯ ಬೌಲಿಂಗ್ ಪಡೆಯೂ ಬಲಿಷ್ಠವಾಗಿದ್ದು ಎಲಿಮಿನೇಟರ್ ಪಂದ್ಯದಲ್ಲಿ ಇದು ಸಾಬೀತಾಗಿದೆ. ಆಕಾಶ್ ಮಧ್ವಾಲ್ ಅದ್ಭುತ ಬೌಲಿಂಗ್ ದಾಳಿಗೆ ಲಕ್ನೋ ನೆಲಕಚಿತ್ತು. ಅವರು ಗುಜರಾತ್ ವಿರುದ್ಧವೂ ಇದೇ ರೀತಿಯ ದಾಳಿ ಸಂಘಟಿಸುವ ವಿಶ್ವಾಸದಲ್ಲಿದ್ದಾರೆ. ಅನುಭವಿ ಪೀಯೂಷ್ ಚಾವ್ಲಾ ಮತ್ತು ಜೇಸನ್ ಬೆಹ್ರಂಡಾಫ್ì ಉತ್ತಮ ಫಾರ್ಮ್ನಲ್ಲಿದ್ದಾರೆ. ಕ್ರಿಸ್ ಜೋರ್ಡಾನ್ ಕೂಡ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲರು.
ತಿರುಗೇಟಿಗೆ ಗುಜರಾತ್ ಪ್ರಯತ್ನ
ಲೀಗ್ ಹಂತದಲ್ಲಿ ಅಮೋಘ ನಿರ್ವಹಣೆ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ನೀರಸ ಪ್ರದರ್ಶನ ನೀಡಿ ಸೋಲನ್ನು ಕಂಡಿತ್ತು. ತಂಡದ ಪ್ರಮುಖ ಆಟಗಾರರ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಶುಭ್‌ಮನ್ ಗಿಲ್ ಮಾತ್ರ ಸ್ವಲ್ಪಮಟ್ಟಿಗೆ ಹೋರಾಟದ ಪ್ರದರ್ಶನ ನೀಡಿದ್ದರೂ ಅದರಿಂದ ತಂಡಕ್ಕೇನೂ ಪ್ರಯೋಜನವಾಗಿಲ್ಲ. ಆದರೆ ಈ ಐಪಿಎಲ್‌ನಲ್ಲಿ ಗಿಲ್ ಅವರ ಸಾಧನೆ ಅತ್ಯಮೋಘವಾಗಿದೆ. ಎರಡು ಶತಕ ಬಾರಿಸಿರುವ ಅವರು ಆಡಿದ 15 ಪಂದ್ಯಗಳಿಂದ 722 ರನ್ ಪೇರಿಸಿದ ಸಾಧಕರಾಗಿದ್ದಾರೆ. ನಾಲ್ಕು ಅರ್ಧಶತಕ ಹೊಡೆದಿದ್ದಾರೆ. ಗುಜರಾತ್‌ನ ಎರಡನೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗಿಂತ 421 ರನ್ ಹೆಚ್ಚು ರನ್ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ವಿಜಯ್ ಶಂಕರ್ 301 ರನ್ ಗಳಿಸಿದ್ದಾರೆ.
ಗಿಲ್ ಮತ್ತು ಶಂಕರ್ ಅವರಲ್ಲದೇ ನಾಯಕ ಹಾರ್ದಿಕ್ ಪಾಂಡ್ಯ, ಕೆಳಗಿನ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯ, ರಶೀದ್ ಖಾನ್ ತಂಡವನ್ನು ಆಧರಿಸಬಲ್ಲರು. ಕಳೆದ ಐದು ಪಂದ್ಯಗಳಲ್ಲಿ ಕಳಪೆಯಾಗಿ ಆಡಿರುವ ಪಾಂಡ್ಯ ಮಹತ್ವದ ಪಂದ್ಯದಲ್ಲಿ ಭರ್ಜರಿ ಆಟದ ನಿರೀಕ್ಷೆಯಲ್ಲಿದ್ದಾರೆ.
ಇದು ಗುಜರಾತ್ ಮತ್ತು ಮುಂಬೈ ನಡುವೆ ಈ ಋತುವಿನಲ್ಲಿ ನಡೆಯ ಲಿರುವ ಮೂರನೇ ಹೋರಾಟ ವಾಗಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ಒಂದರಲ್ಲಿ ಜಯ ಗಳಿಸಿದೆ. ಇದೇ ತಾಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ 55 ರನ್ನುಗಳಿಂದ ಮುಂಬೈಯನ್ನು ಸೋಲಿಸಿತ್ತು. ಇನ್ನೊಂದು ಪಂದ್ಯ ದಲ್ಲಿ ಸೂರ್ಯಕುಮಾರ್ ಯಾದವ್ ಅವರ ಚೊಚ್ಚಲ ಶತಕದಿಂದಾಗಿ ಮುಂಬೈ 27 ರನ್ನುಗಳಿಂದ ಜಯ ಭೇರಿ ಬಾರಿಸಿತ್ತು. ಒಂದು ವೇಳೆ ರಶೀದ್ ಖಾನ್ 32 ಎಸೆತಗಳಿಂದ 72 ರನ್ ಸಿಡಿಸದೇ ಹೋಗಿದ್ದರೆ ಮುಂಬೈಯ ಗೆಲುವಿನ ಅಂತರದ ಇನ್ನಷ್ಟು ಹೆಚಾjಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.