Monsoon: ಜೂನ್ 4ಕ್ಕೆ ಕೇರಳಕ್ಕೆ ಮುಂಗಾರು ಆಗಮನ
Team Udayavani, May 27, 2023, 7:54 AM IST
ನವದೆಹಲಿ: ಈ ಬಾರಿಯ ಮುಂಗಾರು ಆಗಮನ ಸಾಮಾನ್ಯವಾಗಿರಲಿದ್ದು ಜೂನ್1ಕ್ಕೂ ಮುಂಚಿತವಾಗಿ ಮುಂಗಾರು ಆಗಮನ ಸಾಧ್ಯತೆ ಇಲ್ಲ. ಕೇರಳಕ್ಕೆ ಜೂನ್4ರಂದು ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಅಲ್ಲದೇ, ಮುಂದಿನವಾರ ಅರಬ್ಬೀ ಸಮದ್ರದಲ್ಲಿ ಯಾವುದೇ ಚಂಡಮಾರುತದ ಸಂಭವನೀಯತೆಯೂ ವರದಿಯಾಗಿಲ್ಲ. ಈ ಹಿನ್ನೆಲೆ ಎಲ್ಲೆಡೆ ಮುಂಗಾರಿನ ಸಮಾನ ಹಂಚಿಕೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದಲ್ಲಿ ಕೃಷಿಯ ಮೇಲೆ ಹೆಚ್ಚಿನ ಪರಿಣಾಮವೇನು ಬೀರುವುದಿಲ್ಲವೆಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ಬೇಗೆಗೆ ಬ್ರೇಕ್ ನೀಡಿ, ಶುಕ್ರವಾರ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಇನ್ನೂ ಕೆಲ ದಿನಗಳು ಮಳೆಯಾಗುವ ಹಿನ್ನೆಲೆ ಮೇ 30ರ ವರೆಗೆ ದೆಹಲಿಗೆ ಬಿಸಿಲ ಬೇಗೆಯಿಂದ ಬ್ರೇಕ್ ಸಿಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.