ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್: ಸಿಂಧು, ಪ್ರಣಯ್ ಸೆಮಿಫೈನಲ್ ಪ್ರವೇಶ
Team Udayavani, May 27, 2023, 6:30 AM IST
ಕೌಲಾಲಂಪುರ: ಸ್ಟಾರ್ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ “ಮಲೇಷ್ಯಾ ಮಾಸ್ಟರ್ ಸೂಪರ್-500′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಕೆ. ಶ್ರೀಕಾಂತ್ ಕೂಟದಿಂದ ನಿರ್ಗಮಿಸಿದ್ದಾರೆ.
6ನೇ ಶ್ರೇಯಾಂಕ ಹೊಂದಿರುವ ಪಿ.ವಿ. ಸಿಂಧು ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ತೀವ್ರ ಪೈಪೋಟಿಯೊಡ್ಡಿದ ತನಗಿಂತ ಕೆಳ ರ್‍ಯಾಂಕಿಂಗ್ ಆಟಗಾರ್ತಿ, ಚೀನದ ಯೀ ಮಾನ್ ಜಾಂಗ್ ಅವರನ್ನು 21-16, 13-21, 22-20 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕಳೆದ “ಆಲ್ ಇಂಗ್ಲೆಂಡ್ ಓಪನ್’ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
ಸಿಂಧು ಅವರಿನ್ನು 7ನೇ ಶ್ರೇಯಾಂಕದ, ವಿಶ್ವದ ನಂ.9 ಆಟಗಾರ್ತಿಯಾಗಿರುವ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ಟುಂಜುಂಗ್ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯ ಶನಿವಾರ ನಡೆಯಲಿದೆ. ದಿನದ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಟುಂಜುಂಗ್ ದ್ವಿತೀಯ ಶ್ರೇಯಾಂಕದ ಚೀನೀ ಆಟಗಾರ್ತಿ ಯೀ ಜೀ ವಾಂಗ್ ಅವರನ್ನು 21-18, 22-20 ಅಂತರದಿಂದ ಪರಾಭವಗೊಳಿಸಿದರು.
ಸದ್ಯ ಟುಂಜುಂಗ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಎಪ್ರಿಲ್‌ನಲ್ಲಿ ನಡೆದ “ಮ್ಯಾಡ್ರಿಡ್ ಮಾಸ್ಟರ್’ ಫೈನಲ್‌ನಲ್ಲಿ ಇವರೆದುರು ಸಿಂಧು ಪರಾಭವ ಗೊಂಡಿದ್ದರು. ಆದರೆ ಟುಂಜುಂಗ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಸಿಂಧು ಸೋಲನುಭವಿಸಿದ್ದು ಈ ಪಂದ್ಯದಲ್ಲಿ ಮಾತ್ರ.
ತಪ್ಪಿದ ಇಂಡಿಯನ್ ಸೆಮಿಫೈನಲ್
ವಿಶ್ವದ 9ನೇ ರ್‍ಯಾಂಕಿಂಗ್ ಆಟಗಾರನಾಗಿರುವ ಎಚ್.ಎಸ್. ಪ್ರಣಯ್ ಜಪಾನ್‌ನ ಕೆಂಟ ನಿಶಿಮೊಟೊ ಅವರನ್ನು ಜಿದ್ದಾಜಿದ್ದಿ ಕಾಳಗದಲ್ಲಿ 25-23, 18-21, 21-13ರಿಂದ ಮಣಿಸಿದರು. ಪ್ರಣಯ್ ಅವರಿನ್ನು 57ನೇ ರ್‍ಯಾಂಕಿಂಗ್‌ನ ಇಂಡೋನೇಷ್ಯಾ ಆಟಗಾರ ಕ್ರಿಸ್ಟಿಯನ್ ಆದಿನಾಥ ವಿರುದ್ಧ ಆಡಲಿದ್ದಾರೆ. ಆದಿನಾಥ ಭಾರತದ ಮತ್ತೋರ್ವ ಆಟಗಾರ ಕೆ. ಶ್ರೀಕಾಂತ್‌ಗೆ 16-21, 21-16, 21-11 ಅಂತರದ ಸೋಲುಣಿಸಿದರು. ಇಲ್ಲವಾದರೆ “ಆಲ್ ಇಂಡಿಯನ್ ಸೆಮಿಫೈನಲ್’ ಸ್ಪರ್ಧೆಯೊಂದನ್ನು ಕಾಣಬಹುದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.