Junior Asia Cup Hockey: ಭಾರತ-ಪಾಕ್ ಪಂದ್ಯ ಡ್ರಾ
Team Udayavani, May 29, 2023, 5:59 AM IST
ಸಲಾಲ (ಒಮಾನ್): ತೀವ್ರ ಪೈಪೋಟಿಯಿಂದ ಕೂಡಿದ ಭಾರತ-ಪಾಕಿಸ್ಥಾನ ನಡುವಿನ ಜೂನಿ ಯರ್ ಏಷ್ಯಾ ಕಪ್ ಹಾಕಿ ಲೀಗ್ ಪಂದ್ಯ 1-1 ಡ್ರಾದಲ್ಲಿ ಅಂತ್ಯ ಕಂಡಿದೆ.
ಶನಿವಾರ ರಾತ್ರಿ ನಡೆದ ಈ ಮುಖಾಮುಖೀಯಲ್ಲಿ 24ನೇ ನಿಮಿ ಷದಲ್ಲೇ ಶರದಾನಂದ ತಿವಾರಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಮತ್ತೆ 20 ನಿಮಿಷ ಉರುಳಿದ ಬಳಿಕ ಪಾಕಿಸ್ಥಾನದ ಬಶರತ್ ಅಲಿ ಪಂದ್ಯ ವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿ ಯಾದರು. ಇತ್ತಂಡಗಳು ಕೊನೆಯ ತನಕ ಈ ಸಮಬಲದ ಹೋರಾಟವನ್ನೇ ಕಾಯ್ದುಕೊಂಡು ಬಂದವು.
ಈ ಫಲಿತಾಂಶದೊಂದಿಗೆ “ಎ’ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳೆರಡೂ ಅಜೇಯ ಅಭಿಯಾನ ಕಾಯ್ದುಕೊಂಡು ಬಂದಂತಾಯಿತು (2 ಗೆಲುವು, 1 ಡ್ರಾ). ಇತ್ತಂಡಗಳೂ ಸಮಾನ 7 ಅಂಕ ಗಳಿಸಿವೆ. ಆದರೆ ಗೋಲು ಅಂತರದಲ್ಲಿ ಪಾಕಿಸ್ಥಾನವೇ ಅಗ್ರಸ್ಥಾನದಲ್ಲಿದೆ. ಭಾರತ ದ್ವಿತೀಯ ಸ್ಥಾನಿಯಾಗಿದೆ. ಚೈನೀಸ್ ತೈಪೆಯನ್ನು 18-0 ಅಂತರದಿಂದ, ಜಪಾನನ್ನು 3-1 ಗೋಲುಗಳಿಂದ ಮಣಿಸಿದ ಸಾಧನೆ ಭಾರತದ್ದು.
ದಿನದ ಇನ್ನೊಂದು ಪಂದ್ಯದಲ್ಲಿ ಚೈನೀಸ್ ತೈಪೆಯನ್ನು 10-1 ಗೋಲು ಗಳಿಂದ ಮಣಿಸಿದ ಜಪಾನ್ 3ನೇ ಸ್ಥಾನದಲ್ಲಿದೆ.
ವ್ಯರ್ಥವಾದ ಅವಕಾಶ
ಭಾರತ, ಪಾಕಿಸ್ಥಾನಗಳೆರಡೂ ಆರಂಭದಲ್ಲೇ ಕೆಲವು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ ಗೋಲಾಗಿಸುವಲ್ಲಿ ವಿಫಲವಾದವು. ಪಾಕಿಸ್ಥಾನಕ್ಕೆ ಹೆಚ್ಚಿನ ಅವಕಾಶ ಇತ್ತಾ ದರೂ ಗೋಲ್‌ಕೀಪರ್ ಅಮನ್‌ದೀಪ್ ಲಾಕ್ರಾ ಇದನ್ನು ತಡೆಯುವಲ್ಲಿ ಯಶಸ್ವಿಯಾದರು. ಹೀಗೆ ಮೊದಲ ಕ್ವಾರ್ಟರ್ ಗೋಲ್‌ಲೆಸ್ ಆಗಿ ಕೊನೆಗೊಂಡಿತು.
ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಭಾರತ ಬಿರುಸಿನ ಆಟವಾಡಿತು. ಪರಿಣಾಮ, ಶರದಾನಂದ ತಿವಾರಿ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿ ಯಾದರು. ಈ ಮುನ್ನಡೆ ಬಳಿಕ ಭಾರತ ಹೆಚ್ಚು ಆತ್ಮವಿಶ್ವಾಸದಿಂದ ಆಡ ತೊಡಗಿತು. ಪಾಕಿಸ್ಥಾನದ ರಕ್ಷಣಾ ವಿಭಾ ಗಕ್ಕೆ ಸವಾಲಾಗಿ ಪರಿಣಮಿ ಸಿತು. ಅರ್ಧ ಹಾದಿ ತನಕ ಭಾರತ ಮುನ್ನಡೆ ಕಾಯ್ದು ಕೊಳ್ಳುವಲ್ಲಿ ಯಶಸ್ವಿ ಯಾಯಿತು.
3ನೇ ಹಂತದ ಆಟ ಆರಂಭಗೊಂಡ ನಾಲ್ಕೇ ನಿಮಿಷದಲ್ಲಿ ಬಶರತ್ ಅಲಿ ಫೀಲ್ಡ್ ಗೋಲ್ ಮೂಲಕ ಪಾಕಿ ಸ್ಥಾನದ ಖಾತೆ ತೆರೆದರು.
ಭಾರತ ಕೊನೆಯ ಲೀಗ್ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.