ಬೈಲಹೊಂಗಲ: ಈ ಮಲ್ಲೇಶ ಕೃಷಿಯಲ್ಲಿ ಮಲ್ಲ; ಕ್ಯಾರಟ್ ಬೆಳೆಯಿಂದ ನಿರೀಕ್ಷಿತ ಆದಾಯ
ಬಾಳೆ ಹಣ್ಣು ಇರುವದರಿಂದ ಒಂದು ಡಜನ್‌ಗೆ 40 ರೂ. ದೊರಕುತ್ತದೆ.
Team Udayavani, May 29, 2023, 2:45 PM IST
ಬೈಲಹೊಂಗಲ: ತಾಲೂಕಿನ ಮದನಭಾವಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶ ಬಸಲಿಂಗಪ್ಪ ಗುಜನಾಳ ತಮ್ಮ ಹೊಲದಲ್ಲಿ ಬಾಳೆ, ಗಜ್ಜರಿ(ಕ್ಯಾರಟ್), ಬಳ್ಳೊಳ್ಳಿ, ಸೋಯಾಬಿನ್ ಬೆಳೆ ಬೆಳೆದು ಯಶಸ್ವಿ ಕೃಷಿ ಮಾಡುವ ಮೂಲಕ ಭರಪೂರ ಆದಾಯ ಗಳಿಸುತ್ತಿದ್ದಾರೆ.
ಎರಡು ಎಕರೆ ತೋಟದಲ್ಲಿ ಬಾಳೆ ಗಿಡಗಳನ್ನು ಬೆಳೆಸಿ ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿರುವುದಲ್ಲದೆ, ಸೋಯಾಬಿನ್, ಬಳ್ಳೊಳ್ಳಿ ಒಳಗೊಂಡಂತೆ ತಮ್ಮ ಹೊಲದ ಇತರ ಬೆಳೆಯಿಂದ ವಾರ್ಷಿಕವಾಗಿ 15 ಲಕ್ಷಕ್ಕಿಂತ ಹೆಚ್ಚು
ಆದಾಯ ಗಳಿಸುವ ಮೂಲಕ ಸಂತಸದ ಜೀವನ ಸಾಗಿಸುತ್ತಿದ್ದಾರೆ.
ಒಟ್ಟು 30 ಏಕರೆ ಹೊಲ ಹೊಂದಿರುವ ಇವರು 2022 ರಲ್ಲಿ ಗಜ್ಜರಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದು, ಒಂದು ಏಕರೆ ಪ್ರದೇಶದಲ್ಲಿ ಬಳ್ಳೊಳ್ಳಿ ಬೆಳೆದಿದ್ದಾರೆ. ಉಳಿದ 25 ಏಕರೆ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಈ ಭಾಗದ ಮುಖ್ಯ
ಬೆಳೆಯಾದ ಸೋಯಾಬಿನ್ ಬೆಳೆಯುತ್ತಾರೆ.
ನೋಡುಗರ ಸೆಳೆಯುವ ಬಾಳೆ ತೋಟ: ಎರಡು ವರ್ಷಗಳಿಂದ ಎರಡು ಎಕರೆಯಲ್ಲಿ ಬಾಳೆ ಬೆಳೆಯಲಾಗುತ್ತಿದ್ದು, ಸದ್ಯ 40 ಸಾವಿರ ಖರ್ಚು ಮಾಡಿದ್ದು, ದಿನಂಪ್ರತಿ 10 ಡಜನ್ ಬಾಳೆ ಹಣ್ಣನ್ನು ಗ್ರಾಮದಲ್ಲಿಯೇ ಮಾರುತ್ತಾರೆ. ಕೆಲವು ಬಾರಿ ನೇಸರಗಿ ಸಂತೆಯಲ್ಲೂ ಬಾಳೆ ಹಣ್ಣನ್ನು ಮಾರಿ ಆದಾಯ ಮಾಡಿಕೊಳ್ಳುತ್ತಾರೆ. ಇದು ಜವಾರಿ ಬಾಳೆ ಹಣ್ಣು ಇರುವದರಿಂದ ಒಂದು ಡಜನ್‌ಗೆ 40 ರೂ. ದೊರಕುತ್ತದೆ.
ಬಾಳೆ ಬೆಳೆಯುವ ಸಂದರ್ಭದಲ್ಲಿ ಡಿಎಪಿ ರಾಸಾಯನಿಕ ಗೊಬ್ಬರ, 10 ಟ್ರಾಕ್ಟರ್ ತಿಪ್ಪೆಗೊಬ್ಬರ ಹಾಕಿದ್ದಾರೆ. ನಂತರ ಪೊಟ್ಯಾಶ್, ಯೂರಿಯಾ ಸಹ ಭೂಮಿಗೆ ಹಾಕಿ ಫಲವತ್ತಾಗಿ ಬೆಳೆ ಬರುವಂತೆ ಬೆಳೆಸಿದ್ದಾರೆ. ಬಾಳೆ ಬಲಿತ ಬಳಿಕ ಕಸ, ಕಡ್ಡಿ ಮತ್ತು ಬಾಳೆ ಒಣ ಗರಿ ಸ್ವಚ್ಚಗೊಳಿಸಬೇಕಾಗುತ್ತದೆ. ಮಳೆಯನ್ನೇ ನಂಬಿ ಕೃಷಿ ಮಾಡಬೇಕಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಲ್ಲೇಶ ಅವರು ತಮ್ಮ ಹೊಲದಲ್ಲಿರುವ ಹಳೆಯ ಬಾವಿ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಾರೆ.
ಇದರಿಂದ ಬೆಳೆಗೆ ಉತ್ತಮ ನೀರು ಲಭಿಸುತ್ತಿದೆ. ಇವರು ಒಂದು ಜೋಡಿ ಎತ್ತು, ಟ್ರಾಕ್ಟರ್ ಮೂಲಕ ಉಳಿಮೆ ಮಾಡುತ್ತಾರೆ. ಅವಿಭಕ್ತ ಕುಟುಂಬದಿಂದ ಬಂದಿರುವ ಇವರಿಗೆ ಸಹೋದರರು ಸೇರಿದಂತೆ ರೈತ ಕಾರ್ಮಿಕರು ಸಹಾಯ ಮಾಡುತ್ತಾರೆ.
ಗಜ್ಜರಿಯಿಂದ ನಿರೀಕ್ಷಿತ ಆದಾಯ: ಕಳೆದ ಮುಂಗಾರು ಹಂಗಾಮಿನಲ್ಲಿ ಎರಡು ಎಕರೆಯಲ್ಲಿ ಗಜ್ಜರಿ ಬೆಳೆಯನ್ನು ಬೆಳೆದಿದ್ದು ಉಸುಕು ಮಿಶ್ರಣ ಮೂಲಕ ಈ ಗಜ್ಜರಿ ಬೀಜವನ್ನು ಹಾಕಲಾಗಿತ್ತು. ಇದರಿಂದ ಬೀಜ ಬೇರೆ ಕಡೆ ಹಾರಿ ಹೋಗುವದಿಲ್ಲ ಎಂಬುದು ಸಹಜವಾದ ನಂಬಿಕೆಯಾಗಿದೆ. ಇದಕ್ಕೆ ಹನಿ ನೀರಾವರಿ ಮೂಲಕ ನೀರು ಹಾಯಿಸಲಾಗಿತ್ತು. ಬೀಜಕ್ಕಾಗಿ 15 ಸಾವಿರ ರೂ. ಖರ್ಚು ಮಾಡಿದ್ದರು. ಬಳ್ಳೊಳ್ಳಿ ಬೀಜಕ್ಕೆ 20 ಸಾವಿರ ರೂ. ಖರ್ಚು ಮಾಡಿದ್ದಾರೆ. ತಲಾ ಎರಡೂ ಬೆಳೆಯಿಂದ ವಾರ್ಷಿಕವಾಗಿ 4 ಲಕ್ಷ ರೂ. ಆದಾಯ ಪಡೆದಿದ್ದಾರೆ.
ಶಾಂತಿ-ಸಮಾಧಾನದ ಕೆಲಸ
ಕೃಷಿ ಕೆಲಸದಲ್ಲಿ ಇರುವಷ್ಟು ಸಮಾಧಾನ, ಶಾಂತಿ ಮತ್ತು ಆದಾಯ ಬೇರೆ ಕ್ಷೇತ್ರದಾಗ ಇಲ್ಲರೀ. ಹಿಂಗಾಗಿ ಈಗ ನನ್ನ ಮೂಲ ಕಸಬು ರೈತಕೀನ ಆಗಿದೇರಿ. ಇದರಲ್ಲೇ ಕೈತುಂಬ ಆದಾಯ ಗಳಿಸುತ್ತಿರುವೆ’. ಭೂಮಿ ತಾಯಿನ್ನ ನಂಬಿ ಶ್ರಮ ಮಾಡಿ ಬೆಳೆದರ ಭೂತಾಯಿ ಫಲ ಕೊಡತಾಳ. ಹಿಂಗಾಗಿ ಪ್ರಕೃತಿಯ ಮಡಿಲಿನ್ಯಾಗ ಲಾಭದಾಯಕ ಜೀವನ ಸಾಗಿಸುವಂತಾಗೇತಿ. ಶಿಸ್ತುಬದ್ಧ ಕೃಷಿ ಮಾಡಿದರ ಕೃಷಿಯಲ್ಲಿ ನಂಬಿಕೆ ಇಟ್ಟಿರುವ ಯಾರಿಗೂ ನಷ್ಟ ಅನ್ನೂದ ಇಲ್ಲರೀ ಎನ್ನುತ್ತಾರೆ ರೈತ ಮಲ್ಲೇಶ ಗುಜನಾಳ.
*ಸಿ.ವೈ. ಮೆಣಶಿನಕಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.