ನೆರೆ ತಡೆಗೆ 1,500 ಕಿ.ಮೀ. ಕಾಲುವೆ ಅಗತ್ಯ


Team Udayavani, Jun 1, 2023, 12:59 PM IST

tdy-6

ಬೆಂಗಳೂರು: ಬೆಂಗಳೂರಿನ ಮಳೆ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಳ್ಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಈಗಿರುವ ಮಳೆ ನೀರು ಚರಂಡಿ ವ್ಯವಸ್ಥೆ ಏನೇನು ಸಾಲದು. ರಾಜ್ಯ ರಾಜಧಾನಿಯ ಪ್ರವಾಹ ನಿರ್ವಹಣೆ ಯಶ ಕಾಣಬೇಕಾದರೆ ಈಗಿರುವುದಕ್ಕಿಂತ ಶೇ.75ಕ್ಕಿಂತ ಹೆಚ್ಚು ಹೊಸ ಮಳೆ ನೀರು ಚರಂಡಿಗಳನ್ನು ನಿರ್ಮಿಸುವುದು ಅನಿವಾರ್ಯ ಎಂದು ನೈಟ್‌ ಫ್ರಾಂಕ್‌ ಇಂಡಿಯಾ ಅಧ್ಯಯನ ವರದಿ ನೀಡಿದೆ.

ಬುಧವಾರ ಈ ವರದಿಯನ್ನು ನೈಟ್‌ ಫ್ರಾಂಕ್‌ ಇಂಡಿಯಾ ಬಿಡುಗಡೆ ಮಾಡಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ 842 ಕಿ.ಮೀ. ಉದ್ದದ ಮಳೆ ನೀರು ಹೊತ್ತೂಯ್ಯುವ ಪ್ರಮುಖ ಮತ್ತು ಕಿರುಗಾಲುವೆಗಳಿವೆ. ಆದರೆ ಇನ್ನು 658 ಹೊಸ ಪ್ರಮುಖ ಮತ್ತು ಕಿರುಗಾಲುವೆಗಳನ್ನು ನಿರ್ಮಿಸಬೇಕು. ತನ್ಮೂಲಕ ನಗರ ಒಟ್ಟು 1,500 ಕಿ.ಮೀ. ಉದ್ದದ ಕಾಲುವೆಯನ್ನು ಪಡೆದರೆ ಪ್ರವಾಹದ ಆತಂಕದಿಂದ ಪಾರಾಗಬಹುದು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ನಗರದಲ್ಲಿ 2002ರಲ್ಲಿ ಶೇ. 37.4ರಷ್ಟು ಬಿಲ್ಟ್ ಅಪ್‌ ಪ್ರದೇಶವಿದ್ದರೆ 2020ರಲ್ಲಿ ಇದು ಶೇ. 93.3ಕ್ಕೆ ಏರಿದೆ. ಆದರೆ ಮಳೆ ಪ್ರವಾಹ ಕಾಲುವೆಗಳ ಗಾತ್ರ ಕಿರಿದಾಗುತ್ತ ಸಾಗಿದೆ. ಕೋರಮಂಗಲ ಕಣಿವೆಯಲ್ಲಿ 1900ರಲ್ಲಿ ಇದ್ದ 113.2 ಕಿ.ಮೀ. ಮಳೆಗಾಲುವೆ 2016-17ರಲ್ಲಿ 62.8 ಕಿ.ಮೀ.ಗೆ ವೃಷಭಾವತಿ ಕಣಿವೆಯಲ್ಲಿ 226.3 ಇದ್ದ ಮಳೆಗಾಲುವೆಯ ಉದ್ದ 111. 7 ಕಿ.ಮೀ.ಗೆ ಕುಸಿದಿದೆ. ಯೋಜನಾ ರಹಿತ ನಗರೀಕರಣದಿಂದಾಗಿ ಶೇ. 50ಕ್ಕಿಂತ ಹೆಚ್ಚು ಮಳೆಗಾಲುವೆಗಳು ಕ್ಷೀಣಿಸಿದ್ದು ಕೇವಲ 633 ಮಳೆಗಾಲುವೆ ಉಳಿದುಕೊಂಡಿದೆ ಎಂದು ವರದಿ ಗುರುತಿಸಿದೆ.

2800 ಕೋಟಿ ರೂ. ಬೇಕು: ಪ್ರಸ್ತುತ ಇರುವ ಮಳೆಗಾಲುವೆಗಳ ಅಭಿವೃದ್ಧಿ ಮತ್ತು ಹೊಸ ಮಳೆಗಾಲುವೆಗಳ ನಿರ್ಮಾಣಕ್ಕೆ 2,800 ಕೋಟಿ ರೂ. ಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯ ಸರ್ಕಾರ ತನ್ನ 2023-24ರ ಬಜೆಟ್‌ನಲ್ಲಿ 3000 ಕೋಟಿ ರೂ.ಗಳನ್ನು ವಿಶ್ವಬ್ಯಾಂಕ್‌ನ ನೆರವಿನಿಂದ ನೀಡುವುದಾಗಿ ಪ್ರಕಟಿಸಿದೆ. ಆದ್ದರಿಂದ ಯೋಜನೆಗೆ ನಿಧಿ ಸಂಚಯ ಸಮಸ್ಯೆ ಆಗಲಾರದು ಎಂದು ಅಭಿಪ್ರಾಯ ಪಡಲಾಗಿದೆ.

ವ್ಯಾಲ್ಯೂ ಕ್ಯಾಪ್ಚರ್‌ ಫಿನಾನ್ಸಿಂಗ್‌ ಮಾದರಿ: ಮಳೆಗಾಲುವೆಗಳನ್ನು ಅಭಿವೃದ್ಧಿ ಪಡಿಸಿದ ಸುತ್ತಲಿನ ಜಾಗಗಳ ಮೌಲ್ಯವೂ ಹೆಚ್ಚುತ್ತದೆ. ಸರ್ಕಾರದ ಅಭಿವೃದ್ಧಿ ಕ್ರಮಗಳ ಪರಿಣಾಮ ಖಾಸಗಿ ಭೂಮಿಗಳ ಮೌಲ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಅದ್ದರಿಂದ ಭೂ ಮೌಲ್ಯ ತೆರಿಗೆ, ಭೂ ಬಳಕೆ ಬದಲಾವಣೆ ಶುಲ್ಕ, ಅಭಿವೃದ್ಧಿ ಶುಲ್ಕ, ಬೆಟರ್‌ ಮೆಂಟ್‌ ಲೆವಿ, ಟಿಡಿಆರ್‌ಗಳನ್ನು ಹೆಚ್ಚಿಸುವ ಮೂಲಕ ಸರ್ಕಾರ ತನ್ನ ಹೊರೆ ಕಡಿಮೆ ಮಾಡಿಕೊಳ್ಳಬಹುದು ಎಂದು ವರದಿ ಸಲಹೆ ನೀಡಿದೆ.

ಗುಜರಾತ್‌ನ ಸಬರಮತಿ ನದಿ ಯೋಜನೆಯನ್ನು ಉದಾಹರಿಸಲಾಗಿದೆ. ಹಾಗೆಯೇ ಮುಂಬೈ ಮತ್ತು ಚೆನ್ನೈಯ ಹಣಕಾಸು ಮಾದರಿಗಳನ್ನು ಉಲ್ಲೇಖೀಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ನೈಟ್‌ ಫ್ರಾಂಕ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್‌, ಕನ್ಸಲ್ಟೆಂಟ್‌ ರಿಸರ್ಚ್‌ ಲೀಡ್‌ ಶಿಲ್ಪಾ ಶ್ರೀ ಮುಂತಾದವರು ಉಪಸ್ಥಿತರಿದ್ದರು.

ಸ್ಪಾಂಜ್‌ ಸಿಟಿ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪಡಿಸಿ : ಚೀನಾದಲ್ಲಿ ನಗರಗಳ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸ್ಪಾಂಜ್‌ ಸಿಟಿ ಪರಿಕಲ್ಪನೆ ಅನುಸರಿಸಲಾಗುತ್ತಿದೆ. ಇದರಿಂದ ಮಳೆ ನೀರಿನ ವೈಜ್ಞಾನಿಕ ಸಂಗ್ರಹ, ಮಳೆ ನೀರಿನ ಓಟಕ್ಕೆ ಕಡಿವಾಣ, ಕಾಂಕ್ರಿಟಿಕರಣ ಕಡಿಮೆ ಮಾಡಿ ಹಸಿರು ಪ್ರದೇಶಗಳ ಹೆಚ್ಚಳ, ಜೌಗು ಪ್ರದೇಶಗಳ ಅಭಿವೃದ್ಧಿ ಮಾಡುವ ಮೂಲಕ ಪ್ರವಾಹದ ಅಬ್ಬರವನ್ನು ಕಡಿಮೆ ಮಾಡಬಹುದು ಎಂದು ವರದಿ ಹೇಳಿದೆ.

ಮಳೆಗಾಲುವೆ ಮಾಸ್ಟರ್‌ ಪ್ಲ್ರಾನ್‌ ಮಾಡಿ: ಮಳೆಗಾಲುವೆಯ ದಕ್ಷ ನಿರ್ವಹಣೆ ಮತ್ತು ನಿಧಿಗೆ ಪೂರಕವಾದ ಮಳೆಗಾಲುವೆ ಮಾಸ್ಟರ್‌ ಪ್ಲ್ರಾನ್‌ ರೂಪಿಸಬೇಕು. ಮಳೆಗಾಲುವೆ ಸರಾಗವಾಗಿ ಹರಿದು ಹೋಗುವಂತೆ, ಪ್ರವಾಹ ಕಡಿಮೆ ಮಾಡುವ ರೀತಿ ಮತ್ತು ಮಳೆಗಾಲುವೆಗಳ ನಿರ್ವಹಣೆಗೆ ಅಗತ್ಯ ಹಣದ ಸಂಗ್ರಹದ ಬಗ್ಗೆ ಈ ಮಾಸ್ಟರ್‌ ಪ್ಲ್ರಾನ್‌ ಮಾಹಿತಿ ಹೊಂದಿರಬೇಕು.

ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ : ಜನಸಂಖ್ಯೆಯ ಹೆಚ್ಚಳದಿಂದ ನಗರದ ಭೂಬಳಕೆಯ ವಿಧಾನಗಳು ಬದಲಾಗಿದೆ. ತ್ವರಿತ ಮತ್ತು ಯೋಜನಾ ರಹಿತ ಅಭಿವೃದ್ಧಿ ನಗರದ ಪರಿಸರ ವ್ಯವಸ್ಥೆ ಅದರಲ್ಲೂ ಮಳೆ ನೀರು ಚರಂಡಿಗಳ ಮೇಲೆ ಭಾರಿ ಒತ್ತಡ ಸೃಷ್ಟಿಸಿದ್ದು ಭಾರಿ ಮಳೆಗೆ ನಗರದಲ್ಲಿ ಪ್ರವಾಹ ಸೃಷ್ಟಿಸುತ್ತದೆ. ಇದರಿಂದ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ ಆಗುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಮಳೆಗಾಲುವೆಗಳ ನಿರ್ಮಾಣ, ಅಭಿವೃದ್ಧಿ, ರಿ ಮಾಡೆಲಿಂಗ್‌, ನಿರ್ವಹಣೆ ಅತ್ಯಗತ್ಯ ಎಂದು ನೈಟ್‌ ಫ್ರಾಂಕ್‌ ವರದಿ ತಿಳಿಸಿದೆ.

ಬೆಂಗಳೂರಿನ ಮೂಲಸೌಕರ್ಯ ಗಳನ್ನು ಬಲಪಡಿಸುವ ಪ್ರಾಮುಖ್ಯತೆ ಯನ್ನು ವರದಿಯು ಒತ್ತಿ ಹೇಳಿದೆ. ಮಳೆನೀರು ನಿರ್ವಹಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಾಗ ಜನಸಂಖ್ಯೆಯ ಬೆಳವಣಿಗೆ, ನಗರೀಕರಣ ಮತ್ತು ಹವಾಮಾನ ಬದಲಾವಣೆಯನ್ನು ಗಮನಿಸಬೇಕು. – ಶಿಶಿರ್‌ ಬೈಜಾಲ್‌, ನೈಟ್‌ ಫ್ರಾಂಕ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.