ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ


Team Udayavani, Jun 1, 2023, 12:43 PM IST

ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ;  ತ್ಯಾಜ್ಯ ವಸ್ತು ಎಸೆಯಬೇಡಿ

ಆಲಮಟ್ಟಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಲಕ್ಷಾಂತರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಜನ ಜಾನುವಾರುಗಳ ಆಶ್ರಯವೇ ಈ ನದಿ. ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗಿ ಆಂಧ್ರದ ಹಂಸಲಾ ದೇವಿ ಎಂಬಲ್ಲಿ ಸಮುದ್ರ ಸೇರುತ್ತದೆ. ಈ ಬೃಹತ್‌ ನದಿಗೆ ಮಹಾರಾಷ್ಟ್ರದಲ್ಲಿ ಕೆಮಿಕಲ್‌ ನೀರು ಮಿಶ್ರಣ, ಕರ್ನಾಟಕದಲ್ಲಿಯೂ ನದಿ ಪಾತ್ರದಲ್ಲಿರುವ
ವಿವಿಧ ಕಾರ್ಖಾನೆಗಳ ಕಲ್ಮಷವೂ ನದಿಯಲ್ಲಿ ಸೇರುತ್ತಿವೆ.ಇದರಿಂದ ಜಲಚರಗಳ ಪ್ರಾಣಕ್ಕೆ ಕಂಟಕಪ್ರಾಯವಾಗಿ ಪರಿಣಮಿಸುತ್ತಿದೆ.

ಹೀಗೆಯೇ ಮುಂದುವರಿದರೆ ನಮ್ಮ ಗತಿ ಏನೂ ಅಂತ ಈಗ ಉತ್ತರ ಕರ್ನಾಟಕಕ್ಕೂ ಆತಂಕ ಶುರುವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಂಕಲಿ ಗ್ರಾಮದ ಬಳಿ ಹರಿದಿರುವ ಕೃಷ್ಣಾ ನದಿಯಲ್ಲಿ ಸಾಂಗ್ಲಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಹಾಗೂ ಸಾಂಗ್ಲಿ ನಗರದ ಕಲುಷಿತ ನೀರನ್ನ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿಯಲ್ಲಿರುವ ಜಲಚರಗಳು ಸಾವನ್ನಪ್ಪಿರುವ ಸಂಗತಿಗಳು ಇತ್ತೀಚೆಗೆ ಬಯಲಾಗಿವೆ. ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಸಾಂಗ್ಲಿ
ಜಿಲ್ಲೆಗಳಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ಅವುಗಳ ತ್ಯಾಜ್ಯ ನೀರನ್ನು ಉತ್ತರ ಕರ್ನಾಟಕದ ಜೀವನದಿ ಎಂದು ಕರೆಸಿಕೊಳ್ಳುವ ಕೃಷ್ಣೆಗೆ ಹರಿ ಬಿಡಲಾಗುತ್ತಿದೆ.

ಇದರ ನಿಯಂತ್ರಣ ಸಾಧ್ಯವಿಲ್ಲವೇ? ಸಾಂಗ್ಲಿಯ ಅಂಕಲಿಯಲ್ಲಿ ಈ ರೀತಿ ಮೀನುಗಳು ಸಾವನ್ನಪ್ಪಿದ್ದು ಮುಂದೆ ನೀರು
ಕರ್ನಾಟಕದತ್ತ ಹರಿದು ಬರುತ್ತದೆ. ಇದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ ಹಾಗೂ  ರಾಯಚೂರು ಜಿಲ್ಲೆಗಳಲ್ಲಿನ ಬಹುತೇಕ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಇದೇ ಕೃಷ್ಣೆಯ ನೀರನ್ನು ಅವಲಂಬಿಸಿದ್ದಾರೆ. ಇಂಥ ಕಲುಷಿತ ನೀರು ಸೇವಿಸಿ ಜನ ಜಾನುವಾರುಗಳಿಗೆ ತೊಂದರೆಯಾದರೆ ಯಾರು
ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಕೂಡಲೇ ಕರ್ನಾಟಕ ಸರ್ಕಾರವು ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು ಎನ್ನುತ್ತಾರೆ ನಾಗರಿಕರು. ಭಕ್ತರಿಂದ ತ್ಯಾಜ್ಯ: ಇನ್ನು ಕೃಷ್ಣಾ ನದಿ ದಡದಲ್ಲಿ ನದಿ ಪಾತ್ರದ ಉದ್ದಕ್ಕೂ ನೂರಾರು ದೇವಸ್ಥಾನಗಳಿವೆ.

ದೇವಸ್ಥಾನಕ್ಕೆ ಆಗಮಿಸುವ ಬಹುತೇಕ ಭಕ್ತರು ತಾವು ಕಟ್ಟಿಕೊಂಡ ಹರಕೆಯನ್ನು ತೀರಿಸಲು ಕೃಷ್ಣೆಯ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ವಾಡಿಕೆ. ಕೃಷ್ಣೆಯಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾವು ಧರಿಸಿದ್ದ ಉಡುಪನ್ನು ನದಿ ಲ್ಲಿಯೇ ಬಿಸಾಕುತ್ತಾರೆ. ಇಷ್ಟೇ ಅಲ್ಲದೇ ದೂರದಿಂದ ಪ್ರತಿ ಯುಗಾದಿ, ದೀಪಾವಳಿ ಸೇರಿದಂತೆ ವಿಶೇಷ ದಿನಗಳಂದು ವಿವಿಧ ಭಾಗಗಳಿಂದ ದೇವರುಗಳ ಪಲ್ಲಕ್ಕಿ, ಛತ್ರಿ, ಚಾಮರ ಹೀಗೆ ದೇವ ದೇವತೆಗಳ ಭಿನ್ನವಾಗಿರುವ
ಸಲಕರಣೆಗಳನ್ನೂ ಕೂಡ ನದಿಯಲ್ಲಿಯೇ ಬಿಸಾಕುತ್ತಾರೆ. ಇದರಿಂದ ಜಲಚರಗಳಿಗೆ ತೀವ್ರ ತೊಂದರೆಯಾಗಲಿದೆ. ಅಷ್ಟೇ ಅಲ್ಲದೇ
ಜಲಮಲೀನಕ್ಕೂ ಕಾರಣವಾಗುತ್ತದೆ. ಆದ್ದರಿಂದ ಪ್ರಜ್ಞಾವಂತರು ತ್ಯಾಜ್ಯ ವಸ್ತುಗಳನ್ನು ನದಿಯಲ್ಲಿ ಎಸೆಯಬಾರದು ಎನ್ನುತ್ತಾರೆ ಆಲಮಟ್ಟಿ ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ.

ಪ್ರತಿ ವರ್ಷವೂ ರಾಜ್ಯ ಸರ್ಕಾರಿ ನೌಕರರ ಸಂಘ ಯೋಜನಾ ಸಾಖೆ ಆಲಮಟ್ಟಿ ವತಿಯಿಂದ ಆಲಮಟ್ಟಿ ಶಾಸ್ತ್ರಿ ಸಾಗರದ ಹಿನ್ನೀರು ಪ್ರದೇಶವಾಗಿರುವ ಚಂದ್ರಮ್ಮ ದೇವಿ ದೇವಸ್ಥಾನದ ಬಳಿ ಸ್ವಚ್ಚತಕಾರ್ಯಕ್ರಮ ಆಯೋಜಿಸಿ ಆ ಪ್ರದೇಶವನ್ನು ಸ್ವತ್ಛ ಮಾಡಿ ಆಗಮಿಸುವ ಭಕ್ತರಿಗೆ ಪರಿಸರ ಮಾಲಿನ್ಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದೇವೆ.

ಸದಾಶಿವ ದಳವಾಯಿ 
ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘದ ಯೋಜನಾ ಶಾಖೆ ಆಲಮಟ್ಟಿ

ಜಿಲ್ಲೆಯ ಕೊನೆಯ ಗ್ರಾಮವಾಗಿರುವ ಯಲಗೂರಕ್ಕೆ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ನಿತ್ಯ ಭಕ್ತಾದಿಗಳು ಆಗಮಿಸಿ ಕೃಷ್ಣೆಯಲ್ಲಿ ಸ್ನಾನ ಮಾಡಿ ಯಲಗೂರೇಶನ (ಏಳೂರು ಹನುಮಪ್ಪನ) ದರ್ಶನಕ್ಕೆ ಬರುತ್ತಾರೆ. ಅವರು ಎಸೆದ ತ್ಯಾಜ್ಯಗಳು ನದಿ ಪಾಲಾಗದಿರಲಿ ದು ಸ್ಥಳೀಯ ಆಡಳಿತದಿಂದ ತೊಟ್ಟಿಗಳನ್ನು ಇರಿಸಲಾಗಿದೆ. ಭಕ್ತರು ತೊಟ್ಟಿಯಲ್ಲಿ ತಮ್ಮ ಬಟ್ಟೆಗಳನ್ನು ಅದರಲ್ಲಿಯೇ ಹಾಕುತ್ತಾರೆ.
ಶ್ಯಾಮ ಪಾತ್ರದ
ಅಧ್ಯಕ್ಷರು, ಪಿಕೆಪಿಎಸ್‌ ಬ್ಯಾಂಕ್‌ ಯಲಗೂರ

ಶಂಕರ ಜಲ್ಲಿ

 

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.