Goa ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸಬೇಕು: ಕಾಂಗ್ರೆಸ್ ಒತ್ತಾಯ
Team Udayavani, Jun 1, 2023, 6:03 PM IST
ಪಣಜಿ: ರಾಜಧಾನಿ ಪಣಜಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದ್ದು, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರವರು ಇಡೀ ಯೋಜನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಗೋವಾ ಕಾಂಗ್ರೆಸ್ ಮುಖಂಡ ಎಲ್ವಿಸ್ ಗೋಮ್ಸ್ ಒತ್ತಾಯಿಸಿದ್ದಾರೆ.
ಪಣಜಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮ ವಿಭಾಗದ ಅಧ್ಯಕ್ಷ ಅಮರನಾಥ ಪಣಜಿಕರ್, ಪ್ರಧಾನ ಕಾರ್ಯದರ್ಶಿ ವಿಜಯ್ ಭಿಕೆ, ಪಣಜಿ ಮಹಿಳಾ ಬಳಗದ ಅಧ್ಯಕ್ಷೆ ಲವಿನಿಯಾ ಡಿಕೋಸ್ತಾ ಉಪಸ್ಥಿತರಿದ್ದರು.
ಪಣಜಿ ಸ್ಮಾರ್ಟ ಸಿಟಿ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ಗೋಮ್ಸ್ ಹೇಳಿದರು. ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಧೈರ್ಯವನ್ನು ಬಿಜೆಪಿ ಸರ್ಕಾರ ತೋರಿಸಬೇಕು. ಕೇಂದ್ರ ಸಚಿವ ಪುರಿ ಅವರು ಸರ್ಕಾರದ ಮುಖವಾಣಿಯಾಗಿರುವ ಪ್ರೆಸ್ ಇನ್‍ಫರ್ಮೇಷನ್ ಬ್ಯೂರೋವನ್ನು ಬಳಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಅವರು ವಾಸ್ತವವಾಗಿ ಪಣಜಿಯ ಜನರನ್ನು ಭೇಟಿ ಮಾಡಲು ವಿಫಲರಾಗಿದ್ದಾರೆ ಮತ್ತು ಸ್ಮಾರ್ಟ್ ಸಿಟಿಯ ನಡೆಯುತ್ತಿರುವ ಕಳಪೆ ಕಾಮಗಾರಿಗಳಿಂದ ಜನತೆ ಹೇಗೆ ಬಳಲುತ್ತಿದ್ದಾರೆ ಎಂದು ಕೇಳಲು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಗರಾಭಿವೃದ್ಧಿ ಸಚಿವರು, ನಗರಾಭಿವೃದ್ಧಿ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ, ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ತಪ್ಪಿತಸ್ಥರು. ಅವರೇ ಪ್ರಮುಖ ಆರೋಪಿಗಳು. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸುವ ಧೈರ್ಯ ಬಿಜೆಪಿಗಿಲ್ಲ ಎಂದು ಆರೋಪಿಸಿದರು.
ಕಪ್ಪು ಬಾವುಟಗಳನ್ನು ಪ್ರದರ್ಶಿಸಲಾಗುವುದು
ಕಳಪೆ ಕಾಮಗಾರಿಯಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಗೊತ್ತಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯನ್ನು ಮಾಧ್ಯಮಗಳು ಬಯಲಿಗೆಳೆದಿವೆ. ಈ ಸಚಿವರನ್ನು ಸಂಪುಟದಿಂದ ತೆಗೆದುಹಾಕಬೇಕು. ಇನ್ನೊಮ್ಮೆ ಇಲ್ಲಿಗೆ ಬಂದರೆ ಕಪ್ಪು ಬಾವುಟ ತೋರಿಸುತ್ತೇವೆ ನಗರದಲ್ಲಿ ಡೇಂಜರ್ ಝೋನ್ ಗಳು ಎಲ್ಲಿವೆ? ಇದನ್ನು ತೋರಿಸಲು ನಾವು ಕಪ್ಪು ಬಾವುಟಗಳನ್ನು ನಿಮ್ಮೊಂದಿಗೆ ಒಯ್ಯುತ್ತೇವೆ ಎಂದು ಅಮರನಾಥ ಪಣಜಿಕರ್ ಹೇಳಿದರು.
ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತದೆ ಮತ್ತು ಸ್ಮಾರ್ಟ್ ಸಿಟಿ ಭ್ರಷ್ಟಾಚಾರದ ಬಗ್ಗೆ ಮೌನವಾಗಿರುವುದಿಲ್ಲ. ನಾವು ಮಾಡಿರುವ ಕೆಲವು ಆರೋಪಗಳು ಆಧಾರ ರಹಿತವಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ನಾವು ಕೇಂದ್ರ ಸಚಿವ ಪುರಿ ಅವರನ್ನು ನಗರದ ಮೂಲಕ ನಡೆಯಲು ಕೇಳಿದ್ದೆವು. ಆದರೆ ಹಾಗೆ ಮಾಡದೆ ದೆಹಲಿಗೆ ಓಡಿಹೋದರು ಎಂದು ಅಮರನಾಥ ಪಣಜಿಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.