ತೆರೆಗೆ ಬಂತು ಥ್ರಿಲ್ಲರ್ ‘ಯದಾ ಯದಾ ಹೀ’
Team Udayavani, Jun 2, 2023, 11:25 AM IST
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯಾಗಿ ನಟಿಸಿರುವ “ಯದಾ ಯದಾ ಹೀ’ ಚಿತ್ರ ಇಂದು ತೆರೆ ಕಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ಚಿತ್ರತಂಡಕ್ಕೆ ಸಿನಿಮಾ ಮೇಲೆ ವಿಶ್ವಾಸ ಮೂಡಿದೆ. ಈ ಚಿತ್ರದಲ್ಲಿ ದಿಗಂತ್ ಪ್ರಮುಖ ಪಾತ್ರ ಮಾಡಿದ್ದಾರೆ.
ಅಂದಹಾಗೆ, ಇದು ತೆಲುಗಿನ “ಎವರು’ ಚಿತ್ರದ ರೀಮೇಕ್ ಇದಾಗಿದ್ದು, ತೆಲುಗಿನಲ್ಲಿ 2 ಚಿತ್ರ ನಿರ್ದೇಶಿಸಿರುವ ಅಶೋಕ್ ತೇಜ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡಕ್ಕೆ ಎಂಟಿಕೊಟ್ಟಿದಾದರೆ. ಹರಿಪ್ರಿಯಾ, ದಿಗಂತ್ ಹಾಗೂ ವಸಿಷ್ಠಸಿಂಹ ಮೂರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ ತನಿಖೆಯನ್ನು ರೋಚಕವಾಗಿ ಹೇಳಲಾಗಿದೆ.
“ಎವರು ಸಿನಿಮಾ ನೋಡಿದಾಗ ನಮಗೆ ತುಂಬಾ ಖುಷಿಯಾಯಿತು. ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವಂತಹ ಸಿನಿಮಾ. ಈ ಸಿನಿಮಾವನ್ನು ಕನ್ನಡದಲ್ಲಿ ಯಾಕೆ ನಾವು ಮಾಡಬಾರದು ಎಂದು ಯೋಚಿಸಿ ನಿರ್ಮಾಪಕ ರಾಜೇಶ್ ಅಗರವಾಲ್ ಹಾಗೂ ಡಿ.ಜಯಪ್ರಕಾಶ್ ರಾವ್ ಅವರಲ್ಲಿ ಚರ್ಚಿಸಿ ದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಮುಂದೆ ನಾವು ದಿಗಂತ್ ಹಾಗೂ ಹರಿಪ್ರಿಯಾ ಅವರನ್ನು ಈ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡೆವು. ಅವರಿಬ್ಬರೂ “ಎವರು’ ಸಿನಿಮಾವನ್ನು ನೋಡಿದ್ದರಿಂದ ಅದರ ಕನ್ನಡ ಅವತರಣಿಕೆಯಲ್ಲಿ ನಟಿಸಲು ಒಪ್ಪಿದ್ದು, ಈಗ ಚಿತ್ರದ ಹಾಡು, ಟ್ರೇಲರ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎನ್ನುವುದು ನಿರ್ದೇಶಕ ಅಶೋಕ್ ಅವರ ಮಾತು.
ತೆಲುಗಿನಲ್ಲಿ ನಟಿ ರೆಜಿನಾ ನಿರ್ವಹಿಸಿದ್ದ ಪಾತ್ರವನ್ನು ಹರಿಪ್ರಿಯಾ ಹಾಗೂ ಅಡವಿಶೇಷ್ ಪಾತ್ರವನ್ನು ದಿಗಂತ್ ಮಾಡಿದ್ದಾರೆ. ಈ ಚಿತ್ರಕ್ಕೆ ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ರಾಜೇಶ್ ಅಗರವಾಲ್ ಬಂಡವಾಳ ಹೂಡಿದ್ದಾರೆ.
ಇಂಗ್ಲೀಷ್ ಭಾಷೆಯಲ್ಲಿ ದಿ ಇನ್ವಿಸಿಬಲ್ ಗೆಸ್ಟ್ ಹೆಸರಿನಲ್ಲಿ ತಯಾರಾಗಿದ್ದ ಈ ಚಿತ್ರ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಿತ್ತು, ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿ ಆಗಿದೆ. ಚರಣ್ ಪಕಳ ಅವರ ಸಂಗೀತ ನಿರ್ದೇಶನ, ಯೋಗಿ ಅವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.