![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Jun 2, 2023, 2:23 PM IST
ಮುಂಬೈ: ಕೆಲವೇ ದಿನಗಳ ಹಿಂದೆ ಐಪಿಎಲ್ ಕೂಟ ಮುಗಿದಿದ್ದು ಚೆನ್ನೈ ಸೂಪರ್ ಕಿಂಗ್ಸ್ ಕಪ್ ಗೆದ್ದಿದ್ದೂ ಆಗಿದೆ. ಆದರೆ, ಈ ಐಪಿಎಲ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿರುವ ಹಲವಾರು ಆಟಗಾರರು ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ತಂಡದಲ್ಲಿದ್ದಾರೆ. ಈ ಆಟಗಾರರಿಂದ ಟೆಸ್ಟ್‌ನಲ್ಲೂ ಅಂಥದ್ದೇ ಪ್ರದರ್ಶನ ಬರಬಹುದು ಎಂಬ ನಂಬಿಕೆ ಅಭಿಮಾನಿಗಳದ್ದಾಗಿದೆ.
ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್ ಉತ್ತಮವಾದ ಆಟ ಪ್ರದರ್ಶಿಸಿದ್ದು, ಇವರ ಕಡೆಯಿಂದ ಅಂಥದ್ದೇ ಆಟವನ್ನು ಆಸ್ಟ್ರೇಲಿಯ ವಿರುದ್ಧವೂ ನಿರೀಕ್ಷಿಸಲಾಗುತ್ತಿದೆ.
ಜೂ.7ರಂದು ಇಂಗ್ಲೆಂಡ್‌ನ ಓವಲ್ ಅಂಗಳದಲ್ಲಿ ಐದು ದಿನಗಳ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಭಾರತ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿರುವುದು ವಿಶೇಷ.
ಕಳೆದ ಬಾರಿ ನ್ಯೂಜಿಲೆಂಡ್ ಅನ್ನು ಫೈನಲ್ ನಲ್ಲಿ ಭಾರತ ಎದುರಿಸಿ, ರನ್ನರ್ ಅಪ್ ಆಗಿತ್ತು. ಈ ಬಾರಿ ಆಸ್ಟ್ರೇಲಿಯ ವಿರುದ್ಧ ಆಡುತ್ತಿದೆ. ಸಮಯವಿಲ್ಲದೇ ಇರುವುದರಿಂದ ಭಾರತ ಅಭ್ಯಾಸ ಪಂದ್ಯ ಆಡಿಲ್ಲ. ಆದರೂ, ಈಗಾಗಲೇ ತಂಡದ ಎಲ್ಲ ಸದಸ್ಯರೂ ಲಂಡನ್‌ಗೆ ತೆರಳಿದ್ದು, ಅಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳಕಾರಿಯಾಗಿ ಪೋಸ್ಟ್: ಬಿಜೆಪಿ ಕಾರ್ಯಕರ್ತ ವಶಕ್ಕೆ
143 ವರ್ಷಗಳ ಇತಿಹಾಸ ಹೊಂದಿರುವ ಓವಲ್ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಡೆಯುತ್ತಿದೆ. ಅಲ್ಲದೆ ಈ ಅಂಗಳದಲ್ಲಿ ಬೌಲರ್‌ಗಳಿಗೆ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ. ಹೀಗಾಗಿ, ಬೌಲರ್ ಗಳು ಉತ್ತಮವಾಗಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಹೇಳಿದ್ದಾರೆ.
ಇನ್ನು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು, ಬ್ಯಾಟಿಗರಿಗೆ ಅಭ್ಯಾಸ ಪಂದ್ಯ ಸಿಗದೇ ಇದ್ದರೂ, ಐಪಿಎಲ್‌ನಿಂದ ನೇರವಾಗಿ ಬಂದಿರುವುದು ನೆರವು ನೀಡಬಹುದು ಎಂದಿದ್ದಾರೆ.
ಭಾರತಕ್ಕಿದೆ ಸದೃಢ ಬ್ಯಾಟಿಂಗ್ ಪಡೆ: ಐಪಿಎಲ್ ನ ಲೆಕ್ಕಾಚಾರದಲ್ಲಿ ನೋಡುವುದಾದರೆ ಭಾರತ ಸದೃಢ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಗುಜರಾತ್ ಟೈಟನ್ಸ್ ಅನ್ನು ಪ್ರತಿನಿಧಿಸಿದ್ದ ಶುಭಮನ್ ಗಿಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. 16 ಪಂದ್ಯಗಳಿಂದ 890 ರನ್ ಬಾರಿಸಿರುವ ಅವರು 59.33ರ ಆವರೇಜ್ ಹೊಂದಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಕೂಡ ಉತ್ತಮ ಫಾರ್ಮ್ನಲ್ಲಿದ್ದು ಬ್ಯಾಟಿಂಗ್ ಬೆನ್ನೆಲುಬು ಆಗಬಹುದು. ಕೊಹ್ಲಿ ಕೂಡ 639 ರನ್ ಗಳಿಸಿದ್ದಾರೆ. ಕೆ.ಎಲ್.ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಅಜಿಂಕ್ಯ ರಹಾನೆ ಕೂಡ ಉತ್ತಮ ಲಯ ಕಂಡುಕೊಂಡಿದ್ದಾರೆ.
ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೆ, ಮೊಹಮ್ಮದ್ ಶಮಿ, ಸಿರಾಜ್ ಉತ್ತಮ ಲಯದಲ್ಲಿದ್ದಾರೆ. ಶಮಿ 28 ವಿಕೆಟ್ ಪಡೆದಿದ್ದರೆ, ಸಿರಾಜ್ 19 ವಿಕೆಟ್ ಪಡೆದಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜ ಕೂಡ 20 ವಿಕೆಟ್ ಪಡೆದು ಸಖತ್ತಾಗಿಯೇ ಮಿಂಚಿದ್ದಾರೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.