ಅಂಕವೆಂಬ ಮಾಯೆಯೊಳಗೆ…

Team Udayavani, Jun 4, 2023, 7:43 AM IST

exam

ಪರೀಕ್ಷೆ, ಅಂಕ, ಸ್ಪರ್ಧೆ ಬೇಡವೆಂದಲ್ಲ. ಆದರೆ ಪರೀಕ್ಷೆ, ಅಂಕ, ಫ‌ಲಿತಾಂಶ…ಏಕೆ ಬೇಕು? ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪರಸ್ಪರ ಹೋಲಿಸಿ ಹೆಚ್ಚು- ಕಮ್ಮಿ, ಶ್ರೇಷ್ಠ – ಕನಿಷ್ಠ, ಮೇಲು -ಕೀಳು ಎಂಬಿತ್ಯಾದಿ ಅಶೈಕ್ಷಣಿಕ ಮೌಲ್ಯಗಳನ್ನು ಪೋಷಿಸಲೇ? ಅಲ್ಲವೇ ಅಲ್ಲ. ಮತ್ಯಾಕೆ…?

ಶೈಕ್ಷಣಿಕವಾಗಿ ಯಾವುದೇ ತರಗತಿ ಯಿರಬಹುದು ಆಯಾ ಹಂತದಲ್ಲಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಗುರುತಿಸಿ, ವಿದ್ಯಾರ್ಥಿಗಳ ಕಲಿಕೆಯ ಸುಧಾರಣೆಗೆ ಕಾರ್ಯತಂತ್ರಗಳ ಪುನರ್‌ ನಿರೂಪಣೆಗಾಗಿ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪರೀಕ್ಷೆ, ಫ‌ಲಿತಾಂಶ ಬೇಡ ಎನ್ನಲಾಗದು.
ಪರೀಕ್ಷೆ ಎಂದರೆ ಕೇವಲ ಲಿಖೀತ ಪರೀಕ್ಷೆ… ವರ್ಷದ ಕೊನೆಯ ಪರೀಕ್ಷೆ ಎಂದಲ್ಲ(ಗುಣಮಟ್ಟದ ಪರೀಕ್ಷೆಗೆ ಹಲವು ವಿಧದ ಪರೀಕ್ಷೆಗಳಿವೆ). ಅಂಕಾಧಾರಿತ ಗಳಿಕೆಯನ್ನು ಫ‌ಲಿತಾಂಶವೆನ್ನುವುದು, ಅಂಕವೇ ಕಲಿಕೆಯ ನಿಜ ಮೌಲ್ಯ ಮಾಪನದ ಫ‌ಲ ಎಂದೆಲ್ಲ ವಿಜೃಂಭಿಸುವುದು, ಅಂಕಾಧಾರಿತವಾಗಿ ಪರಸ್ಪರ ಹೋಲಿಸಿ ಕೊಳ್ಳುವುದು, ಅಂಕವನ್ನೇ ಗುಣಮಟ್ಟವೆಂದು ಮಾನಿಸುವುದು ಮತ್ತು ಸಾಧನೆಯೆಂದು ಸಾರ್ವಜನಿಕವಾಗಿ ಮೆರೆಸುವುದು, ಸ್ವತಃ ಶಿಕ್ಷಣ ಸಂಸ್ಥೆಗಳು ಬಿಂಬಿಸಿಕೂಳ್ಳಲು ಸ್ಪರ್ಧೆಗಿಳಿದಂತೆ ಓಟಕ್ಕಿಳಿ ಯುವುದು… ಮಿಗಿಲಾಗಿ ಸರಕಾರದ

ವ್ಯವಸ್ಥೆಯೇ ಫ‌ಲಿತಾಂಶವನ್ನು ಅಂಕಾ ಧಾರಿತವಾಗಿ ವರ್ಗೀಕರಿಸಿ ಫ‌ಸ್ಟ್‌ , ಸೆಕೆಂಡ್‌, ಹೈಯೆಸ್ಟ್‌ ಲೋವೆಸ್ಟ್‌…ಎಂದೆಲ್ಲ ಬಿತ್ತರಿ ಸುವುದು, ಪ್ರಚಾರ ಮಾಡುವುದು ಅತ್ಯಂತ ಅವೈ ಜ್ಞಾನಿಕ, ಅಮಾನ ವೀಯ, ಅಪ್ರಸ್ತುತ. ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳು ಅವರವರ ನೆಲೆಯಲ್ಲಿ, ಅವರವರ ಫ‌ಲಿತಾಂಶದ ಸಾಧನೆಯನ್ನು ವಿಜೃಂಭಿಸಲಿ.
ಪ್ರಸ್ತುತ ಎಸೆಸೆಲ್ಸಿ ಬೋರ್ಡ್‌, ಪಿ ಯು ಬೋರ್ಡ್‌ ನೊಂದಿಗೆ ವಿಲೀನಗೊಂಡಿದೆ. ಆದರೆ ಎಸೆಸೆಲ್ಸಿಯಲ್ಲಿ ಹಿಂದಿನಂತೆ ಬೋರ್ಡ್‌ ಪರೀಕ್ಷೆಯನ್ನು ಉಳಿಸಿಕೊಳ್ಳಲಾಗಿದೆ. ಉಳಿಸಿ ಕೊಂಡಿರುವ ಬಗ್ಗೆ ಆಕ್ಷೇಪಗಳಿಲ್ಲ. ಒತ್ತಾಯ ವೇನೆಂದರೆ ಪರೀಕ್ಷಾ ವ್ಯವಸ್ಥೆ ಮತ್ತು ಫ‌ಲಿತಾಂಶ ಘೋಷಿಸುವ ವಿಧಾನದಲ್ಲಿ ಸುಧಾರಣೆ ಬದ ಲಾವಣೆ ತರಬೇಕೆಂಬುದು.

ಏಕೆಂದರೆ ಸದ್ಯದ ಶೈಕ್ಷಣಿಕ ವ್ಯವಸ್ಥೆ ಯು ಪರೀಕ್ಷೆ ಮತ್ತು ಫ‌ಲಿತಾಂಶ ವ್ಯವಸ್ಥೆಯನ್ನೇ ಕೇಂದ್ರೀಕರಿಸಿ ಒಟ್ಟು ಶೈಕ್ಷಣಿಕ ವರ್ಷ ಅಂಕಕ್ಕೆ ಸೀಮಿತವಾಗಿದ್ದು, ಅಂತಿಮ ಪರೀಕ್ಷೆಯ ಮೂಲಕ ಪಡೆಯುವ ಅಂಕವನ್ನು ಗುಣಮಟ್ಟದ ಕಲಿಕೆಗೆ ಸಮೀಕರಿಸಿರುವುದು. ಈ ಕ್ರಮದಿಂದಾಗಿ ಶಿಕ್ಷಣ ಸಂಸ್ಥೆಗಳು ಇಡೀ ಶೈಕ್ಷಣಿಕ ವರ್ಷ ಕಲಿಕೆಗೆ, ಕಲಿಕಾ ಪ್ರಕ್ರಿಯೆಗೆ ಗಮನಕೊಡಲಾಗದೆ ಕೇವಲ ಅಂಕಕ್ಕಾಗಿಯೇ ಕೇಂದ್ರೀಕರಿಸುತ್ತಿವೆ. ಶಿಕ್ಷಣ ಅಂಕವೆಂಬ ಮಾಯೆ ಯೂಳಗೆ ಮಾಯವಾಗಿದೆ. ಶಾಲೆಗಳೆಲ್ಲ…ಕುಸ್ತಿ ಆಖಾಡದಂತಾಗಿದೆ.

ಈಗೇನು ಮಾಡುವುದು…? ಸದ್ಯದ ಅಂಕಾಧಾರಿತ ಪಾಸು – ಫೈಲು ವಿಧಾನವನ್ನು ಕೈಬಿಟ್ಟು (ಫೈಲಿಲ್ಲದ) ಗ್ರೇಡ್‌ ಆಧಾರಿತ ಫ‌ಲಿತಾಂಶ ನೀಡುವುದು. ಎರಡನೆಯದಾಗಿ ಗುಣಮಟ್ಟದ ಫ‌ಲಿತಾಂಶಕ್ಕಾಗಿ ಗುಣಮಟ್ಟದ ಬೋಧನೆ ಮತ್ತು ಕಲಿಕಾ ವ್ಯವಸ್ಥೆಯ ಬಗ್ಗೆ(ಕೆಳ ತರಗತಿಯಿಂದಲೆ) ಆದ್ಯತೆ ಹಾಗೂ ಗಮನಹರಿಸುವುದು. ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಎನ್ನುವುದು ಗುಣ ಮಟ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲ. ಅದು ಕಲಿಕಾ ಸುಧಾರಣೆಯ ಭಾಗವೂ ಅಲ್ಲ. ಹಾಗಾಗಿ ಶೈಕ್ಷಣಿಕವಾಗಿ ಆದ್ಯತೆ ಯಾವುದಕ್ಕೆ ಕೊಡಬೇಕೋ ಅದಕ್ಕೆ ಕೊಡದೇ ಹೋದರೆ ಭವಿಷ್ಯವಿಲ್ಲದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣಕ್ಕೇ ಭವಿಷ್ಯವಿಲ್ಲ ಎಂಬ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ.

ರಾಮಕೃಷ್ಣ ಭಟ್‌ ಚೊಕ್ಕಾಡಿ, ಬೆಳಾಲು

ಟಾಪ್ ನ್ಯೂಸ್

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.