ಕಾರ ಹುಣ್ಣಿಮೆ ನಿಮಿತ್ತ ಸಂಭ್ರಮದ `ಕರಿ’ ಹರಿಯುವ ಕಾರ್ಯಕ್ರಮ
ಸಿದ್ದನಗೌಡ ಪಾಟೀಲರ ಎತ್ತಿಗೆ ಮೊದಲ ಸ್ಥಾನ
Team Udayavani, Jun 4, 2023, 7:31 PM IST
ರಬಕವಿ-ಬನಹಟ್ಟಿ : ಕಾರ ಹುಣ್ಣಿಮೆಯ ಪ್ರಯುಕ್ತ ನಗರದಲ್ಲಿ ಭಾನುವಾರ ಸಂಜೆ ಕರಿ ಹರಿಯುವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನ ಈ ಗ್ರಾಮೀಣ ಆಚರಣೆಯನ್ನು ನೋಡಲು ಆಗಮಿಸಿದ್ದರು.
ಗಾಂಧಿ ವೃತ್ತದ ಹತ್ತಿರ ಊರಿನ ಗೌಡರಾದ ಸಿದ್ದನಗೌಡ ಪಾಟೀಲ ಎತ್ತುಗಳಿಗೆ ಪೂಜೆ ಸಲ್ಲಿಸಿ ಎತ್ತುಗಳ ಓಟಕ್ಕೆ ಚಾಲನೆ ನೀಡಿದರು. ಒಟ್ಟು ನಾಲ್ಕು ಎತ್ತುಗಳು ಓಟದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ಸಿದ್ದನಗೌಡ ಪಾಟೀಲ ಎತ್ತು ಮೊದಲ ಸ್ಥಾನ ಪಡೆಯಿತು. ಎರಡನೇ ಸ್ಥಾನವನ್ನು ರಾಜುಗೌಡ ಪಾಟೀಲ ಹಾಗೂ ಮೂರನೇಯ ಸ್ಥಾನವನ್ನು ಬಸಪ್ಪ ದೇಸಾರ ಎತ್ತು, ನಾಲ್ಕನೇ ಸ್ಥಾನವನ್ನು ಗುರು ತೇಲಿ ಎತ್ತು ಪಡೆದುಕೊಂಡವು.
ಎತ್ತುಗಳು ವೇಗದಲ್ಲಿ ಕೊನೆಯವರೆಗೂ ಭಾರಿ ಪೈಪೋಟಿ ನಡೆಸುವ ಮೂಲಕ ನೋಡುಗರಿಗೆ ಅತ್ಯಂತ ಕುತೂಹಲ ಮೂಡಿಸಿದವು. ಕರಿ ಹರಿಯುವ ಕಾರ್ಯಕ್ರಮದ ನಂತರ ಹನುಮಾನ ದೇವಸ್ಥಾನದಲ್ಲಿ ಮಾಳಿಂಗರಾಯ ಪೂಜಾರಿಯಿಂದ ಬಿತ್ತನೆಗಾಗಿ ರೈತರಿಗೆ ಬೀಜ ಕೊಡುವ ಕಾರ್ಯಕ್ರಮ ನಡೆಯಿತು. ಇಲ್ಲಿ ಕೊಡುವ ಬೀಜಗಳನ್ನು ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡುವ ಕಾಳುಗಳಲ್ಲಿ ಕೂಡಿಸಿ ಬಿತ್ತನೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬ ನಂಬಿಕೆ ಇದೆ.
ಇದೇ ಸಂದರ್ಭದಲ್ಲಿ ಊರಿನ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಶ್ರೀಶೈಲ ಉಳ್ಳಾಗಡ್ಡಿ, ಮಲ್ಲಪ್ಪ ಜನವಾಡ, ಮಲ್ಲಪ್ಪ ತುಂಗಳ, ಪ್ರಶಾಂತ ಕೊಳಕಿ, ಪಂಡಿತಪ್ಪ ಪಟ್ಟಣ, ಮಹಾಶಾಂತ ಶೆಟ್ಟಿ, ಶ್ರೀಶೈಲ ಧಬಾಡಿ, ದಾನಪ್ಪ ಹುಲಜತ್ತಿ, ಭೀಮಶಿ ಪಾಟೀಲ, ರಮೇಶ ಮಹಿಷವಾಡಗಿ, ಬಸವರಾಜ ಜಾಡಗೌಡ, ಚೆನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಗಿರಮಲ್ಲಪ್ಪ ಹೂಗಾರ, ಡಾ. ಸದಾನಂದ ಬಿಳ್ಳೂರ, ರೇವಣಪ್ಪ ಶಿವಸಿಂಪಿ, ಭೀಮಸಿ ಆದಗೊಂಡ, ಈಶ್ವರ ಪಾಟೀಲ, ಮಲಕಪ್ಪ ಪಾಟೀಲ ರೈತರು ಮತ್ತು ಗೌಡರ ದೈವ ಮಂಡಳ, ಮಂಗಳವಾರ ಪೇಟೆ ದೈವ ಮಂಡಳ ಹಾಗೂ ಸೋಮವಾರ ಪೇಟೆ ಸಮಸ್ತ ದೈವ ಮಂಡಳದ ಹಿರಿಯರು, ಸುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.