Daily Horoscope:ಅನಿರೀಕ್ಷಿತ ಧನಾಗಮನ, ದೂರ ಪ್ರಯಾಣ,ವರ್ಚಸ್ಸು ವೃದ್ಧಿ
Team Udayavani, Jun 7, 2023, 7:02 AM IST
ಮೇಷ: ಅವಿವಾಹಿತರಿಗೆ ವಿವಾಹ ಯೋಗ. ಚರ್ಚೆಗೆ ಆಸ್ಪದ ನೀಡದಿರಿ. ಸಾಂಸಾರಿಕ ವಾಗಿ ನೆಮ್ಮದಿಯ ದಿನ. ಮನೋರಂಜನೆ ಗಾಗಿ ಪ್ರಯಾಣ, ಧನವ್ಯಯ. ಗೃಹದಲ್ಲಿ ಸಂಭ್ರಮದ ವಾತಾವರಣ. ದೂರದ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ಪರರ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಾತಿನಲ್ಲಿ ಸ್ಪಷ್ಟತೆ ತೋರಿ ಬರುವುದು. ಅನಿರೀಕ್ಷಿತ ಧನಾಗಮನ. ದೂರ ಪ್ರಯಾಣ. ವರ್ಚಸ್ಸು ವೃದ್ಧಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ. ಹಿರಿಯರ ಮಾತಿನಲ್ಲಿ ಗೌರವವಿರಲಿ.
ಮಿಥುನ: ವಿದ್ಯೆ, ಜ್ಞಾನ ಪ್ರದರ್ಶನದಿಂದ ಗೌರವ ವೃದ್ಧಿ. ಜನಮನ್ನಣೆ. ನಿರೀಕ್ಷಿತ ಧನ ಸಂಚಯನ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಮಿತ್ರರಿಂದ ಸಹಾಯ. ನೆಮ್ಮದಿ ಲಭಿಸೀತು. ಅನ್ಯರೊಡನೆ ವ್ಯವಹರಿಸುವಾಗ ಜಾಗ್ರತೆ ವಹಿಸಿ.
ಕರ್ಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಗತ್ಯ ವಿಚಾರಗಳಿಗೆ ಆಸ್ಪದ ನೀಡದಿರಿ. ಪರ ಊರಿನ ವ್ಯವಹಾರದಲ್ಲಿ ಧನ ಸಂಪತ್ತು ವೃದ್ಧಿ. ಬಂಧುಗಳಿಂದ ತಾಯಿ ಸಮಾನರಿಂದ ಉತ್ತಮ ಮಾರ್ಗದರ್ಶನ. ಮಕ್ಕಳಿಂದ ಸಂತೋಷ.
ಸಿಂಹ: ಪಾಲುಗಾರಿಕಾ ವಿಚಾರಗಳಲ್ಲಿ ಲಾಭ. ಪರಸ್ಪರ ಸಹಕಾರ. ಉತ್ತಮ ಧನ ವೃದ್ಧಿ. ಜವಾಬ್ದಾರಿಯುತ ಮಾತುಗಳಿಂದ ಜನಮನ್ನಣೆ ಲಭಿಸೀತು. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವುದು. ದೇವತಾ ಸ್ಥಳಗಳ ಸಂದರ್ಶನ.
ಕನ್ಯಾ: ಭೂಮ್ಯಾದಿ,ಆಸ್ತಿ, ಗೃಹ, ವಾಹನಾದಿ ವಿಚಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳ ವಿಚಾರದಲ್ಲಿ ಚಿಂತೆ ಕಾಡೀತು.
ತುಲಾ: ಧಾರ್ಮಿಕ ಕಾರ್ಯಗಳ ನೇತೃತ್ವ. ಉತ್ತಮ ಆರೋಗ್ಯ. ಸದಾ ಸಂಚಾರಶೀಲತೆ. ಬಹುಜನರ ಸಂಪರ್ಕ. ದೂರದ ವ್ಯವಹಾರದಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ವಿದ್ಯಾರ್ಜನೆಯಲ್ಲಿ ದ್ವಂದ್ವ ನೀತಿ ಸಲ್ಲದು. ಹಲವು ವಿಧದಲ್ಲಿ ಧನಲಾಭ.
ವೃಶ್ಚಿಕ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಮಾತಾಪಿತೃಗಳಿಂದಲೂ ಹಿರಿಯರಿಂದಲೂ ಸುಖ ಸಿದ್ಧಿ. ದಂಪತಿ ಗಳು ಚರ್ಚೆಗೆ ಅವಕಾಶ ನೀಡದಿರಿ. ಸು#ಟವಾದ ವಿದ್ಯೆ ಸ್ಪಷ್ಟತೆಯಿಂದ ಕೂಡಿದ ಜ್ಞಾನ ಸಂಪಾದನೆ.
ಧನು: ದೈಹಿಕವಾಗಿಯೂ ಮಾನಸಿಕವಾಗಿಯೂ ಸುದೃಢ ಆರೋಗ್ಯ. ಉತ್ಸಾಹಶೀಲತೆ. ಭೂ, ಆಸ್ತಿ ವಿಚಾರದಲ್ಲಿ ಧನ ಲಾಭ. ಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ಆರ್ಥಿಕ ವಿಚಾರದ ಬಗ್ಗೆ ಜ್ಞಾನಾರ್ಜನೆಗೆ ಆಸಕ್ತಿ. ಉತ್ತಮ ವಾಕ್ಚತುರತೆ.
ಮಕರ: ದೇವತಾ ಕಾರ್ಯಗಳ ನೇತೃತ್ವ. ಅಧ್ಯಯನದಲ್ಲಿ ಆಸಕ್ತಿ. ಜವಾಬ್ದಾರಿಯುತ ಕೆಲಸಕಾರ್ಯಗಳಿಂದ ಧನಾಗಮ. ಉತ್ತಮ ವಾಕ್ಚತುರತೆ. ಸರ್ವಜನರ ಮಾನ್ಯತೆ. ಗುರುಹಿರಿಯರಿಂದ ಸಹಾಯ. ಆಡಳಿತಾತ್ಮಕ ನಾಯಕತ್ವ ಗುಣ ವೃದ್ಧಿ.
ಕುಂಭ: ಸುದೃಢ ಆರೋಗ್ಯ. ಬುದ್ಧಿವಂತಿಕೆ ವೃದ್ಧಿ. ಆರ್ಥಿಕ ಸಹಾಯ ಮಾಡುವಾಗ ಎಚ್ಚರ ವಹಿಸುವುದರಿಂದ ಅನಾಹುತ ತಪ್ಪೀತು. ದೀರ್ಘ ಪ್ರಯಾಣ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ದೇವತಾ ಜ್ಞಾನ ಸಂಪಾದನೆಯಲ್ಲಿ ತಲ್ಲೀನತೆ.
ಮೀನ: ಆರೋಗ್ಯದ ಕಡೆ ಗಮನಹರಿಸಿ. ಬಂಧುಮಿತ್ರರ ಭೇಟಿಯಿಂದ ಸಂತೋಷ. ಸರಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಗಮನಹರಿಸಿ. ಗುರುಹಿರಿಯರೊಡನೆ ಸಂಯಮದಿಂದ ವ್ಯವಹರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.