CBI ತನಿಖೆ ಆರಂಭ: ರೈಲು ದುರಂತ ಸ್ಥಳಕ್ಕೆ ಭೇಟಿ, ಪ್ರಕರಣ ದಾಖಲಿಸಿಕೊಂಡ ತಂಡ


Team Udayavani, Jun 7, 2023, 7:33 AM IST

train tragedy

ಹೊಸದಿಲ್ಲಿ: ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರೈಲು ದುರಂತದ ತನಿಖೆಯನ್ನು ಮಂಗಳವಾರ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ವಹಿಸಿಕೊಂಡಿದೆ. ಮುಂಜಾನೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಸಿಬಿಐ ತಂಡ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ರೈಲ್ವೇಯ ವಿದ್ಯುನ್ಮಾನ ಇಂಟರ್‌ಲಾಕಿಂಗ್‌ ವ್ಯವಸ್ಥೆಯನ್ನು ತಿರುಚಲಾಗಿತ್ತೇ, ಘಟನೆಯ ಹಿಂದೆ ವಿಧ್ವಂಸಕ ಶಕ್ತಿಗಳ ಕೈವಾಡವಿತ್ತೇ ಎಂಬುದು ಸಿಬಿಐ ತನಿಖೆಯಿಂದ ಸ್ಪಷ್ಟವಾಗಲಿದೆ.

ಒಳಗಿನವರ ಕೈವಾಡ?: ಭಾರತೀಯ ರೈಲ್ವೇಯ ರಿಲೇ ರೂಂನಲ್ಲಿ ಡಬಲ್‌ ಲಾಕಿಂಗ್‌ ವ್ಯವಸ್ಥೆಯಿದೆ. ಅಂದರೆ ಈ ಕೊಠಡಿಗೆ ಎರಡು ಕೀಲಿ ಕೈಗಳಿರುತ್ತವೆ. ಒಂದು ಕೀಲಿಕೈ ನಿಲ್ದಾಣದ ಉಸ್ತುವಾರಿಯ ಬಳಿಯಿದ್ದರೆ, ಮತ್ತೂಂದು ಸಿಗ್ನಲಿಂಗ್‌ ಸಿಬಂದಿಯ ಕೈಯಲ್ಲಿರುತ್ತದೆ. ಹೀಗಾಗಿ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವ್ಯವಸ್ಥೆಯ ಸಮೀಪಕ್ಕೆ ಸಾರ್ವಜನಿಕರು ಬರಲು ಸಾಧ್ಯವೇ ಇಲ್ಲ. ಹೀಗಾಗಿ ಈ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದರೂ, ಅದನ್ನು ಈ ಕೊಠಡಿಯೊಳಗೆ ಬರಲು ಸಾಧ್ಯವಾಗುವವರು ಅಂದರೆ ರೈಲ್ವೇಯ ಒಳಗಿನವರೇ ಮಾಡಿರುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಒಂದೆಡೆ ನೋವು, ಮತ್ತೂಂದೆಡೆ ಪವಾಡ!: ಬಹನಾಗದಲ್ಲಿ ರೈಲುಗಳ ಸಂಚಾರ ಪುನಾರಂಭಗೊಂಡಿದೆ. ಆದರೆ ಆಸ್ಪತ್ರೆಗಳು, ಶವಾಗಾರಗಳಲ್ಲಿನ ಆರ್ತನಾದ ಮಾತ್ರ ಇನ್ನೂ ನಿಂತಿಲ್ಲ. ಕೆಲವರಿಗೆ ತಮ್ಮವರು ಎಲ್ಲಿದ್ದಾರೆಂದೇ ಗೊತ್ತಿಲ್ಲ, ಮೃತದೇಹವೂ ಸಿಕ್ಕಿಲ್ಲ. ಅಂಥವರು ಶವಾಗಾರಕ್ಕೊಮ್ಮೆ, ಆಸ್ಪತ್ರೆಗೊಮ್ಮೆ, ಜಿಲ್ಲಾಧಿಕಾರಿಗಳ ಕಚೇರಿಗೊಮ್ಮೆ ಹತಾಶರಾಗಿ ಅಲೆದಾಡುತ್ತಿದ್ದಾರೆ. ಮೊಹಮ್ಮದ್‌ ಸರ್ಫರಾಜ್‌ ಎಂಬವರು ದುರಂತದಲ್ಲಿ ಮಡಿದ ತಮ್ಮ ಪತ್ನಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಶವಾಗಾರಕ್ಕೆ ಮತ್ತೆ ಧಾವಿಸಿದ್ದಾರೆ. 150 ಮೃತದೇಹಗಳ ಪೈಕಿ ಪತ್ನಿಯ ಮೃತದೇಹವನ್ನು ಹುಡುಕಿದ್ದ ಸರ್ಫರಾಜ್‌ ಗೆ ತಮ್ಮ ಪುತ್ರಿಯ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಕೆಲವು ಮೃತದೇಹಗಳನ್ನು ಬೇರೆಡೆಗೆ ಸಾಗಿಸಿರುವ ಕಾರಣ ಅಲ್ಲಾದರೂ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಸರ್ಫರಾಜ್‌ . ಇನ್ನು ಹೇಲಾರಾಂ ಮಲಿಕ್‌ ಅವರ 23 ವರ್ಷದ ಪುತ್ರ ಅಂದು ಹೇಗೋ ಬೋಗಿಯಿಂದ ಹಾರಿ ತಪ್ಪಿಸಿಕೊಂಡು ಹಳಿ ಮೇಲೆ ಬಿದ್ದಿದ್ದರು. ಅವರು ಸತ್ತಿದ್ದಾರೆಂದು ಭಾವಿಸಿ ಇತರೆ ಶವಗಳೊಂದಿಗೆ ಅವರನ್ನೂ ಟ್ರಕ್‌ಗೆ ಹಾಕಲಾಗಿತ್ತು. ಅನಂತರದಲ್ಲಿ ಅವರಿಗೆ ಪ್ರಜ್ಞೆ ಬಂದಿದ್ದು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವಾಡವೆಂಬಂತೆ ನನ್ನ ಮಗ ಬದುಕುಳಿದ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಹೇಲಾರಾಂ.

ಟಿಎಂಸಿ ವಿರುದ್ಧ ಆರೋಪ: ಈ ನಡುವೆ ರೈಲು ದುರಂತದ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಟಿಎಂಸಿಯವರು ಪೊಲೀಸರೊಂದಿಗೆ ಸೇರಿ ರೈಲ್ವೇ ಅಧಿಕಾರಿಗಳ ಫೋನ್‌ ಕದ್ದಾಲಿಕೆ ಮಾಡುತ್ತಿದ್ದಾರೆ. ಪ್ರಕರಣವನ್ನು  ಸಿಬಿಐಗೆ ವಹಿಸಿದೊಡನೆ ಟಿಎಂಸಿಗೆ ಭಯ ಶುರುವಾಗಿದೆ ಎಂದು ಪಶ್ಚಿಮ ಬಂಗಾಲ ವಿಪಕ್ಷಗಳ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ವಿದ್ಯುದಾಘಾತದಿಂದ 40 ಸಾವು: ಕಳೆದ ಶುಕ್ರವಾರ ನಡೆದ  ರೈಲ್ವೇದುರಂತದ ವೇಳೆ ವಿದ್ಯುದಾಘಾ ತದಿಂದಲೇ 40 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಅಪಘಾತ ನಡೆದ ವೇಳೆ ಮೇಲಿನ ವಿದ್ಯುತ್‌ ಕೇಬಲ್‌ಗ‌ಳೂ ಕತ್ತರಿಸಿ ಕೋಚ್‌ಗಳ ಮೇಲೆ ಬಿದ್ದಿದ್ದವು. ಅವೂ ಸಾವಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗಿದೆ.

ಭ್ರಾಂತಿ, ಕಿರಿಕಿರಿ: ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಎನ್‌ಡಿಆರ್‌ಎಫ್ ಸಿಬಂದಿ ಸ್ಥಿತಿ ವಿಚಿತ್ರವಾಗಿದೆ. ಒಬ್ಬ ಸಿಬಂದಿಗೆ ನೀರು ನೋಡಿದಾಗೆಲ್ಲ ರಕ್ತವನ್ನೇ ನೋಡಿದಂತಾಗುತ್ತಿದೆಯಂತೆ. ಇನ್ನೊಬ್ಬ ಸಿಬಂದಿಗೆ ಕಾರ್ಯಾಚರಣೆಯ ತೀವ್ರತೆಯ ಪರಿಣಾಮ ಹಸಿವಾ ಗುವುದೇ ನಿಂತುಹೋಗಿದೆಯಂತೆ… ಹೀಗೆಂದು ಎನ್‌ಡಿಆರ್‌ಎಫ್ ಅಧಿಕಾರಿಗಳೇ ತಿಳಿಸಿದ್ದಾರೆ.

100 ಮೃತದೇಹಗಳ ಗುರುತೇ ಸಿಕ್ಕಿಲ್ಲ!

ಘಟನೆ ನಡೆದು 80 ಗಂಟೆಗಳು ಕಳೆದರೂ ಇನ್ನೂ 100ರಷ್ಟು ಮೃತದೇಹಗಳ ಗುರುತು ಸಿಕ್ಕಿಲ್ಲ. ತೀವ್ರ ಗಾಯಗಳಾಗಿರುವ ಕಾರಣ ಶವಗಳು ಕೊಳೆಯಲಾರಂಭಿಸಿವೆ. ಅವುಗಳನ್ನು ಕೆಡದಂತೆ ಸಂರಕ್ಷಿಸಿಡಲಾಗುತ್ತಿದೆಯಾದರೂ (ಎಂಬಾಮ್‌), ಗಾಯಗೊಂಡಿರುವ ದೇಹಗಳನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಮೃತಪಟ್ಟ 12 ಗಂಟೆಗಳ ಒಳಗಾಗಿ ಸಂರಕ್ಷಣೆ ಪ್ರಕ್ರಿಯೆ ನಡೆಸಿದರೆ ಮಾತ್ರ ಹಲವು ವರ್ಷಗಳ ಕಾಲ ದೇಹವನ್ನು ಕೆಡದಂತೆ ಸಂರಕ್ಷಿಸಿಡಬಹುದು. ಆದರೆ ಇಲ್ಲಿ ಹಾಗೆ ಮಾಡುವುದು ಅಸಾಧ್ಯ ಎನ್ನುತ್ತಿದ್ದಾರೆ ಏಮ್ಸ್‌ ವೈದ್ಯರು..

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.