Singapore Open Badminton: ಸಿಂಧು, ಸೈನಾಗೆ ಸೋಲು
Team Udayavani, Jun 7, 2023, 7:45 AM IST
ಸಿಂಗಾಪುರ: ಸಿಂಗಾಪುರದಲ್ಲಾದರೂ ಪಿ.ವಿ. ಸಿಂಧು ಸಂಕಟ ಕೊನೆಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಮಂಗಳವಾರ ಮೊದಲ್ಗೊಂಡ “ಸಿಂಗಾಪುರ್ ಓಪನ್ ಸೂಪರ್ 750′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದರು. ಸೈನಾ ನೆಹ್ವಾಲ್, ಎಚ್.ಎಸ್. ಪ್ರಣಯ್ ಕೂಡ ಇದೇ ಸಾಲಿಗೆ ಸೇರಿದರು. ಜಯ ಸಾಧಿಸಿದ್ದು ಕೆ. ಶ್ರೀಕಾಂತ್ ಮತ್ತು ಎಂ.ಆರ್. ಅರ್ಜುನ್-ಧ್ರುವ ಕಪಿಲ ಮಾತ್ರ.
ಕೆ. ಶ್ರೀಕಾಂತ್ ಥಾಯ್ಲೆಂಡ್‌ನ ಕಂಟಫೊನ್ ವಾಂಗ್‌ಶರೋನ್ ಅವರನ್ನು 21-15, 21-19ರಿಂದ ಮಣಿಸಿ ಭಾರತದ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ಅವರಿನ್ನು ಚೈನೀಸ್ ತೈಪೆಯ ಚಿಯಾ ಹಾವೋ ಲೀ ವಿರುದ್ಧ ಆಡಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ಫ್ರಾನ್ಸ್‌ನ ಲುಕಾಸ್ ಕೊರ್ವೀ-ರೋನನ್ ಲಾಬರ್ ವಿರುದ್ಧ 21-16, 21-15ರಿಂದ ಗೆದ್ದು ಬಂದರು.
ಹಾಲಿ ಚಾಂಪಿಯನ್
ಪಿ.ವಿ. ಸಿಂಧು ಮೇಲೆ ವಿಪರೀತ ನಿರೀಕ್ಷೆ ಇತ್ತು. ಕಾರಣ, ಅವರು ಹಾಲಿ ಚಾಂಪಿಯನ್ ಎಂಬುದು. ಆದರೆ ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ಮುಂದೆ ಭಾರತೀಯಳ ಆಟ ಸಾಗಲಿಲ್ಲ. ಯಮಾಗುಚಿ ಮೊದಲ ಗೇಮ್ ಕಳೆದುಕೊಂಡ ಬಳಿಕ ತಿರುಗೇಟು ನೀಡಿದರು. ಗೆಲುವಿನ ಅಂತರ 18-21, 21-19, 21-17. ಕಳೆದ ವಾರದ ಥಾಯ್ಲೆಂಡ್ ಓಪನ್ ಪಂದ್ಯಾವಳಿಯಲ್ಲೂ ಸಿಂಧು ಮೊದಲ ಸುತ್ತಿನಲ್ಲೇ ಆಟ ಮುಗಿಸಿದ್ದರು.
ಸೈನಾ ನೆಹ್ವಾಲ್ ಅವರನ್ನು ಥಾಯ್ಲೆಂಡ್‌ನ ರಚನೋಕ್ ಇಂತಾನನ್ 21-13, 21-15ರಿಂದ ಮಣಿಸಿದರು. ಭಾರತದ ಮತ್ತೋರ್ವ ಆಟಗಾರ್ತಿ ಆಕರ್ಷಿ ಕಶ್ಯಪ್ ಅವರನ್ನು ಥಾಯ್ಲೆಂಡ್‌ನವರೇ ಆದ ಸುಪನಿದಾ ಕಟೆತಾಂಗ್ 21-17, 21-9ರಿಂದ ಹಿಮ್ಮೆಟ್ಟಿಸಿದರು.
ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್. ಎಸ್. ಪ್ರಣಯ್ ಅವರನ್ನು ಜಪಾನ್‌ನ ಕೋಡೈ ನರವೋಕ 21-15, 21-19 ಅಂತರದಿಂದ ಮಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.