![Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ](https://www.udayavani.com/wp-content/uploads/2025/02/7-19-415x249.jpg)
![Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ](https://www.udayavani.com/wp-content/uploads/2025/02/7-19-415x249.jpg)
Team Udayavani, Jun 8, 2023, 7:08 AM IST
ಮೇಷ: ತಾಳ್ಮೆ ಸಹನೆ ಕಳೆದುಕೊಳ್ಳದೇ ಕಾರ್ಯ ನಿರ್ವಹಿಸಿ. ಆರ್ಥಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಏರುಪೇರು ಸಂಭವ. ಮನೆ, ಆಸ್ತಿ ವಿಚಾರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.
ವೃಷಭ: ಅನಿರೀಕ್ಷಿತ ಸ್ಥಾನಮಾನ ಗೌರವಾದಿ ಸುಖ ಸಂಭವ. ಉದ್ಯೋಗ ವ್ಯವಹಾರದಲ್ಲಿ ಸಫಲತೆ. ದೈನಂದಿನ ಚಟುವಟಿಕೆಗಳಲ್ಲಿ ಪರಿಶುದ್ಧತೆಯಿಂದ ಮಾನಸಿಕ ನೆಮ್ಮದಿ. ಗೃಹದಲ್ಲಿ ಸಂತಸದ ವಾತಾವರಣ. ಪತಿಪತ್ನಿಯರಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ.
ಮಿಥುನ: ಉತ್ತಮ ವಾಕ್‌ಚತುರತೆ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಪ್ರಗತಿ. ಗುರು ಹಿರಿಯರಿಂದ ಸಹಾಯ ಸಹಕಾರ ಮಾರ್ಗದರ್ಶನದ ಲಾಭ. ಗೃಹದಲ್ಲಿ ಅನಗತ್ಯ ಚಚೆಗೆ ಆಸ್ಪದ ನೀಡದಿರಿ.
ಕರ್ಕ: ನಿರೀಕ್ಷೆಯಂತೆ ಅಧಿಕ ಧನಾಗಮನ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖಕರ. ದೂರ ಪ್ರಯಾಣ ಸಂಭವ. ಆಸ್ತಿ ಹೂಡಿಕೆ ವಿಚಾರಗಳಲ್ಲಿ ಪ್ರಗತಿ. ದೂರದ ಮಿತ್ರರಿಂದ ಸಹಾಯ ಸುವಾರ್ತೆ.
ಸಿಂಹ: ಹಲವಾರು ವಿಳಂಬಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಂಭವ. ದೂರದ ವ್ಯವಹಾರಗಳಿಂದ ಧನಲಾಭ. ಮಾತಿನಲ್ಲಿ ಜಾಗ್ರತೆ ವಹಿಸುವುದರಿಂದ ಅಧಿಕ ಲಾಭ ಸಂಭವ. ವಿದ್ಯೆ ಜ್ಞಾನ ಗುರು ಹಿರಿಯರಿಂದ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ತೃಪ್ತಿದಾಯಕ.
ಕನ್ಯಾ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನಮಾನ ಗೌರವ ಪ್ರಾಪ್ತಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷ ವಾರ್ತೆ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಮನೆಯಲ್ಲಿ ಕೌಟುಂಬಿಕ ಸುವಾರ್ತೆ. ಧಾರ್ಮಿಕ ವಿಚಾರಗಳಲ್ಲಿ ಶ್ರದ್ಧೆ ವೃದ್ಧಿ.
ತುಲಾ: ಆರೋಗ್ಯ ವೃದ್ಧಿ. ಅತೀ ಆಸೆ ಮಾಡದೇ ಬಂದ ಅವಕಾವ ಉಪಯೋಗಿಸಿಕೊಳ್ಳಿ. ಉತ್ತಮ ಜನಮನ್ನಣೆ. ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ಸಮಾದಾನ. ವಿದ್ಯಾರ್ಥಿ, ದಂಪತಿಗಳಿಗೆ ಶುಭ ಫಲದ ದಿನ. ಗುರುಹಿರಿಯರ ಪ್ರೋತ್ಸಾಹ.
ವೃಶ್ಚಿಕ: ರಾಜಕೀಯ ನಾಯಕರಿಗೆ ಉತ್ತಮ ಜನಮನ್ನಣೆ. ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಬಂಧುಗಳಿಂದ ಪ್ರೋತ್ಸಾಹ. ಸಾಂಸಾರಿಕರಿಗೆ, ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ. ಧಾರ್ಮಿಕ ಸೇವೆಯಲ್ಲಿ ಕಾರ್ಯ ನಿರಂತರ.
ಧನು: ಪಾಲುದಾರಿಕಾ ವ್ಯವಹಾರಸ್ಥರೂ, ದಂಪತಿಗಳು ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರಯಾಣ ಅವಕಾಶ. ಸ್ಥಾನಮಾನ ಕೊರತೆ ಕಾಣದು. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯ ಅನುಕೂಲಕರ.
ಮಕರ: ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಿತ್ರರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ನೀರಿನಿಂದ ಉತ್ಪನ್ನ ವಸ್ತುಗಳಿಂದ, ಆಹಾರೋದ್ಯಮ, ಆಭರಣ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ.
ಕುಂಭ: ಅನ್ಯರ ಸಹಾಯ ನಿರೀಕ್ಷಿಸದೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ಯಶಸ್ಸು. ದಾಂಪತ್ಯ ಸುಖ ತೃಪ್ತಿದಾಯಕ. ಗಣಿ, ಭೂವ್ಯವಹಾರ, ಆಹಾರೋದ್ಯಮದವರಿಗೆ ಅನುಕೂಲ.
ಮೀನ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೀರ್ಘ ಪ್ರಯಾಣದಿಂದ ಲಾಭ. ರಾಜಕೀಯ ಕಾರ್ಯ ಕ್ಷೇತ್ರ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ದಂಪತಿಗಳು ಅನ್ಯೋನ್ಯತೆಗೆ ಸಹಕರಸಿ. ಅಭಿವೃದ್ಧಿದಾಯಕ ಧನಾರ್ಜನೆ.
You seem to have an Ad Blocker on.
To continue reading, please turn it off or whitelist Udayavani.