RBI: ಗ್ರಾಹಕರ ಆಸ್ತಿ ದಾಖಲೆ ಕಳೆದುಹೋದರೆ ಬ್ಯಾಂಕ್‌ಗಳೇ ಹೊಣೆ
ಆರ್‌ಬಿಐನ ಬಿ.ಪಿ.ಕಾನೂನಗೋ ಸಮಿತಿ ಶಿಫಾರಸು
Team Udayavani, Jun 9, 2023, 7:20 AM IST
ಮುಂಬೈ: ಬ್ಯಾಂಕ್ ಅಥವಾ ಗೃಹ ನಿರ್ಮಾಣಕ್ಕೆ ಸಾಲ ಪಡೆಯುವ ವೇಳೆ ಗ್ರಾಹಕರು ನೀಡಿದ ಆಸ್ತಿಯ ದಾಖಲೆಗಳನ್ನು ಹಣಕಾಸು ಸಂಸ್ಥೆಗಳೇನಾದರೂ ಕಳೆದು ಹಾಕಿದರೆ, ಆಯಾ ಸಂಸ್ಥೆಗಳೇ ಹೊಣೆ ಹೊರಬೇಕು. ಜತೆಗೆ ಗ್ರಾಹಕರಿಗೆ ಸೂಕ್ತ ರೀತಿಯಲ್ಲಿ ನಗದು ಪರಿಹಾರ ನೀಡಬೇಕು ಎಂದು ಆರ್‌ಬಿಐ 2022ರ ಮೇನಲ್ಲಿ ರಚಿಸಿದ್ದ ಬಿ.ಪಿ.ಕಾನೂನಗೋ ನೇತೃತ್ವದ ಆರು ಸದಸ್ಯರ ಸಮಿತಿ ಶಿಫಾರಾಸು ಮಾಡಿದೆ. ಜೂ.5ರಂದೇ ಸಮಿತಿಯ ವರದಿ ಬಿಡುಗಡೆಯಾಗಿದೆ.
ಸಾಮಾನ್ಯವಾಗಿ ಬ್ಯಾಂಕ್‌ಗಳು, ಗೃಹ ಸಾಲ ನೀಡುವ ಸಂಸ್ಥೆಗಳು ಸಾಲದ ಅವಧಿ ಮುಕ್ತಾಯದವರೆಗೆ ಆಸ್ತಿಯ ಮೂಲ ದಾಖಲೆಗಳನ್ನು ತಮ್ಮ ವಶದಲ್ಲಿಯೇ ಇರಿಸಿಕೊಳ್ಳುತ್ತವೆ. ಸಾಲ ನೀಡುವ ಸಂಸ್ಥೆಗಳು ಗ್ರಾಹಕರು ನೀಡುವ ಆಸ್ತಿಯ ದಾಖಲೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ, ಅವುಗಳನ್ನು ಕಾಪಾಡಿಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ. ಕೆಲವು ಬ್ಯಾಂಕ್‌ಗಳು ಇಂಥ ದಾಖಲೆಗಳನ್ನು ತಮ್ಮ ಶಾಖೆಗಳಲ್ಲಿ ಅಥವಾ ಪ್ರಧಾನ ಕಚೇರಿಗಳಲ್ಲಿ ಇರಿಸಿಕೊಳ್ಳುತ್ತವೆ.
ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಲಾಕರ್‌ಗಳಲ್ಲಿ ಇರಿಸಿಕೊಳ್ಳುವುದು ಸೂಕ್ತವೆಂದೂ ಸಮಿತಿ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ದಾಖಲೆಗಳು ಕಳವಾದರೂ, ಅದನ್ನು ಸುರಕ್ಷಿತವಾಗಿ ಮತ್ತೂಮ್ಮೆ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದಿದೆ. ಇದಲ್ಲದೆ, ಸಾಲ ಮುಕ್ತಾಯವಾದ ಬಳಿಕ ನಿಗದಿತ ಕಾಲಮಿತಿಯಲ್ಲಿ ಗ್ರಾಹಕರಿಗೆ ಆಸ್ತಿಯ ದಾಖಲೆಗಳನ್ನು ಆಯಾ ಸಂಸ್ಥೆಗಳು ನೀಡುವಂತೆ ಮಾಡುವುದು ಆರ್‌ಬಿಐ ಹೊಣೆಗಾರಿಕೆಯಾಗಿದೆ ಎಂದು ಸಮಿತಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.