Movie Review: ದರ್ಬಾರ್‌ ಒಳಗೊಂದು ನಗೆಹಬ್ಬ


Team Udayavani, Jun 10, 2023, 11:51 AM IST

Kannada movie darbar review

ರಾಜಕೀಯದ ಚದುರಂಗದಾಟವನ್ನು ದೂರದಿಂದ ನೋಡುವುದೇ ಒಂದು ಮಜ. ಅಭ್ಯರ್ಥಿಯನ್ನುಸೋಲಿಸಲು, ಗೆಲ್ಲಿಸಲು ನಡೆಯುವ “ಗೇಮ್‌’ಗಳು, ಸ್ಕೆಚ್‌ಗಳು ಚಿತ್ರ-ವಿಚಿತ್ರವಾಗಿರುತ್ತವೆ. ಅದರಲ್ಲೂಹಳ್ಳಿ ರಾಜಕೀಯದ “ರಂಗು’ ಇನ್ನೂ ಜೋರು. ಇಂತಹ ಹಳ್ಳಿ ರಾಜಕೀಯದ ಆಟವನ್ನು ತೆರೆಮೇಲೆ ತಂದಿರುವ ಸಿನಿಮಾ “ದರ್ಬಾರ್‌’. ಇದು ನಿರ್ದೇಶಕ ವಿ.ಮನೋಹರ್‌ ಅವರ ಕನಸು ಕೂಡಾ.

ಸುಮಾರು 23 ವರ್ಷಗಳ ನಂತರ ಮನೋಹರ್‌ ನಿರ್ದೇಶಿಸಿರುವ ಸಿನಿಮಾ “ದರ್ಬಾರ್‌’. ಒಂದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾವನ್ನು ಹಳ್ಳಿ ಹಿನ್ನೆಲೆಯಲ್ಲಿ ಕಟ್ಟಿಕೊಡಬೇಕೆಂಬುದು ಮನೋಹರ್‌ ಅವರ ಕನಸು. ಅದನ್ನು ತೆರೆಮೇಲೆ ಅಚ್ಚುಕಟ್ಟಾಗಿ ತರುವಲ್ಲಿ ಮನೋಹರ್‌ ಯಶಸ್ವಿಯಾಗಿದ್ದಾರೆ.

ಜಬರ್ದಸ್ತ್ ನಾಯಕ, ಆತನದ್ದೇ ಆದ ಸ್ಟೈಲ್‌, ಜೊತೆಗೊಂದು ಲವ್‌.. ಆದರೆ, ಹೃದಯವಂತ… ಈ ನಡುವೆಯೇ ನಾಯಕನ ಅಹಂಕಾರ ಇಳಿಸಬೇಕೆಂಬುದು ಸ್ಕೆಚ್‌ ಹಾಕಿ ಚುನಾವಣೆಗೆ ನಿಲ್ಲಿಸುವ “ಜೊತೆಗಾರರು’ ಹಾಗೂ ಆತನ ವಿರುದ್ಧ ಅವರ ಸ್ಕೆಚ್‌.. ಇಂತಹ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಆರಂಭದಲ್ಲಿ ಎಲ್ಲಾ ಸಿನಿಮಾಗಳಂತೆ ನಾಯಕನ ಇಂಟ್ರೋಡಕ್ಷನ್‌, ಆತನ ಗುಣಗಾನ, ಲವ್‌… ಹೀಗೆ ಸಾಗುವ ಸಿನಿಮಾ ನಿಜವಾಗಿಯೂ ಟೇಕಾಫ್ ಆಗೋದು ಚುನಾವಣಾ ಪ್ರಕ್ರಿಯೆ ಅಖಾಡಕ್ಕಿಳಿದ ಮೇಲೆ. ಇಲ್ಲಿನ ತರಹೇವಾರಿ ಪ್ರಚಾರ, ಗಿಮಿಕ್‌… ಎಲ್ಲವೂ ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ. ಜೊತೆಗೆ ನಗುವಿನೊಂದಿಗೆ ಪ್ರೇಕ್ಷಕ ಸಿನಿಮಾ ಎಂಜಾಯ್‌ ಮಾಡುವಂತಹ ಹಲವು ಸನ್ನಿವೇಶಗಳು ಸಿನಿಮಾದಲ್ಲಿವೆ. ಆ ಮಟ್ಟಿಗೆ ವಿ.ಮನೋಹರ್‌ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ.

ಅಂದಹಾಗೆ, ನಾಯಕರಾಗಿ ನಟಿಸಿರುವ ಸತೀಶ್‌ ಅವರೇ ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಇವತ್ತಿನ ರಾಜಕೀಯ ಸನ್ನಿವೇಶಗಳಿಗೆ ಹಿಡಿದ ಕೈಗನ್ನಡಿಯಂತಿದೆ. ಇಡೀ ಸಿನಿಮಾ ಹಳ್ಳಿಯಲ್ಲೇ ನಡೆದಿದ್ದು, ಒಂದಷ್ಟು ವಿಚಿತ್ರ, ವಿಭಿನ್ನ ಮ್ಯಾನರಿಸಂನ ಪಾತ್ರಗಳು ನಗುತರಿಸುತ್ತವೆ.

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಸತೀಶ್‌ ಅವರು ಆ್ಯಕ್ಷನ್‌ ಇಮೇಜ್‌ ಇರುವ ಹೀರೋ ಆಗಿ ಮಿಂಚಿದ್ದಾರೆ. ಸೆಂಟಿಮೆಂಟ್‌ಗಿಂತ ಖಡಕ್‌ ಲುಕ್‌ನಲ್ಲೇ ಗಮನ ಸೆಳೆದಿರುವ ಸತೀಶ್‌ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲೂ ಮೆಚ್ಚುಗೆ ಗಳಿಸುತ್ತಾರೆ. ನಾಯಕಿ ಜಾಹ್ನವಿಗೆ ಇಲ್ಲಿನ ಹೆಚ್ಚಿನ ಅವಕಾಶವಿಲ್ಲ.

ಆದರೆ, ಹುಲಿ ಕಾರ್ತಿಕ್‌ ತಾನೊಬ್ಬ ಪ್ರತಿಭಾವಂತ ಕಲಾವಿದ ಎನ್ನುವುದನ್ನು ಹಿರಿತೆರೆ ಮೇಲೂ ಸಾಬೀತು ಮಾಡಿದ್ದಾರೆ. “ನಾಗ’ ಎಂಬ ಪಾತ್ರದ ವಿವಿಧ ಶೇಡ್‌ಗಳಲ್ಲಿ ಕಾರ್ತಿಕ್‌ ಗಮನ ಸೆಳೆಯುತ್ತಾರೆ. ಒಂದು ಹಳ್ಳಿ ಕಾಮಿಡಿಯನ್ನು ಕಣ್ತುಂಬಿಕೊಳ್ಳುವ ಆಸೆ ಇರುವವರಿಗೆ “ದರ್ಬಾರ್‌’ ಒಳ್ಳೆಯ ಆಯ್ಕೆಯಾಗಬಹುದು

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.