Comd K: ಅಗ್ರ ಹತ್ತರಲ್ಲಿ ರಾಜ್ಯಕ್ಕೆ 5 ರ್‍ಯಾಂಕ್
-ಮೊದಲ ನೂರು ರ್‍ಯಾಂಕ್‌ನಲ್ಲಿ 53 ರ್‍ಯಾಂಕ್ ಪಡೆದ ಕನ್ನಡಿಗರು
Team Udayavani, Jun 11, 2023, 7:44 AM IST
ಬೆಂಗಳೂರು: 2023ನೇ ಸಾಲಿನ ಕಾಮೆಡ್-ಕೆ ಯುಜಿಇಟಿ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಟಾಪ್ 10 ರ್‍ಯಾಂಕುಗಳಲ್ಲಿ ಮೊದಲ ರ್‍ಯಾಂಕ್ ಸೇರಿ ಐದು ಸ್ಥಾನಗಳನ್ನು ಕರ್ನಾಟಕದ ಐವರು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ನೂರು ರ್‍ಯಾಂಕ್‌ನಲ್ಲಿ ಕನ್ನಡಿಗರು 53 ರ್‍ಯಾಂಕ್ ಪಡೆದಿದ್ದಾರೆ.
ಬೆಂಗಳೂರು ವಿದ್ಯಾರ್ಥಿಗಳಾದ ಎನ್.ನಂದ ಗೋಪಿಕೃಷ್ಣ ಮೊದಲ ರ್‍ಯಾಂಕ್ ಮತ್ತು ಸಿದ್ದಾರ್ಥ್ ಪಾಮಿದಿ ಮೂರನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಮೈಸೂರಿನ ಶ್ರೇಯಾ ಪ್ರಸಾದ್ 8ನೇ ರ್‍ಯಾಂಕ್, ಬೆಂಗಳೂರಿನ ಅರ್ಜುನ್ ಬಿ.ದೀಕ್ಷಿತ್ 9ನೇ ರ್‍ಯಾಂಕ್ ಮತ್ತು ಮನಿಷ್ ಎಚ್.ಪರಾಶರ್ ಹತ್ತನೇ ರ್‍ಯಾಂಕ್‌ನೊಂದಿಗೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಉಳಿದ ಐದು ರ್‍ಯಾಂಕ್‌ಗಳು ಹರ್ಯಾಣ, ಕೇರಳ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ.
ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸೇರಿ ಕಾಮೆಡ್-ಕೆ ಜತೆ ಹೊಂದಾಣಿಕೆ ಮಾಡಿಕೊಂಡಿರುವ ದೇಶದ ವಿವಿಧ 40 ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಒಟ್ಟು 20 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ಮೇ 28ರಂದು 2023ನೇ ಸಾಲಿನ ಕಾಮೆಡ್-ಕೆ ಯುಜಿಇಟಿ ಮತ್ತು ಯೂನಿಗ್ರೇಜ್ ಪರೀಕ್ಷೆ ದೇಶಾದ್ಯಂತ ನಡೆದಿತ್ತು.
ಕರ್ನಾಟಕದ 80 ಕೇಂದ್ರಗಳೂ ಸೇರಿ ದೇಶಾದ್ಯಂತ 179 ನಗರಗಳಲ್ಲಿನ 264 ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ನಡೆದಿತ್ತು. ಈ ಬಾರಿ ಕರ್ನಾಟಕದ 25,244 ವಿದ್ಯಾರ್ಥಿಗಳು ಸೇರಿ ವಿವಿಧ ರಾಜ್ಯಗಳ ಒಟ್ಟು 96,607 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲ 8,130 ವಿದ್ಯಾರ್ಥಿಗಳು ಶೇ. 90 ರಿಂದ ಶೇ. 100 ಫಲಿತಾಂಶದೊಂದಿಗೆ ಉತ್ತಮ ರ್‍ಯಾಂಕ್ ಪಡೆದಿದುಕೊಂಡಿದ್ದಾರೆ. ಇದರಲ್ಲಿ 2543 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಅದೇ ರೀತಿ ರಾಜ್ಯದ 2,157 ಮಂದಿ ಸೇರಿ 7,719 ವಿದ್ಯಾರ್ಥಿಗಳು ಶೇ. 80ರಿಂದ ಶೇ. 90 ಪಡೆದರೆ, 8,036 ವಿದ್ಯಾರ್ಥಿಗಳು ಶೇ. 70 ರಿಂದ ಶೇ. 80 ರಷ್ಟು ಫಲಿತಾಂಶ ಪಡೆದು ಕಾಮೆಡ್‌ಕೆ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರತಿ ವಿದ್ಯಾರ್ಥಿಯ ರ್‍ಯಾಂಕ್ ಪಟ್ಟಿಯು ಕಾಮೆಡ್-ಕೆ ವೆಬ್‌ಸೈಟ್ http://www.comedk.org ನಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ತಮ್ಮ ಲಾಗಿನ್ ಬಳಸಿ ಪಡೆದುಕೊಳ್ಳಬಹುದಾಗಿದೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ 10 ರ್‍ಯಾಂಕ್ ಪಡೆದವರು
*ಎನ್.ನಂದಗೋಪಿಕೃಷ್ಣ, ಸರ್ಜಾಪುರ, ಬೆಂಗಳೂರು
*ಮಾನಸ್ ಅಗರ್ವಾಲ್, ಗುರುಗಾವ್, ಹರ್ಯಾಣ
*ಸಿದ್ದಾರ್ಥ್ ಪಾಮಿದಿ, ಬನಶಂಕರಿ, ಬೆಂಗಳೂರು
*ಗುಡಿಪತಿ ಸಾಯಿ ರೇವಂತ್, ಅನಂತಪುರ, ಆಂಧ್ರಪ್ರದೇಶ
*ಅಯೋಜ್ ಮ್ಯಾಥು, ಕೊಲ್ಲಮ್, ಕೇರಳ
*ದೇವೇಶ್ ಪಿ.ಎಲ್. , ಗುರುಗಾವ್, ಹರ್ಯಾಣ
*ಯುವರಾಜ್‌ಸಿಂಗ್ ರಜಪೂತ್, ಕಲ್ಲಿಕೋಟೆ, ಕೇರಳ
* ಶ್ರೇಯಾ ಪ್ರಸಾದ್, ಶ್ರೀರಾಮಪುರ, ಮೈಸೂರು
* ಅರ್ಜುನ್ ಬಿ. ದೀಕ್ಷಿತ್, ಸಂಜಯನಗರ, ಬೆಂಗಳೂರು
* ಮನಿಶ್ ಎಚ್. ಪರಾಶರ್, ರಾಜರಾಜೇಶ್ವರಿ ನಗರ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.