CM ಗರಂ; ಬಂದಿರೋರು ಹತ್ತತ್ತು ವೋಟ್ ಹಾಕ್ಸಿದ್ರೆ ನಿಮ್ ಮಂಜಣ್ಣ ಮಂತ್ರಿಯಾಗ್ತಿದ್ದ
ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ
Team Udayavani, Jun 10, 2023, 10:02 PM IST
ಹುಣಸೂರು: ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ಶಕ್ತಿ ತುಂಬುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಅಭಿಮಾನಿಗಳು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಶನಿವಾರ ಸಂಜೆ ಮುಖ್ಯಮಂತ್ರಿಗಳ ಮೈಸೂರು ನಿವಾಸಕ್ಕೆ ತೆರಳಿ ಸೋತಿರುವ ಮಂಜುನಾಥರಿಗೆ ಎಂ.ಎಲ್.ಸಿ.ಸ್ಥಾನ ಕಲ್ಪಿಸಬೇಕೆಂದು ಮಾಡಿದ ಮನವಿಗೆ ಗರಂ ಆದ ಸಿಎಂ, ಗೆಲ್ಲಿಸಿದ್ದರೆ ಮಂತ್ರಿಯಾಗ್ತಿದ್ದ, ನೀವು ಮಂಜುನಾಥನನ್ನು ಸೋಲಿಸಿ ಬಂದಿದ್ದೀರಾ, ಇಲ್ಲಿ ಬಂದಿರುವ ಒಬ್ಬೊಬ್ಬರು ಹತ್ತು ಓಟ್ ಹಾಕಿಸಿದ್ದರೂ ಗೆಲ್ತಿದ್ದ, ರಾಜ್ಯದಲ್ಲಿ ಸೋತವರು 90 ಮಂದಿ ಇದ್ದಾರೆ, ಎಲ್ಲರಿಗೂ ಎಂಎಲ್ಸಿ ಸಾಧ್ಯವಿಲ್ಲ, ಆದರೂ ಈ ಮಂಜುಗೆ ಉನ್ನತ ಹುದ್ದೆ ಕೊಡಿಸುವ ಜವಾಬ್ದಾರಿ ನನ್ನದು ಎಂದು ಮುಖಂಡರಿಗೆ ಆಶ್ವಾಸನೆ ನೀಡಿದರು.
ಮುಖ್ಯಮಂತ್ರಿಗಳೊಂದಿಗೆ ಸಚಿವ ಕೆ.ವೆಂಕಟೇಶ್,ಶಾಸಕ ರವಿಶಂಕರ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿಇ.ಜೆ.ವಿಜಯಕುಮಾರ್ ಇದ್ದರು.
ಈ ವೇಳೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್, ಬ್ಲಾಕ್ ಅಧ್ಯಕ್ಷರಾದ ನಾರಾಯಣ್, ಕಲ್ಕುಣಿಕೆರಮೇಶ್, ಮಂಜುಳ, ಶೋಭಾ, ಕಾರ್ಯಾಧ್ಯಕ್ಷರಾದ ಬಸವರಾಜಪ್ಪ, ಪುಟ್ಟರಾಜು, ನಗರಸಭೆ ಸದಸ್ಯೆ ಸೌರಭ ಸಿದ್ದರಾಜು, ಮಾಜಿ ಅಧ್ಯಕ್ಷೆ ಸುನಿತಾಜಯರಾಮೇಗೌಡ, ಜಿ.ಪಂ.ಮಾಜಿ ಸದಸ್ಯ ಕುನ್ನೇಗೌಡ, ಉದ್ಯಮಿಗಳಾದ ರಾಜುಶಿವರಾಜೇಗೌಡ, ಕೃಷ್ಣ, ಮುಖಂಡರಾದ ಬಿ.ಎನ್.ಜಯರಾಂ, ಮಂಡ್ಯಮಹೇಶ್, ನೇರಳಕುಪ್ಪೆಮಹದೇವ್, ಕುಮಾರ್, ಅಜ್ಗರ್‌ಪಾಷಾ, ಲೋಕೇಶ್, ಹೊನ್ನಪ್ಪ, ಚಿಲ್ಕುಂದನಾಗರಾಜ್ ಮತ್ತಿತರರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.