Kollegala ಮದುವೆಯಾದ ಐದೇ ದಿನಕ್ಕೆ ನೇಣಿಗೆ ಶರಣಾದ ವ್ಯಕ್ತಿ
ಮೊದಲರಾತ್ರಿಯೂ ದೇಹ ಸಂಪರ್ಕ ಮಾಡಿರಲಿಲ್ಲ ಎಂದ ನವ ವಧು!
Team Udayavani, Jun 11, 2023, 8:22 PM IST
ಕೊಳ್ಳೇಗಾಲ: ಮದುವೆಯಾದ ಐದೇ ದಿನಕ್ಕೆ ವರನೊಬ್ಬ ತನ್ನ ಮನೆಯಲ್ಲಿ ಭಾನುವಾರ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಇಲ್ಲಿನ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ನಿವಾಸಿ ಬೇಸಾಯ ವೃತ್ತಿ ಮಾಡುತ್ತಿದ್ದ ಸತೀಶ್ ಬಾಬು (43) ಸಾವಿಗೀಡಾಗಿರುವ ಮೃತ ದುರ್ದೈವಿ.
ಮದುವೆಯಾಗಿ ಕೇವಲ ಐದೇ ದಿನಕ್ಕೆ ಸಾವನ್ನಪ್ಪಿರುವ ಘಟನೆಯನ್ನು ಕೇಳಿ ನಗರವೇ ಬೆಚ್ಚಿ ಬಿದ್ದಿದೆ. ಸತೀಶ್ ಬಾಬು ಹಾಗೂ ಚೆನ್ನಾಜಮ್ಮ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ಮೂರನೇ ದಿನಕ್ಕೆ ಕುಟುಂಬಸ್ಥರು ಒಟ್ಟಾಗಿ ಸೇರಿ ಸಾಂಪ್ರದಾಯದಂತೆ ಮೊದಲನೆಯ ರಾತ್ರಿ ಏರ್ಪಡಿಸಿದ್ದರು ಆ ಮೊದಲನೇ ರಾತ್ರಿ ಸತೀಶ್ ಬಾಬು ನನಗೆ ಅನಾರೋಗ್ಯ ಸಮಸ್ಯೆ ಇದೆ ಹಾಗಾಗಿ ಮೊದಲನೇ ರಾತ್ರಿ ಯಾವ ಸಾಂಪ್ರದಾಯಗಳು ಬೇಡವೆಂದು ಮನೆಯಲ್ಲಿ ಮಲಗಿದ್ದರು.
ನಂತರ ಎಂದಿನಂತೆ ಬೆಳಗ್ಗೆ ಎದ್ದು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಅದಾದ ನಂತರ ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದು ಬೆಳಗ್ಗೆ ಎದ್ದು ಜಮೀನಿಗಳಿಗೆ ತೆರಳಿದ್ದರು ನಂತರ ಮನೆಯ ಕೊಠಡಿ ಒಳಗೆ ಹೋಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ .
ಮದುವೆಯಾದ ಮೊದಲರಾತ್ರಿಯೂ ಸಹ ನನ್ನ ಜೊತೆ ಯಾವುದೇ ದೇಹ ಸಂಪರ್ಕ ಮಾಡಿರಲಿಲ್ಲ. ಈ ಸಾವಿನ ಹಿಂದೆ ನನಗೆ ಹಲವಾರು ಅನುಮಾನಗಳಿವೆ ಹಾಗಾಗಿ ನನ್ನ ಗಂಡನ ಸಾವಿಗೆ ತಂದೆ ಲಿಂಗರಾಜು, ತಾಯಿ ಮಹದೇವಿ, ಸಂಬಂಧಿಕರಾದ ದೇವಾನಂದ್, ಪ್ರಕಾಶ್, ವಿಜಯಕುಮಾರ್ ಕಾರಣರಾಗಿದ್ದಾರೆ ಹಾಗಾಗಿ ಇವರುಗಳ ಮೇಲೆ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮೃತರ ಪತ್ನಿ ಟಿ ನರಸೀಪುರ ತಾಲ್ಲೂಕಿನ ಕನ್ನಹಳ್ಳಿ ಗ್ರಾಮದ ಚೆನ್ನಾಜಮ್ಮ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಶವವನ್ನು ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.