Healthcare: ಮಳೆಗಾಲದಲ್ಲಿ ತ್ವಚೆಯ ಆರೋಗ್ಯ ಕಾಯ್ದುಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ…


Team Udayavani, Jun 13, 2023, 5:25 PM IST

web

ಮಳೆಗಾಲ ಆರಂಭವಾಗುತ್ತಿದೆ. ಕಾಲಕ್ಕೆ ತಕ್ಕಂತೆ ತ್ವಚೆಯ ಆರೈಕೆಯೂ ಮುಖ್ಯ. ಬೇಸಿಗೆಯಲ್ಲಿ ಸೂರ್ಯನ ಶಾಖಕ್ಕೆ, ಬಿಸಿಲಿಗೆ ಟ್ಯಾನ್‌ ಆಗುವಂತೆ ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹರಡುವುದರಿಂದ ತ್ವಚೆ ಸಮಸ್ಯೆ, ಅಲರ್ಜಿ ಉಂಟಾಗುತ್ತದೆ.

ನಾವು ಸುಂದರವಾಗಿ ಕಾಣುವುದೇ ತ್ವಚೆ ಅಥವಾ ದೇಹದ ಚರ್ಮದಿಂದ. ನಮ್ಮ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುವುದೇ ನಮ್ಮ ಸುಂದರವಾದ ಚರ್ಮ. ಹೀಗಾಗಿ ಯಾವಾಗಲೂ ಸುಂದರವಾದ ಚರ್ಮ ಹೊಂದಬೇಕೆಂಬುದು ಎಲ್ಲರೂ ಅಂದುಕೊಳ್ಳುವುದು ಸಾಮಾನ್ಯ ಸಂಗತಿಗಳಲ್ಲಿ ಒಂದು.

ನಮ್ಮ ಸೌಂದರ್ಯದ ಪ್ರತೀಕ ಎಂದರೆ ಅದು ನಮ್ಮ ತ್ವಚೆ. ಇದು ನಮ್ಮ ದೇಹಕ್ಕೆ ಸಂಪೂರ್ಣವಾಗಿ ರಕ್ಷಣೆ ನೀಡುತ್ತದೆ. ಬೇಸಿಗೆಯಲ್ಲಿ ಸೂರ್ಯನ ವಿಕಿರಣದಿಂದ ಹಾನಿಯಾಗದಂತೆ ಚರ್ಮ ರಕ್ಷಿಸುತ್ತದೆ. ಕೇವಲ ಸೂರ್ಯನ ವಿಕಿರಣಗಳಿಂದ ಮಾತ್ರ ಅಲ್ಲ ಚಳಿ ಹಾಗೂ ಮಳೆಗಾಲದಲ್ಲೂ ಚರ್ಮದ ರಕ್ಷಣೆ ಬಗ್ಗೆ ಗಮನ ಹರಿಸುವುದು ಮುಖ್ಯ.

ಮಳೆ ಚರ್ಮದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಮಳೆಗಾಲ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತರುತ್ತದೆ. ಇದನ್ನು ನಿರ್ಲಕ್ಷ್ಯಿಸುವಂತಿಲ್ಲ. ಈ ಮಳೆಗಾಲದ ಸಮಯದಲ್ಲಿ ಚರ್ಮದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ.

ಚರ್ಮದ ಮೇಲಿರುವ ಸಣ್ಣ ಸಣ್ಣ ರಂದ್ರಗಳು ಸಾಕಷ್ಟು ಸೋಂಕುಕಾರಕ ರೋಗಾಣುಗಳನ್ನು ನಮ್ಮ ದೇಹ ಪ್ರವೇಶ ಮಾಡುವಂತೆ ಮಾಡುತ್ತದೆ. ಹಾಗಾಗಿ ಚರ್ಮದ ಶುಚಿತ್ವ ನಮಗೆ ತುಂಬಾ ಮುಖ್ಯ.

ನಮ್ಮ ದೇಹದ ಚರ್ಮದ ಯಾವುದೇ ಭಾಗದಲ್ಲಿ ತೇವಾಂಶ ಹೆಚ್ಚು ಇರದಂತೆ ನೋಡಿಕೊಳ್ಳಬೇಕು. ಆರೋಗ್ಯಕರವಾದ ಚರ್ಮವನ್ನು ಹೊಂದುವುದರ ಜೊತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚು ಮಾಡುವಂತಹ ಅಂಶಗಳನ್ನು ಮತ್ತು ಮಳೆಗಾಲದಲ್ಲಿ ತ್ವಚೆಗೆ ಯಾವುದೇ ಹಾನಿಯಾಗದಂತಹ ವಿಚಾರಗಳ ಕಡೆಗೆ ಗಮನ ಹರಿಸಿದರೆ ಒಳ್ಳೆಯದು.

ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆ ಹೆಚ್ಚಾಗಿರುತ್ತದೆ. ಅಲರ್ಜಿ ತಡೆಗಟ್ಟಲು ವಾರದಲ್ಲಿ ಎರಡು ಬಾರಿ ಸ್ಕ್ರಬ್‌ ಮಾಡಬೇಕು. ಒಂದು ಚಮಚ ಆಲೀವ್ ಅಥವಾ ಕೊಬ್ಬರಿ ಎಣ್ಣೆಗೆ 1 ಚಮಚ ಸಕ್ಕರೆ ಹಾಕಿ, ಮುಖ ಹಾಗೂ ತುಟಿಗೆ ಹಚ್ಚಿ ನಿಧಾನವಾಗಿ 5 ನಿಮಿಷ ಸ್ಕ್ರಬ್ ಮಾಡಿ. ಹೀಗೆ ಮಾಡಿದರೆ ತ್ವಚೆ ತುಂಬಾ ಮೃದುವಾಗುತ್ತದೆ.

ಮುಖ ಕಾಂತಿಯುತವಾಗಲು ಮುಲ್ತಾನಿ ಮಿಟ್ಟಿ ಅಥವಾ ಯಾವುದೇ ಹಣ್ಣಿನಿಂದ ತಯಾರಿಸಿದ ಫೇಸ್‌ ಮಾಸ್ಕ್‌ ಉಪಯೋಗಿಸಬಹುದು.

ಮಳೆಗಾಲದಲ್ಲಿ ಸಾಧ್ಯವಾದಷ್ಟು ರೋಗ – ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಕಡೆಗೆ ಗಮನವಿಡಿ. ಮಾಂಸಹಾರಕ್ಕಿಂತ ಹಣ್ಣು – ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಬಳಸಿಕೊಳ್ಳಿ.

ಮಳೆಗಾಲದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರವಾಗಿ ಸದಾ ಆರೋಗ್ಯದಿಂದ ಇರಬಹುದು. ತ್ವಚೆ ರಕ್ಷಣೆಗೂ ಹೆಚ್ಚೆಚ್ಚು ನೀರು ಕುಡಿಯುವುದು ಮುಖ್ಯ.

ದೇಹಕ್ಕೆ ನೀರಿನ ಅಂಶವನ್ನು ಒದಗಿಸುವ ಸೀಸನಲ್ ಹಣ್ಣುಗಳಾದ ನೇರಳೆ ಹಣ್ಣು, ಸೇಬು ಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ದಾಳಿಂಬೆ ಹಣ್ಣು, ಚೆರ್ರಿ ಹಣ್ಣು ಮತ್ತು ಪೈನಾಪಲ್ ಹಣ್ಣುಗಳನ್ನು ಅತ್ಯಧಿಕವಾಗಿ ಸೇವನೆ ಮಾಡಿ.

ಗ್ರೀನ್ ಟೀ ಮತ್ತು ಹಾಟ್ ವೆಜಿಟೇಬಲ್ ಸೂಪ್ ಆಗಾಗ ಸೇವಿಸಿ ದೇಹದ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ರೆಫ್ರಿಜಿರೇಟರ್ ನಲ್ಲಿಟ್ಟ ಪಾನೀಯಗಳನ್ನು ಮತ್ತು ಜ್ಯೂಸ್ ಸೇವನೆ ಮಾಡಬೇಡಿ. ಇದರಿಂದ ಎದೆಯಲ್ಲಿ ಕಫ ಕಟ್ಟುವ ಸಾಧ್ಯತೆ ಹೆಚ್ಚು.

ಮಲಗುವ ಮುನ್ನ ಮೇಕಪ್ ತೆಗೆಯಿರಿ:

ಮಲಗುವ ಮುನ್ನ ಮೇಕಪ್ ತೆಗೆದುಹಾಕುವುದು ಅತ್ಯಂತ ಅವಶ್ಯಕ. ಮೇಕಪ್ ರಾತ್ರಿ ಸಮಯದಲ್ಲಿ ಚರ್ಮಕ್ಕೆ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ. ‌

*ಕಾವ್ಯಶ್ರೀ

ಟಾಪ್ ನ್ಯೂಸ್

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.