Malpe: ಒಂದೂವರೆ ವರ್ಷದಿಂದ ಜೆಟ್ಟಿಯಡಿ ಬಂದಿಯಾಗಿದ್ದ ಶ್ವಾನಗಳಿಗೆ ಬಿಡುಗಡೆ ಭಾಗ್ಯ!
Team Udayavani, Jun 14, 2023, 7:40 AM IST
ಮಲ್ಪೆ: ಒಂದೂವರೆ ವರ್ಷದಿಂದ ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಡಿ ಬಂದಿಯಾಗಿದ್ದ ಎರಡು ನಾಯಿಗಳಿಗೆ ಈಶ್ವರ ಮಲ್ಪೆ ಅವರು ಕೊನೆಗೂ ಮುಕ್ತಿ ದೊರಕಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಈ ಎರಡು ನಾಯಿಗಳು ಯಾವುದೋ ಕಾರಣಕ್ಕೆ ಜೆಟ್ಟಿಗೆ ಬಿದ್ದಿದ್ದವು. ಸುತ್ತಲೂ ನೀರು ತುಂಬಿರುವುದರಿಂದ ಅವುಗಳಿಗೆ ಮೇಲೆ ಬರಲು ಸಾಧ್ಯವಾಗದೆ ಬಂದಿಯಾಗಿದ್ದವು.
ಜೆಟ್ಟಿಯಡಿ ಬಾಗಿಕೊಂಡೆ ಇದ್ದು ದಿನ ದೂಡುತ್ತಿದ್ದವು. ಮೀನುಗಾರರು ಎಸೆದ ಆಹಾರವನ್ನು ತಿಂದು ಜೀವ ಉಳಿಸಿಕೊಂಡಿದ್ದವು. ಆಪದ್ಬಾಂಧವ ಈಶ್ವರ ಮಲ್ಪೆ ಅವರು ಈ ಮೊದಲು ಅವುಗಳನ್ನು ಅಲ್ಲಿಂದ ಹೊರ ತೆಗೆಯಲು ಮುಂದಾಗಿದ್ದರೂ ಸಾಧ್ಯವಾಗಲಿಲ್ಲ. ಸೋಮವಾರ ಮತ್ತೆ ಪ್ರಯತ್ನಿಸಿದರು.
ಹಗ್ಗ, ಟ್ಯೂಬ್ ಮೂಲಕ ಇಳಿದು ನಾಯಿಗಳನ್ನು ಹೊರತರಲು ಮುಂದಾದರು. ನಾಯಿಗಳ ಮನವೊಲಿಸುವ ಮೂಲಕ ಹಗ್ಗದ ಸಹಾಯದಿಂದ ಮೇಲೆ ತಂದರು. ಒಂದೂವರೆ ವರ್ಷದಿಂದ ಬಂಧನದಲ್ಲಿದ್ದ ಶ್ವಾನಗಳಿಗೆ ಆರಂಭದಲ್ಲಿ ನಡೆದಾಡಲು ಕಷ್ಟಪಟ್ಟವು. ಸ್ವಲ್ಪ ಸಮಯದ ಬಳಿಕ ಸಹಜ ಸ್ಥಿತಿಗೆ ಬಂದಿವೆ. ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ
Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.