ಇಂದು World Blood Donor Day: ರಕ್ತದಾನ ಎಂದರೆ ಜೀವದಾನ!
Team Udayavani, Jun 14, 2023, 8:03 AM IST
ಆರೋಗ್ಯಕರ ಜೀವನ ನಡೆಸಲು ರಕ್ತ ಅತೀ ಅವಶ್ಯ. ಅದಕ್ಕಾಗಿ ರಕ್ತವನ್ನು ಜೀವದ್ರವ್ಯ ಎಂದೇ ಕರೆಯಲಾಗುತ್ತದೆ. ಪ್ರತೀ ದಿನ ಅದೆಷ್ಟೋ ಮಂದಿ ರಕ್ತದ ಕೊರತೆಯಿಂದ ಸಾವನಪ್ಪುತ್ತಿದ್ದಾರೆ. ಪ್ರತೀ ದಿನ ಹಲವರಿಗೆ ರಕ್ತದ ಆವಶ್ಯಕತೆಯಿರುತ್ತದೆ.
ಶ್ರೇಷ್ಠ ದಾನಗಳಲ್ಲಿ ಒಂದಾಗಿ ರಕ್ತದಾನವನ್ನು ಪರಿಗಣಿಸಲಾಗಿದೆ. ಹಾಗಾಗಿ ಜನರಿಗೆ ರಕ್ತದ ಪ್ರಾಮುಖ್ಯವನ್ನು ತಿಳಿಸಲು, ರಕ್ತದಾನ ಮಾಡುವಂತೆ ಪ್ರೇರೇಪಿಸಲು ಹಾಗೂ ಸ್ವಯಂಪ್ರೇರಿತ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಪ್ರತೀ ವರ್ಷ ಜೂ.14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.
ರಕ್ತದಾನಿಗಳ ದಿನದ ಹಿನ್ನೆಲೆ
ಮೊದಲ ಬಾರಿಗೆ ರಿಚರ್ಡ್ ಲೊವರ್ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಎರಡು ನಾಯಿಗಳ ನಡುವೆ ರಕ್ತವನ್ನು ವರ್ಗಾವಣೆ ಮಾಡುವುದರ ಮೂಲಕ ಹೊಸ ಸಾಧ್ಯತೆಯನ್ನು ತೆರೆದಿಟ್ಟರು. ಅನಂತರ ಹೊಸ ತಂತ್ರಜ್ಞಾನಗಳ ಸಹಾಯದಿಂದ ಕಾರ್ಲ್ ಲ್ಯಾಂಡ್‌ಸ್ಟೈನರ್ ಮಾನವನ ರಕ್ತದಲ್ಲಿ ಅ,ಆ,O ಮೂರು ಗುಂಪುಗಳನ್ನು ಸಂಶೋಧಿಸಿದರು. ಆ ಬಳಿಕ ಮಾನವರಲ್ಲಿ ರಕ್ತ ವರ್ಗಾವಣೆಯು ಪ್ರಾಮುಖ್ಯ ಪಡೆದುಕೊಂಡಿತು. 2000ನೇ ಇಸವಿಯಲ್ಲಿ ವಿಶ್ವ ಆರೋಗ್ಯ ದಿನದ ಯಶಸ್ಸಿನ ಬಳಿಕ 2005ರ ಮೇಯಲ್ಲಿ ನಡೆದ 58ನೇ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಪ್ರತೀ ವರ್ಷ ಜೂ.14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
ಬಡದೇಶಗಳನ್ನು ಕಾಡುತ್ತಿದೆ ರಕ್ತದ ಕೊರತೆ!
2009ರ ಜೂನ್‌ನಲ್ಲಿ ಹೊರಡಿಸಲಾದ ಮೆಲ್ಬರ್ನ್ ಡಿಕ್ಲರೇಶನ್ ನಲ್ಲಿ 2020ರ ಹೊತ್ತಿಗೆ ಸ್ವಯಂಪ್ರೇರಿತವಾಗಿ ಸಂಗ್ರಹ ವಾದ ರಕ್ತವನ್ನು ಎಲ್ಲ ದೇಶಗಳಿಗೆ ಪೂರೈಸುವ ಗುರಿಯನ್ನು ಹೊಂದ ಲಾಯಿತು. ಆದರೆ ಇಂದಿಗೂ ಈ ಗುರಿಯನ್ನು ತಲು ಪಲು ಸಾಧ್ಯ ವಾಗಿಲ್ಲ. ಮುಂದುವರಿದ ದೇಶಗಳಲ್ಲಿ ರಕ್ತದಾನದ ಮಹತ್ವ ಮತ್ತು ಅದರ ಅಗತ್ಯತೆಯ ಬಗೆಗೆ ಜನರಲ್ಲಿ ಜಾಗೃತಿ ಮೂಡಿದ್ದು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಲು ಸ್ವಯಂ ಪ್ರೇರಿತ ರಾಗಿ ಮುಂದೆ ಬರುತ್ತಿದ್ದಾರೆ. ಆದರೆ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಲ್ಲಿನ್ನೂ ರಕ್ತದಾನದ ಬಗೆಗೆ ಜನರಲ್ಲಿ ಅರಿವು ಮೂಡಿಲ್ಲ. ಈ ಕಾರಣದಿಂದಾಗಿ ರಕ್ತದ ತೀವ್ರ ಕೊರತೆ ಈ ದೇಶಗಳನ್ನು ಬಾಧಿಸುತ್ತಿ¤ದೆ.
ಈ ಬಾರಿಯ ಧ್ಯೇಯ
ರಕ್ತದಾನದಿಂದ ಜೀವ ಉಳಿಸುವಲ್ಲಿ ಪ್ರತೀ ದಾನವು ಮಹತ್ವದ ಪಾತ್ರ ವಹಿಸುತ್ತದೆ. ಈ ಬಾರಿ “ರಕ್ತ ನೀಡಿ, ಪ್ಲಾಸ್ಮಾ ನೀಡಿ ಜೀವವನ್ನು ಹಂಚಿಕೊಳ್ಳಿ, ಆಗಾಗ ಹಂಚಿಕೊಳ್ಳುತ್ತಿರಿ’
ಎಂಬ ಧ್ಯೇಯದೊಂದಿಗೆ ಜೀವನಪೂರ್ತಿ ರಕ್ತದ ಆವಶ್ಯಕತೆಯಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಅಲ್ಜೀರಿಯಾ ದೇಶವು ಈ ಬಾರಿಯ ರಕ್ತದಾನ ದಿನದ ಆತಿಥ್ಯವನ್ನು ವಹಿಸಿಕೊಂಡಿದೆ.
ಸರಕಾರಗಳಿಂದ ಬೇಕಿದೆ ಇನ್ನಷ್ಟು ಉತ್ತೇಜನ
ಹಲವಾರು ದೇಶಗಳಲ್ಲಿ ಸೂಕ್ತ ಸಮಯಕ್ಕೆ ರಕ್ತ ದೊರಕದೆ ರೋಗಿ ಗಳು ಅಥವಾ ಗಾಯಾಳುಗಳು ರಕ್ತದ ಕೊರತೆಯಿಂದ ಸಾಯು ತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ರಕ್ತದ ಆವಶ್ಯಕತೆ ಇರುವವರೆಲ್ಲರಿಗೂ ರಕ್ತವನ್ನು ಪೂರೈಸುವಂತಹ ಯೋಜನೆ ಗಳನ್ನು ಸರಕಾರದ ಆರೋಗ್ಯ ಸೇವೆಗಳು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಾಕೀತು ಮಾಡಿದೆ. 2018ರ ಅಂಕಿ ಅಂಶದ ಪ್ರಕಾರ 171ರಲ್ಲಿ 125 ದೇಶಗಳು ರಕ್ತದ ಪ್ರಾಮುಖ್ಯದ ಕುರಿ ತಾದ ನೀತಿ ಗಳನ್ನು ಹೊಂದಿವೆ ಹಾಗೂ 113 ದೇಶಗಳು ರಕ್ತ ವರ್ಗಾ ವಣೆಯ ಸುರಕ್ಷೆ ಹಾಗೂ ಗುಣಮಟ್ಟದ ಬಗ್ಗೆ ನೀತಿ ರೂಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.