ಸಂಸ್ಕೃತಿ, ಸಂಸ್ಕಾರಗಳ ಮೇರು ಕಲೆ ಯಕ್ಷಗಾನ


Team Udayavani, Jun 14, 2023, 8:08 AM IST

yakshagana

ನಮ್ಮ ಸಂಸ್ಕೃತಿಯ ಧಾರ್ಮಿಕ ಇತಿಹಾಸಗಳು ಉಳಿಯಬೇಕಾದರೆ ಯಕ್ಷಗಾನದಂತಹ ಕಲೆ ಗಳ ಪಾತ್ರ ಅತೀ ಮಹತ್ವದ್ದಾಗಿದೆ. ಇಂದಿನ ಕಾಲಘಟ್ಟದಲ್ಲಿ ಯುವ ಸಮುದಾಯವು ಯಕ್ಷಗಾನ ಕಲೆಯತ್ತ ಹೆಚ್ಚಿನ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದದೇ ಇರುವು ದರಿಂದ ಅವರಲ್ಲಿ ಸಂಸ್ಕಾರಗಳ ಕೊರತೆ ಎದ್ದು ಕಾಣುವಂತಾಗಿದೆ.

ಯಕ್ಷಗಾನ ಕಲೆಯು ನಮ್ಮ ಪುರಾಣದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವುದರ ಜತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಸಜ್ಜನಿಕೆಯ ನಡವಳಿಕೆಗಳಿಗೆ ಪ್ರೇರಣಾದಾಯಕವಾಗಿದೆ.

ತಾಳಬದ್ಧವಾದ ನಾಟ್ಯದಿಂದ, ಪ್ರಾಸ ಬದ್ಧವಾದ ಸಂಗೀತ ಗಾಯನದಿಂದ ಪಾರಂ ಪರಿಕವಾಗಿ ಯಕ್ಷಗಾನ ಕಲೆಯು ಬೆಳೆದು ಬಂದಿದೆ. ಪಾರಮಾರ್ಥಿಕ ಹಾಗೂ ಆಧ್ಯಾ ತ್ಮಿಕವಾದ ಒಂದು ದೈವಿಕ ಶಕ್ತಿಯು ಯಕ್ಷಗಾನ ಕಲೆಯಲ್ಲಿ ಅಂತರ್ಗತವಾಗಿದೆ. ಗತಕಾಲದಲ್ಲಿ ನಡೆದಂತಹ ಮಹಾಭಾರತ, ರಾಮಾಯಾಣ ಹಾಗೂ ಅನೇಕ ಪುಣ್ಯ ಕಥೆಗಳನ್ನು ನಾವು ಯಕ್ಷಗಾನದ ಮೂಲಕ ಕಣ್ತುಂಬಿಕೊಂಡು ಧಾರ್ಮಿಕ ಭಾವನೆಗಳಿಂದ ಕೃತಾರ್ಥ ರಾಗುತ್ತೇವೆ.

ಯಕ್ಷಗಾನವನ್ನು ನಾವು ನಿರಂತರ ವಾಗಿ ಪ್ರೋತ್ಸಾಹಿಸಿದ್ದೇ ಆದರೆ ಈ ಕಲೆಯನ್ನು ಶಾಶ್ವತವಾಗಿ ಉಳಿಸಬಹುದು. ಯಕ್ಷಗಾನ ಕಲೆಗೆ ನಾವು ಪ್ರೋತ್ಸಾಹದ ಮೂಲಕ ನೆಲೆಯನ್ನು ಕೊಟ್ಟು ಅಮೃತ ಶಿಲೆಯಾಗಿ ಉಳಿಸಿದರೆ ಧರ್ಮದ ಸಾಮ್ರಾಜ್ಯವನ್ನು ನಮ್ಮ ಆಧುನಿಕತೆಯಲ್ಲಿ ಕಾಣಲು ಸಾಧ್ಯ. ಕಲಾಕ್ಷೇತ್ರದಲ್ಲಿ ಒಂದು ವ್ಯಕ್ತಿಯ ಸೃಜನಶೀಲ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಕ್ರಿಯಾಶೀಲ ಮನೋಭಾವನೆಯಿಂದ ಕಲೆಗೆ ವಿಶೇಷ ಆಸಕ್ತಿಯನ್ನು ಕೊಟ್ಟಲ್ಲಿ ಕಲಾ ಸರಸ್ವತಿಯು ಬಹಳ ಬೇಗನೆ ಒಲಿಯುತ್ತಾಳೆ ಎಂಬ ನಂಬಿಕೆಯಲ್ಲಿ ಎರಡು ಮಾತಿಲ್ಲ. ಶ್ರದ್ಧಾಪೂರ್ವಕ ಭಕ್ತಿ ಮಾರ್ಗದಿಂದ ಯಕ್ಷಗಾನ ಸೇವೆಯ ಮುಖೇನ ಭಗವಂತನ ಸಾಮೀಪ್ಯಕ್ಕೆ ಹೋಗಬಹುದು.

ಯಕ್ಷಗಾನ, ನಾಟಕ, ಭಜನೆ, ಪೂಜೆ-ಪುನಸ್ಕಾರಗಳು, ಯಜ್ಞ-ಯಾಗಾದಿಗಳು ಭಗವಂತನ ಸಾನಿಧ್ಯವನ್ನು ಬೇಗನೆ ತಲುಪಿ ಭಕ್ತರಿಗೆ ಸಾಕ್ಷಾತ್ಕಾರದ ಮೂಲಕ ಆರೋಗ್ಯಪೂರ್ಣ ಜೀವನಕ್ಕೆ ಪ್ರೇರಣೆಯಾಗುತ್ತದೆ. ಆಂತರಿಕವಾಗಿ ಧಾರ್ಮಿಕ ಪ್ರಜ್ಞೆಯುಂಟಾಗಿ ಜೀವನದಲ್ಲಿ ಧರ್ಮವನ್ನು ಪರಿಪಾಲಿಸಲು ಪರೋಕ್ಷವಾದ ಸಂದೇಶವು ನಮ್ಮಲ್ಲಿ ಜಾಗೃತಿಯನ್ನು ಉಂಟು ಮಾಡುತ್ತದೆ.

ಕಲಾಭಿಮಾನಿಗಳಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ನಾವು ಶಾಶ್ವತವಾದ ಕೊಡುಗೆಯನ್ನು ಕೊಟ್ಟಲ್ಲಿ ಸಮಾಜದಲ್ಲಿ ಧರ್ಮ ಜಾಗೃತಿ ಉಂಟಾಗಿ ಒಂದು ಸುವ್ಯಸ್ಥಿತ ನೆಮ್ಮದಿಯ ಮಾನವ ಜೀವನಕ್ಕೆ ನಾಂದಿಯಾಗಬಹುದು. ಒಬ್ಬ ಕಲಾವಿದನನ್ನು ಸಮಾಜವು ಬೇಗನೆ ಗುರುತಿಸಿ ಗೌರವವನ್ನು ಕೊಡುವಷ್ಟರ ಮಟ್ಟಿಗೆ ಕಲೆಗೆ ತನ್ನದೇ ದೈವಿಕವಾದ ಶಕ್ತಿಯು ಇದೆ. ತಮ್ಮದೇ ಆದ ಆಕರ್ಷಕ ಕಲಾ ಶೈಲಿಯಿಂದ ಅನೇಕ ಕಲಾವಿದರು, ಕಲಾಭಿಮಾನಿ ಬಳಗದ ಸ್ಮತಿ ಪಟಲದ ನೆನಪಿನಂಗಳದಲ್ಲಿ ಉಳಿದಿರುತ್ತಾರೆ. ಕನಿಷ್ಠ ಶಿಕ್ಷಣ ಪಡೆದವರೂ ಕಲಾಕ್ಷೇತ್ರದಲ್ಲಿ ಮೇರು ಕಲಾವಿದರಾಗಿ ಬೆಳೆದು ಇಂದಿನ ಯುವ ಸಮುದಾಯಕ್ಕೆ ಪ್ರೇರಕರಾಗಿದ್ಧಾರೆ.

ಕಲೆಯಲ್ಲಿ ಶ್ರದ್ಧೆ, ಭಕ್ತಿಗಳ ಜತೆಗೆ ವೃತ್ತಿ ಗೌರವವನ್ನು ಕಾಪಾಡಿಕೊಂಡು ಸಾಧನಾಶೀಲ ಕಲಾವಿದರಾಗಿ ಗುರುತಿಸಿಕೊಂಡಿರುವ ಅನೇಕ ಕಲಾವಿದರನ್ನು ನಾವು ಕಲಾಕ್ಷೇತ್ರದಲ್ಲಿ ಕಾಣುತಿದ್ದೇವೆ.

ಇಂತಹ ಒಂದು ಅದ್ಭುತ ಸಮಾಜ ಸುಧಾರಣೆ ಕಾರ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಸರಕಾರವು ನಿರೀಕ್ಷಿತ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿಲ್ಲ. ಕಲಾವಿದರಿಗೆ ಜೀವನ ನಿರ್ವಹಣೆಗೆ ಬೇಕಾದ ಸೌಲಭ್ಯಗಳು ಮತ್ತು ಆವಶ್ಯಕತೆಗಳಿಗೆ ಸ್ಪಂದಿಸದಿರುವುದು ಬಹಳ ಬೇಸರದ ಸಂಗತಿ. ಕಳೆದ ಹಲವಾರು ವರ್ಷಗಳಿಂದ ಸರಕಾರವು ಕಲಾಕ್ಷೇತ್ರವನ್ನು ಅವಗಣಿಸುತ್ತಲೇ ಬಂದಿದೆ. ಅನೇಕ ಪ್ರಸಿದ್ಧ ಮೇಳಗಳು ಆರ್ಥಿಕವಾಗಿ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದರೂ ಕಲಾವಿದರಿಗೆ ಸಮರ್ಪಕವಾದ ಸೌಲಭ್ಯಗಳು ಸಿಗುತ್ತಿಲ್ಲ. ಯಕ್ಷಗಾನ ಪರಂಪರೆ ಉಳಿಯಬೇಕಾದರೆ ಸರಕಾರವು ಈ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಿದೆ.

ಬಡ ಕಲಾವಿದರ ಬದುಕಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಮುಖ್ಯವಾಗಿ ನಿವೃತ್ತಿ ವೇತನ, ಗೃಹ ಸಾಲ, ಮಕ್ಕಳ ಶಿಕ್ಷಣ ಮೊದಲಾದ ಸೌಲಭ್ಯಗಳನ್ನು ಕಾರ್ಮಿಕ ಕಾನೂನು ನಿಬಂಧನೆಗಳಿಗೆ ಒಳಪಟ್ಟು ಜಾರಿ ಮಾಡಬೇಕು. ಸಾತ್ವಿಕ ಬದುಕಿಗೆ ಸಾರ್ಥಕತೆಯನ್ನು ಕೊಡುವ ಯಕ್ಷಗಾನವನ್ನು ಉಳಿಸಿ, ಬೆಳೆಸಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸೋಣ.

ಹರಿಶ್ಚಂದ್ರ, ಕುಪ್ಪೆಪದವು

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.