High Court;ತನಿಖೆಗೆ ಸಹಕಾರ ನೀಡದಿದ್ದರೆ ಫೇಸ್‌ಬುಕ್‌ ಬಂದ್‌

ಫೇಸ್‌ಬುಕ್‌ ಖಾತೆಯಲ್ಲಿ ಸೌದಿ ದೊರೆ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಪ್ರಕರಣ

Team Udayavani, Jun 15, 2023, 6:20 AM IST

High Court;ತನಿಖೆಗೆ ಸಹಕಾರ ನೀಡದಿದ್ದರೆ ಫೇಸ್‌ಬುಕ್‌ ಬಂದ್‌

ಬೆಂಗಳೂರು: ಸೌದಿ ಅರೇಬಿಯಾದ ದೊರೆ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಬರೆದ ಆರೋಪದಲ್ಲಿ ಕಳೆದ 3 ವರ್ಷಗಳಿಂದ ಸೌದಿ ಜೈಲಿನಲ್ಲಿ ಬಂಧನದಲ್ಲಿರುವ ಮಂಗಳೂರು ಮೂಲದ ಶೈಲೇಶ್‌ ಕುಮಾರ್‌ ಅವರ ಪ್ರಕರಣದ ತನಿಖೆಗೆ ಸೂಕ್ತ ಸಹಕಾರ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಾಚರಣೆ ಸ್ಥಗಿತಗೊಳಿಸಲು ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಅನಾಮಿಕರು ತಮ್ಮ ಪತಿಯ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿ ಸೌದಿ ದೊರೆಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಪ್ರಕರಣ ಸಂಬಂಧ ಸೌದಿ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ 3 ವರ್ಷಗಳಿಂದ ಜೈಲು ವಾಸ ಆನುಭವಿಸುತ್ತಿರುವ ತನ್ನ ಪತಿ ಶೈಲೇಶ್‌ ಕುಮಾರ್‌ಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೋರಿ ಅವರ ಪತ್ನಿ ಬಿಕರ್ನಕಟ್ಟೆ ನಿವಾಸಿ ಕವಿತಾ ಶೈಲೇಶ್‌ ಸಲ್ಲಿಸಿದ್ದ ಅರ್ಜಿಯುನ್ಯಾ| ಕೃಷ್ಣ ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆಗೆ ಹಾಜರಾಗಿದ್ದ ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಜೈನ್‌, ಫೇಸ್‌ಬುಕ್‌ ಸಂಸ್ಥೆ ಸೂಕ್ತ ಸಹಕಾರ ನೀಡದ ಕಾರಣ ಪ್ರಕರಣ ನಿಧಾನಗತಿಯಲ್ಲಿ ಸಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ತನಿಖೆಗೆ ಏಕೆ ಸಹಕಾರ ನೀಡುತ್ತಿಲ್ಲ ಎಂದು ಫೇಸ್‌ಬುಕ್‌ ಸಂಸ್ಥೆ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ತಮಗೆ ನಿಖರ ಮಾಹಿತಿ ಇಲ್ಲ ಎಂದು ಫೇಸ್‌ಬುಕ್‌ ಸಂಸ್ಥೆ ಪರ ವಕೀಲರು ಉತ್ತರಿಸಿದರು. ಇದರಿಂದ ಅಕ್ರೋಶಗೊಂಡ ನ್ಯಾಯಪೀಠ, ಪ್ರಕರಣದ ತನಿಖೆಗೆ ಸೂಕ್ತ ಸಹಕಾರ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಾಚರಣೆಯನ್ನೇ ನಿಲ್ಲಿಸಲು ಆದೇಶ ನೀಡಬೇಕಾಗುತ್ತದೆ ಎಂದು ಮೌಖೀಕ ಎಚ್ಚರಿಕೆ ನೀಡಿತು.

ಬಳಿಕ ಎಚ್ಚೆತ್ತುಕೊಂಡ ಫೇಸ್‌ಬುಕ್‌ ಪರ ವಕೀಲರು ಪ್ರಕರಣದ ತನಿಖೆಗೆ ಅಗತ್ಯ ಸಹಕಾರ ನೀಡಲಾಗುವುದು ಮತ್ತು ಈವರೆಗಿನ ಮಾಹಿತಿ ನೀಡಲು ಒಂದು ವಾರ ಕಾಲಾವಕಾಶ ಬೇಕೆಂದು ಕೋರಿದರು.

ವಿಚಾರಣೆ ವೇಳೆ ಕವಿತಾ ಶೈಲೇಶ್‌ಪರ ಹಿರಿಯ ವಕೀಲ ಪಿ.ಪಿ ಹೆಗ್ಡೆಪ್ರಕರಣದ ಎಲ್ಲ ವಿವರ ನೀಡಿದರಲ್ಲದೆ, ವಿದೇಶದಲ್ಲಿ ಉದ್ಯೊಗ ನಿರ್ವಹಿಸುತ್ತಿರುವ ಭಾರತೀಯ ಪ್ರಜೆಗಳಿಗೆ ತೊಂದರೆ ನೀಡಲು ನಕಲಿಫೇಸ್‌ಬುಕ್‌ ಖಾತೆ ತೆರೆದು ಅವಹೇಳನಕಾರಿ ಫೋಸ್ಟ್‌ ಹಾಕಿದ ಅನೇಕ ಪ್ರಕರಣಗಳು ನಡೆದಿವೆ. ಉಡುಪಿಯ ಹರೀಶ್‌ ಬಂಗೇರ ವಿರುದ್ಧವೂ 2019ರಲ್ಲಿ ಇದೇ ಷಡ್ಯಂತ್ರ ನಡೆದಿತ್ತು. ಆತ ಸೌದಿ ಅರೇಬಿಯಾದಲ್ಲಿ ಬಂಧನಕ್ಕೆ ಒಳಗಾಗಿ 19 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ. ಮೂಡುಬಿದರೆಯ ಮೂವರು, ಹರೀಶ್‌ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪೋಸ್ಟ್‌ ಮಾಡಿದ ವಿಚಾರ ಉಡುಪಿ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಅನಂತರ ಪೊಲೀಸರು ಸಲ್ಲಿಸಿದ್ದ ವರದಿ ಆಧರಿಸಿ ಕೇಂದ್ರ ಸರಕಾರವು ಹರೀಶ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಸಿತ್ತು. ಈ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಸೂಕ್ತ ತನಿಖೆ ನಡೆಸದ ಕಾರಣ ಶೈಲೇಶ್‌ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಘಟನೆ ಕುರಿತು ಸೂಕ್ತ ಮಾಹಿತಿ ಒಳಗೊಂಡ ವರದಿಯನ್ನು ಫೇಸ್‌ಬುಕ್‌ ಸಂಸ್ಥೆ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಭಾರತೀಯ ಪ್ರಜೆಯು ಸುಳ್ಳು ಪ್ರಕ
ರಣದಲ್ಲಿ ವಿದೇಶದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಬೇಕು. ಮಂಗಳೂರು ಪೊಲೀಸರು ಸಹ ಈ ಪ್ರಕರಣ ಸಂಬಂಧಸಮರ್ಪಕ ತನಿಖೆ ಕೈಗೊಂಡು ವರದಿಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂ. 22ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್

Heavy-rain

Heavy Rain: ಕರಾವಳಿ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ

1-aaaa

Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ‌ ಪತ್ತೆ

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-weewq

Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.