Bollywood: “ಈತನ ಸಿನಿಮಾದಲ್ಲಿ ಸಾವಿನ ದೃಶ್ಯವನ್ನು ಮಾಡಲು ಬಯಸುತ್ತೇನೆ”: ಅನುರಾಗ್ ಕಶ್ಯಪ್
Team Udayavani, Jun 15, 2023, 10:53 AM IST
ಮುಂಬಯಿ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕಮಾಯಿ ಮಾಡುತ್ತವೆ. ಆ ಸಿನಿಮಾಗಳು ದಕ್ಷಿಣ ಭಾರತ ಮಾತ್ರವಲ್ಲದೆ, ಇತರ ಸಿನಿರಂಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ.
ಬಾಲಿವುಡ್ ನ ಹಿಟ್ ನಿರ್ದೇಶಕರಲ್ಲಿ ಒಬ್ಬರಾಗಿ ಅನುರಾಗ್ ಕಶ್ಯಪ್ ಲೋಕೇಶ್ ಕನಕರಾಜ್ ಅವರ ಸಿನಿಮಾಗಳ ಬಗ್ಗೆ ಮಾತನಾಡಿರುವ ಮಾತುಗಳು ಸಿನಿವಲಯದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.
ಇತ್ತೀಚೆಗೆ “ಇಂಡಿಯಾಗ್ಲಿಟ್ಜ್” ಜೊತೆ ಮಾತನಾಡಿದ ಅವರು “ಲೋಕೇಶ್ ಅವರ ಚಿತ್ರದಲ್ಲಿ ನಾನು ಸಾವಿನ ದೃಶ್ಯವನ್ನು ಮಾಡಲು ಬಯಸುತ್ತೇನೆ. ಅವರು ಸಿನಿಮಾದಲ್ಲಿ ನಟರಿಗೆ ಸಾವನ್ನು ಕೂಡ ವೈಭವವಾಗಿ ನೀಡುತ್ತಾರೆ. ಹಾಗಾಗಿ ಅವರ ಯಾವುದಾದರೂ ಒಂದು ಚಿತ್ರದಲ್ಲಿ ನಾನು ಸಾಯಲು ಬಯಸುತ್ತೇನೆ. ನನಗೆ ಕೇವಲ ಪಾತ್ರ ಬೇಕಿಲ್ಲ. ಅವರ ಚಿತ್ರದಲ್ಲಿ ನಾನು ವೈಭವಯುತವಾಗಿ ಸಾಯಬೇಕು. ” ಎಂದು ಹೇಳಿದ್ದಾರೆ.
ಇದನ್ನೂ ಓದಿ: “ಸಪ್ತ ಸಾಗರದಾಚೆ ಎಲ್ಲೋ” : ಎರಡು ಭಾಗದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಸಿಂಪಲ್ ಸ್ಟಾರ್
ಇದಲ್ಲದೆ ಇತ್ತೀಚೆಗೆ ತೆರೆಕಂಡ ವೆಟ್ರಿಮಾರನ್ ಅವರ “ವಿದುತಲೈ” ಚಿತ್ರದ ಬಗ್ಗೆಯೂ ಅವರು ಮಾತನಾಡಿದ್ದಾರೆ. “ನನಗೆ “ವಿದುತಲೈ” ಸಿನಿಮಾ ತುಂಬಾ ಇಷ್ಟವಾಯಿತು. ಎರಡನೇ ಭಾಗವನ್ನು ನೋಡಲು ಕಾಯುತ್ತಿದ್ದೇನೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಚೆನ್ನಾಗಿ ನಟಿಸಿದ್ದಾರೆ. ಆದರೆ ನನಗೆ ನಟನೆಯ ಮೂಲಕ ಅಚ್ಚರಿ ಮೂಡಿಸಿದ್ದು ಸೂರಿ ಮತ್ತು ರಾಜೀವ್ ಮೆನನ್. “ವಿದುತಲೈ” ವೆಟ್ರಿಮಾರನ್ ಅವರ ಇಲ್ಲಿಯವರೆಗಿನ ಬೆಸ್ಟ್ ಮೂವಿಗಳಲ್ಲಿ ಒಂದು” ಎಂದು ಹೇಳಿದರು.
ಅನುರಾಗ್ ಕಶ್ಯಪ್ ಅವರ “ಕೆನಡಿ” ಸಿನಿಮಾ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಪ್ರದರ್ಶನಗೊಂಡು ಪ್ರಶಂಸೆ ಪಡೆದುಕೊಂಡಿದೆ. ಇದೇ ವರ್ಷ ಸಿಡ್ನಿ ಚಲನಚಿತ್ರೋತ್ಸವದಲ್ಲೂ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈ ಸಿನಿಮಾದಲ್ಲಿ ರಾಹುಲ್ ಭಟ್ ಮತ್ತು ಸನ್ನಿ ಲಿಯೋನ್ ನಟಿಸಿದ್ದಾರೆ. ಸಿನಿಮಾದ ಥಿಯೇಟರ್ ರಿಲೀಸ್ ಡೇಟ್ ಇನ್ನು ಅನೌನ್ಸ್ ಆಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.