‘ಪಾನ್‌ ಮಸಾಲ’ ಕ್ರಿಕೆಟಿಗರ ವಿರುದ್ಧ ಗೌತಮ್ ಗಂಭೀರ್‌ ಕೆಂಡಾಮಂಡಲ

Team Udayavani, Jun 15, 2023, 6:40 PM IST

gautam gambhir

ನವದೆಹಲಿ: ಭಾರತದ ಖ್ಯಾತ ಮಾಜಿ ಕ್ರಿಕೆಟಿಗ, ಸಂಸದ ಗೌತಮ್‌ ಗಂಭೀರ್‌ ಪಾನ್‌ ಮಸಾಲ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಲ ಭಾರತೀಯ ಕ್ರಿಕೆಟಿಗರ ವಿರುದ್ಧ ಹಿಗ್ಗಾಮುಗ್ಗಾ ಕಿಡಿಕಾರಿದ್ದಾರೆ. ಆದರೆ ಅವರು ಯಾವ ಕ್ರಿಕೆಟಿಗರ ಹೆಸರನ್ನೂ ಉಲ್ಲೇಖೀಸಿಲ್ಲ.

ಪಾನ್‌ ಮಸಾಲ ಕಂಪನಿಯೊಂದರ ಬೆಳ್ಳಿ ಪದರ ಲೇಪಿತ ಏಲಕ್ಕಿ ಉತ್ಪನ್ನವೊಂದಕ್ಕೆ ಸುನೀಲ್‌ ಗಾವಸ್ಕರ್‌, ಕಪಿಲ್‌ ದೇವ್‌, ವೀರೇಂದ್ರ ಸೆಹ್ವಾಗ್‌ ಜಾಹೀರಾತು ನೀಡಿದ್ದಾರೆ. ಇದು ಬಾಯಿಯನ್ನು ತಾಜಾ ಆಗಿಡುವ ಒಂದು ಉತ್ಪನ್ನ. ಈ ಜಾಹೀರಾತಿನ ಮೂಲಕ ಪರೋಕ್ಷವಾಗಿ ಪಾನ್‌ ಮಸಾಲ ಕಂಪನಿಯನ್ನೇ ಪ್ರೋತ್ಸಾಹಿಸಿರುವುದು ಗಂಭೀರ್‌ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

“ಕ್ರಿಕೆಟಿಗನೊಬ್ಬ ಪಾನ್‌ ಮಸಾಲ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದನ್ನು ನಾನೆಂದೂ ನೋಡಿರಲಿಲ್ಲ. ಇದು ಅತ್ಯಂತ ನಾಚಿಕೆಗೇಡಿನ, ದುರದೃಷ್ಟಕರ ಸಂಗತಿ. ಅದಕ್ಕೆ ನಾನು ಹೇಳುವುದು ನಿಮ್ಮ ಮಾದರಿ ವ್ಯಕ್ತಿಯನ್ನು ಸರಿಯಾಗಿ ಆಯ್ದುಕೊಳ್ಳಿ ಎಂದು. ನೀವು ಯಾವ ಉದಾಹರಣೆ ಹಾಕಿಕೊಡುತ್ತಿದ್ದೀರಿ ಎಂಬ ಅರಿವಿದೆಯಾ ನಿಮಗೆ?’ ಎಂದು ಗಂಭೀರ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ದಿಗ್ಗಜರ ವಿದಾಯದ ಬಳಿಕ…; ಭಾರತದ ಭವಿಷ್ಯದ ಟೆಸ್ಟ್ ತಂಡ ಹೀಗೆ ಇರುತ್ತದೆ..

“ಒಬ್ಬ ವ್ಯಕ್ತಿಯನ್ನು ಅವನ ಹೆಸರಿನಿಂದಲ್ಲ, ಅವರ ಕೆಲಸದಿಂದ ಗುರ್ತಿಸುತ್ತಾರೆ. ನಿಮ್ಮನ್ನು ಕೋಟ್ಯಂತರ ಮಕ್ಕಳು ನೋಡುತ್ತಿದ್ದಾರೆ. ಪಾನ್‌ ಮಸಾಲ ಜಾಹೀರಾತಿನಿಂದ ನೀವು ಗಳಿಸುವ ಹಣ ಮುಖ್ಯವಲ್ಲ. ಹಣ ಮಾಡುವುದಕ್ಕೆ ಬೇಕಾದಷ್ಟು ಇತರೆ ದಾರಿಗಳೂ ಇವೆ. ಹೀಗೆಲ್ಲ ಮಾಡುವುದಕ್ಕಿಂತ ದೊಡ್ಡ ಮೊತ್ತವನ್ನು ಬಿಟ್ಟುಕೊಡುವ ಧೈರ್ಯವಿರಬೇಕು. 2018ರಲ್ಲಿ ನಾನು ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವ ತೊರೆದಾಗ ಪಾನ್‌ ಮಸಾಲ ಕಂಪನಿಯ ಜಾಹೀರಾತಿನಲ್ಲಿ ಪಾಲ್ಗೊಳ್ಳಲು 3 ಕೋಟಿ ರೂ. ಆಫ‌ರ್‌ ಬಂದಿತ್ತು. ಆಗದನ್ನು ತಿರಸ್ಕರಿಸಿದ್ದೆ. ಸಚಿನ್‌ ತೆಂಡುಲ್ಕರ್‌ಗೆ 20, 30 ಕೋಟಿ ರೂ. ಆಮಿಷಗಳು ಬಂದಿದ್ದವು. ಅವರೂ ಅದನ್ನು ತಿರಸ್ಕರಿಸಿದ್ದರು. ಅದಕ್ಕೆ ಸಚಿನ್‌ ಮಾದರಿ ವ್ಯಕ್ತಿ’ ಎಂದು ಗಂಭೀರ್‌ ಹೇಳಿದ್ದಾರೆ.

ಆನ್‌ ಲೈನ್‌ ರಮ್ಮಿ ಆಟ, ಬೆಟ್ಟಿಂಗ್‌, ಪಾನ್‌ ಮಸಾಲದಂತಹ ಜಾಹೀರಾತಿನಲ್ಲಿ ಸಿನಿಮಾ ನಟರು, ಕ್ರಿಕೆಟಿಗರು ಕಾಣಿಸಿಕೊಳ್ಳುವುದರ ವಿರುದ್ಧ ಜನರೂ ಬೇಸರೊಂಡಿದ್ದಾರೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಟಾಪ್ ನ್ಯೂಸ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rwqeqwqw

BCCI ಕಾರ್ಯದರ್ಶಿಯಾಗಿ ರೋಹನ್‌ ಜೇಟ್ಲಿ?

1-frr

Ranji; ಕರ್ನಾಟಕ-ಬೆಂಗಾಲ್‌ ಪಂದ್ಯ ನಾಳೆಯಿಂದ: ತಂಡದಲ್ಲಿ ಶಮಿ ಇಲ್ಲ

IPL 2

IPL; ರಿಯಾದ್‌ನಲ್ಲಿ ಮಹಾ ಹರಾಜು?: 204 ಸ್ಥಾನಗಳಿಗೆ ಪೈಪೋಟಿ

ICC

ICC; ವನಿತಾ ಕ್ರಿಕೆಟ್‌ ಫ್ಯೂಚರ್‌ ಪ್ರವಾಸ ವೇಳಾಪಟ್ಟಿ ಪ್ರಕಟ

Hockey

National Hockey; ಕರ್ನಾಟಕಕ್ಕೆ ಜಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.