Biparjoy ಅಬ್ಬರ; ಗುಜರಾತ್ ಕರಾವಳಿಯಲ್ಲಿ ಬಲವಾದ ಗಾಳಿ, ಭಾರೀ ಮಳೆ
ಮುಂಬೈನಲ್ಲಿ ಎತ್ತರದ ಅಲೆಗಳು ಮತ್ತು ರಭಸದ ಗಾಳಿ
Team Udayavani, Jun 15, 2023, 8:39 PM IST
ಹೊಸದಿಲ್ಲಿ: ಬಿಪರ್ ಜಾಯ್ ಚಂಡಮಾರುತದ ಪರಿಮಾಣವಾಗಿ ಗುರುವಾರ ಸಂಜೆಯಿಂದ ಗುಜರಾತ್ ಕರಾವಳಿಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಮತ್ತು ಭಾರೀ ಮಳೆಯನ್ನು ಸುರಿಯುತ್ತಿದೆ. ಪ್ರಕ್ರಿಯೆಯು ಮಧ್ಯರಾತ್ರಿಯವರೆಗೆ ಮುಂದುವರಿಯುವ ನಿರೀಕ್ಷೆಯಿದೆ.
ಸೈಕ್ಲೋನ್ ಇನ್ನೂ 70 ಕಿಮೀ ದೂರದಲ್ಲಿದೆ ಮತ್ತು ಕರಾವಳಿಯತ್ತ ಚಲಿಸುತ್ತಿದೆ. ಚಂಡಮಾರುತವು ಸಮುದ್ರವನ್ನು ದಾಟಿ ಮಧ್ಯರಾತ್ರಿಯ ವೇಳೆಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಕಚೇರಿಯ ಮುಖ್ಯಸ್ಥ ಡಾ ಎಂ ಮೊಹಾಪಾತ್ರ ಹೇಳಿದ್ದಾರೆ.
ಬಿಪರ್ ಜಾಯ್ ಅನ್ನು ವರ್ಗ 3 “ಅತ್ಯಂತ ತೀವ್ರ ಚಂಡಮಾರುತ” ಎಂದು ವರ್ಗೀಕರಿಸಲಾಗಿದೆ ಮತ್ತು 115-125 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಗುಜರಾತ್ನ ಭುಜ್ ಮತ್ತು ಕಚ್ನಲ್ಲಿ ಬಲವಾದ ಗಾಳಿ ಬೀಸುತ್ತಿದೆ ಮತ್ತು ಕರಾವಳಿ ಪ್ರದೇಶಕ್ಕೆ ಹೆಚ್ಚಿನ ಉಬ್ಬರವು ಅಪ್ಪಳಿಸಿದೆ. ದ್ವಾರಕಾ, ಮಾಂಡವಿ ಮತ್ತು ಮೋರ್ಬಿಯಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದೆ. ಮುಂಬೈನಲ್ಲಿ ಎತ್ತರದ ಅಲೆಗಳು ಮತ್ತು ರಭಸದ ಗಾಳಿ ಮುಂದುವರಿದಿದೆ.
ಗುಜರಾತ್ ಕರಾವಳಿಯಲ್ಲಿ ಈಗಾಗಲೇ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಸೇನೆ, ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಸ್ಥಳೀಯ ಜನರಿಗೆ ನೆರವು ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.